ಲಿಂಗದಹಳ್ಳಿ ಗ್ರಾಮ ಪಂಚಾಯತ್ ಆರೋಗ್ಯ ಅಮೃತ ಅಭಿಯಾನದಡಿ ಆರೋಗ್ಯ ತಪಾಸಣೆಗೆ ವಿವಿಧ ಉಪಕರಣ ಗಳನ್ನೊಳಗೊಂಡ ಕಿಟ್ ವಿತರಣೆ…

Spread the love

ಲಿಂಗದಹಳ್ಳಿ ಗ್ರಾಮ ಪಂಚಾಯತ್ ಆರೋಗ್ಯ ಅಮೃತ ಅಭಿಯಾನದಡಿ ಆರೋಗ್ಯ ತಪಾಸಣೆಗೆ ವಿವಿಧ ಉಪಕರಣ ಗಳನ್ನೊಳಗೊಂಡ ಕಿಟ್ ವಿತರಣೆ…

ಕುಷ್ಟಗಿ : ತಾಲ್ಲೂಕಿನ ಲಿಂಗದಹಳ್ಳಿ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿದ ಕೆ.ಹೆಚ್.ಪಿ.ಟಿ ಸಂಸ್ಥೆಯ ವಿಭಾಗ ಅಧಿಕಾರಿಗಳಾದ ಶ್ರೀ ಸುರೇಶ್ ಸರ್ ಮತ್ತು ಜಿಲ್ಲಾ ಸಂಯೋಜಕರಾದ ಶ್ರೀ ಸಿದ್ದಲಿಂಗಯ್ಯ ಹಿರೇಮಠ ಆಗಮಿಸಿ ಹಲವಾರು ಉಪಕರಣಗಳ ಒಳಗೊಂಡ ಕೋವಿಡ್ ಕಿಟ್ ಉಪಯೋಗದ ಬಗ್ಗೆ ವಿಭಾಗ ಅಧಿಕಾರಿಗಳಾದ ಸುರೇಶ್ ಸರ್ ಮಾತನಾಡಿ ಗ್ರಾಮೀಣ ಭಾಗದಲ್ಲಿ  ಕರ್ನಾಟಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕರ್ನಾಟಕ ಹೆಲ್ತ್ ಪ್ರಮೋಷನ್ ಟ್ರಸ್ಟ್ ಸಹಯೋಗದಲ್ಲಿ ಗ್ರಾಮ ಪಂಚಾಯತ್ ಆರೋಗ್ಯ ಅಮೃತ ಅಭಿಯಾನದಡಿ ಆರೋಗ್ಯಕ್ಕೆ ತಪಾಸಣೆಗೆ ಸಂಬಂಧಿಸಿದ ವಿವಿಧ ಉಪಕರಣ ಗಳನ್ನೊಳಗೊಂಡ ಕಿಟ್ ಗಳನ್ನು ಪ್ರತಿಯೊಂದು ಗ್ರಾಮ ಪಂಚಾಯ್ತಿಗಳಿಗೆ ನೀಡಲಾಗಿದೆ. ಇದು ನಮ್ಮೆಲ್ಲರ ಜವಾಬ್ದಾರಿ ಆಗಿರುವುದರಿಂದ. ತಮ್ಮ ತಮ್ಮ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಜನರ  ಆರೋಗ್ಯ ತಪಾಸಣೆಕೈಗೊಳ್ಳಬೇಕು.30 ಆಗಸ್ಟ್ 2021 ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯಿಂದ ” ಗ್ರಾಮ ಪಂಚಾಯಿತಿ ಆರೋಗ್ಯ ಅಮೃತ ಅಭಿಯಾನ”ವನ್ನು ಸಚಿವ ಕೆ.ಎಸ್ ಈಶ್ವರಪ್ಪನವರು ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಉದ್ಘಾಟನೆ ಮಾಡಿದ್ದು ಈಗಾಗಲೇ ಎಲ್ಲರಿಗೂ ತಿಳಿದ ವಿಷಯ. ಸ್ವಾತಂತ್ರ್ಯ ಅಮೃತ ಮಹೋತ್ಸವ ಅಂಗವಾಗಿ ಮಾನ್ಯ ಮುಖ್ಯಮಂತ್ರಿ ಶ್ರೀ ಬಸವರಾಜ್ ಬೊಮ್ಮಾಯಿ ಅವರ ಘೋಷಣೆಯಂತೆ ಈ ಅಭಿಯಾನ ಕೈಗೊಳ್ಳಲಾಗಿದೆ. ಗ್ರಾಮೀಣ ಜನರಿಗೆ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಲು ಹಾಗೂ ಸೌಲಭ್ಯಗಳನ್ನು ಕಲ್ಪಿಸುವುದಕ್ಕಾಗಿ ದೇಶದಲ್ಲೇ ಮೊಟ್ಟ ಮೊದಲ ಬಾರಿಗೆ ಈ ಕಾರ್ಯಕ್ರಮ ರೂಪಿಸಲಾಗಿದೆ.ಮೊದಲ ಹಂತದಲ್ಲಿ ಬೆಳಗಾವಿ. ಬಾಗಲಕೋಟೆ ವಿಜಯನಗರ ಬಳ್ಳಾರಿ. ಚಾಮರಾಜನಗರ. ದಾವಣಗೆರೆ. ಗದಗ. ಕಲಬುರ್ಗಿ. ಕೊಪ್ಪಳ. ಮಂಡ್ಯ. ರಾಯಚೂರು. ವಿಜಯಪುರ ಮತ್ತು ಯದಗಿರಿ ಜಿಲ್ಲೆಗಳ 110 ತಾಲ್ಲೂಕುಗಳ 2816ಗ್ರಾಮ ಪಂಚಾಯಿತಿಗಳಲ್ಲಿ ಅನುಷ್ಠಾನಗೊಳಿಸಲಾಗಿದೆ.ಈಗಾಗಲೇ ವಿತರಿಸಲಾದ ಕೋವಿಡ್ ನಿವಾರಣೆ ಮತ್ತು ಆರೈಕೆ ಕಿಟ್ ಗಳಲ್ಲಿ ಥರ್ಮಲ್ ಸ್ಕ್ಯಾನರ್. ಪಲ್ಸ್ ಆ ಕ್ಸಿ ಮೀಟರ್. (ನಾಡಿ ಆಮ್ಲಜನಕ ಮಾಪಕ) ಡಿಜಿಟಲ್ ಬಿಪಿ ಉಪಕರಣ. ಗ್ಲುಕೋಮೀಟರ್. ಹಿಮೋಗ್ಲೋಬಿನೋ ಮೀಟರ್. ಮಗುವಿನ ಮಧ್ಯೆ ಮೇಲ್ ತೋಳಿನ ಸುತ್ತಳತೆ  ಮಾಪನ ಪಟ್ಟಿ. ಹಾಗೂ  ಡಿಜಿಟಲ್ ತೂಕದ ಯಂತ್ರ ಇವೆಲ್ಲವನ್ನೂ ಒಳಗೊಂಡ ವೈದ್ಯಕೀಯ ಪರಿಕರಗಳನ್ನು ಬಳಸಿ ಜನರನ್ನ ಆರೋಗ್ಯವಂತರನ್ನಾಗಿ ಮಾಡುವುದು ನಮ್ಮೆಲ್ಲರ ಕರ್ತವ್ಯ ಹಾಗೂ ಜವಾಬ್ದಾರಿ ಆಗಿರುತ್ತದೆ. ಸರ್ಕಾರ ಅನುಷ್ಠಾನಗೊಳಿಸಿರುವ ಈ ಕಾರ್ಯಕ್ರಮವನ್ನು ಗ್ರಾಮೀಣ ಅಭಿವೃದ್ಧಿ ಅಧಿಕಾರಿಗಳ ಹಾಗೂ ಆರೋಗ್ಯ ಇಲಾಖೆ ಮತ್ತು ಕರ್ನಾಟಕ ಹೆಲ್ತ್ ಪ್ರಮೋಷನ್ ಟ್ರಸ್ಟ್ ಹಾಗೂ ಆಶಾ ಕಾರ್ಯಕರ್ತೆಯರು ಅಂಗನವಾಡಿ ಕಾರ್ಯಕರ್ತೆಯರು ಊರಿನ ಯುವಕ ಮಂಡಳಿಯವರು ಹಾಗೂ ವಿವಿಧ ಸ್ವ ಸಹಾಯ ಗುಂಪಿನ ಪ್ರತಿನಿಧಿಗಳ ಪಾತ್ರ ಅತ್ಯಮೂಲ್ಯ ವಾಗಿರುತ್ತದೆ. ಈ ಸಭೆಯಲ್ಲಿ ಗ್ರಾಮ ಪಂಚಾಯತ್ ಕಾರ್ಯದರ್ಶಿಗಳು ಸ್ಥಳೀಯ ಊರಿನ ಹಿರಿಯರಾದ ಶ್ರೀ ನಿತ್ಯಾನಂದಗೌಡ ಮಾ. ಪಾಟೀಲ್ ಮತ್ತು ಶ್ರೀ ಯಮನೂರಪ್ಪ ಲಾವಂಡಿ ಮತ್ತು ಸುತ್ತಮುತ್ತಲಿನ ಗ್ರಾಮದ ಅಂಗನವಾಡಿ ಕಾರ್ಯಕರ್ತೆಯರು ಆಶಾ ಕಾರ್ಯಕರ್ತೆಯರು ಮತ್ತು ಕೆ. ಹೆಚ್ ಪಿ ಟಿ ಸಂಸ್ಥೆಯ ತಾಲೂಕು ಸಂಯೋಜಕರಾದ ಶ್ರೀ ಮಾಂತಯ್ಯ. ಶ್ರೀಮತಿ ಶೋಭಾ  ಹಾಗೂ ಲಕ್ಷ್ಮಣ್ ನವಲಹಳ್ಳಿ ಹಾಜರಿದ್ದರು.

ವರದಿ – ಸಂಪಾದಕೀಯ

Leave a Reply

Your email address will not be published. Required fields are marked *