ಜುಮಲಾಪೂರ ಗ್ರಾಮದಲ್ಲಿ ನಿಜ ಶರಣ ಅಂಬಿಗರ ಚೌಡಯ್ಯ ಜಯಂತಿಯನ್ನು ಸರಳವಾಗಿ ಆಚರಣೆ ಮಾಡಲಾಯಿತು……

Spread the love

ಜುಮಲಾಪೂರ ಗ್ರಾಮದಲ್ಲಿ ನಿಜ ಶರಣ ಅಂಬಿಗರ ಚೌಡಯ್ಯ ಜಯಂತಿಯನ್ನು ಸರಳವಾಗಿ ಆಚರಣೆ ಮಾಡಲಾಯಿತು……

ಜುಮಲಾಪೂರ ಗ್ರಾಮದಲ್ಲಿ ನಿಜ ಶರಣ ಅಂಬಿಗರ ಚೌಡಯ್ಯ ಜಯಂತಿಯನ್ನು ಸರಳವಾಗಿ ಆಚರಣೆ ಮಾಡಲಾಯಿತು ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲ್ಲೂಕಿನ ಜುಮಲಾಪೂರ ಗ್ರಾಮದಲ್ಲಿ ಇಂದು. ಬಸವಣ್ಣನವರ ಅನುಯಾಯಿ ಆಗಿದ್ದ ನಿಜ ಶರಣ ಅಂಬಿಗರ ಚೌಡಯ್ಯನವರ  902 ನೇ ಜಯಂತ್ಯುತ್ಸವನ್ನು. ಗ್ರಾಮದ ಗಂಗಾಮತ ಸಮಾಜದ ಹಿರಿಯರು ಹಾಗೂ ಗ್ರಾಮದ ಸರ್ವ ಸಮಾಜದ ಹಿರಿಯರ  ಜತೆಗೂಡಿ ಅತ್ಯಂತ ಸರಳವಾಗಿ ಸರ್ಕಲ್ ಲ್ಲಿರುವ ಅಂಬಿಗರ ಚೌಡಯ್ಯ ಭಾವಚಿತ್ರಕ್ಕೆ. ಪೂಜೆ ಪುಸ್ಪಾರ್ಚನೆ ಮಾಡುವ ಮುಖಾಂತರ ಆಚರಣೆ ಮಾಡಲಾಯಿತು. ಈ  ಬಾರಿ ಮೂರನೇ  ಕರೋನ ಹಿನ್ನೆಲೆಯಲ್ಲಿ ಸರಳವಾಗಿ ಆಚರಿಸಲಾಯಿತು.

ಅಂಬಿಗರ ಚೌಡಯ್ಯನವರು ತಮ್ಮ ವಚನಗಳ ಮೂಲಕ ಸಮಾಜದ ಕಂದಾಚಾರ ಮತ್ತು ಮೂಢನಂಬಿಕೆಗಳನ್ನು ಖಂಡಿಸಿದರು. ಕಾಯಕದ ಮಹತ್ವವನ್ನು ಒತ್ತಿ ಹೇಳಿದರು. ಚೌಡಯ್ಯನ ಚಿಂತನೆಗಳು ಅತ್ಯಂತ ಮೌಲ್ಯಯುತವಾಗಿದ್ದಂತವುಗಳಾಗಿದ್ದು  ನಾವು ಅವನ್ನು ಒಮ್ಮೆ ತಿರುಗಿ ನೋಡಿ. ನಮ್ಮ ಜೀವನದಲ್ಲಿ ಬಳಸಿಕೊಂಡಲ್ಲಿ ಅದೇ ಒಂದು ಪ್ರಮುಖ ಆಚರಣೆಯಾಗುತ್ತದೆ.  ದೊಣಿ ನೆಡೆಸುವ ಕಾಯಕ ಮಾಡುತ್ತಿದ್ದ ಅಂಬಿಗರ ಚೌಡಯ್ಯ ತಮ್ಮ ವೃತ್ತಿಯನ್ನೇ ಕೈಲಾಸವೆಂದು ನಂಬಿದವರಾಗಿದ್ದರು. ಯಾವುದೇ ಕೆಲಸವನ್ನು ಶ್ರದ್ಧೆಯಿಂದ ಮಾಡಿದ್ದಲ್ಲಿ ದೇವರನ್ನು ಕಾಣಬಹುದಾಗಿದೆ ಎಂಬುದನ್ನು ಅವರು ತೋರಿಸಿದ್ದಾರೆ. ಸಮಾಜ ದಲ್ಲಿರುವ ಮೇಲು ಕಿಳು ಮೂಢನಂಬಿಕೆ. ತಂಭಾಚಾರಗಳನ್ನು ಯಾವುದೇ ಅಂಜೂ ಅಳುಕಿಲ್ಲದೆ ತಮ್ಮ ವಚನಗಳ ಮೂಲಕ ಟಿಕಿಸಿದ್ದಾರೆ. ವಿಶ್ವಕ್ಕೆ ಮಾನವಿಯತೆಯ ತತ್ವಗಳನ್ನು ಸಾರಿದ ಬಸವಣ್ಣನವರ ಸಮಕಾಲೀನ ಅಂಬಿಗರ ಚೌಡಯ್ಯನವರ ಕಾಯಕ ನಿಷ್ಠೆ ಹಾಗೂ ಅವರು ಸಾರಿದ ತತ್ವಗಳು ಸರ್ವಜನಾಂಗಕ್ಕೆ ಆದರನೀಯವಾಗಿವೆ. ಈ ಸಂದರ್ಭದಲ್ಲಿ  ಶಾಲಾ ಮಕ್ಕಳು ಕೋಲಾಟ ಆಡುವ ಮುಖಾಂತರ ರಂಜಿಸಿದರು. ಈ ಸಂದರ್ಭದಲ್ಲಿ ಊರಿನ ಸರ್ವ ಸಮಾಜದ ಹಿರಿಯರು ಜನಪ್ರತಿನಿಧಿಗಳು ಹಾಗೂ ಸುತ್ತಮುತ್ತಲಿನ ಗ್ರಾಮಗಳ ಜನಪ್ರತಿನಿಧಿಗಳು ಹಾಗೂ ಹಿರಿಯರು ಮತ್ತು ಸಮಾಜದ ಹಿರಿಯರು ಯುವಕರು ಭಾಗಿಯಾಗಿದ್ದರು.

ವರದಿ – ಸಂಪಾದಕೀಯ

Leave a Reply

Your email address will not be published. Required fields are marked *