ರಸ್ತೆ ಕಾಮಗಾರಿ ಮುಗಿದು 6 ತಿಂಗಳು ಆಗಿಲ್ಲ, ರಸ್ತೆಯೂ ಹಾಳಾಯ್ತು, ಜನರು ಕಂಗೆಟ್ಟರು…..!

Spread the love

ರಸ್ತೆ ಕಾಮಗಾರಿ ಮುಗಿದು 6 ತಿಂಗಳು ಆಗಿಲ್ಲ, ರಸ್ತೆಯೂ ಹಾಳಾಯ್ತು, ಜನರು ಕಂಗೆಟ್ಟರು…..!

ಬೆಣಚಿನಮರಡಿ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲ್ಲೂಕಿನ  ಚಿಕ್ಕ ಬಾಗೇವಾಡಿ ಗ್ರಾಮದಿಂದ ಪ್ರೌಢಶಾಲೆಯ ಮಾರ್ಗವಾಗಿ ಬೆಣಚಿನ ಮರಡಿ ಹಾಗೂ ಗಿರಿಯಾಲ ಗ್ರಾಮಗಳನ್ನು ಸಂಪರ್ಕ ಮಾಡುವ ರಸ್ತೆಗೆ ಪಂಚಾಯತ್ ರಾಜ್ ಇಲಾಖೆಯ ಅಧೀನದಲ್ಲಿ 20 ಲಕ್ಷ ವೆಚ್ಚದಲ್ಲಿ ಕಳೆದ 6 ತಿಂಗಳ ಹಿಂದಷ್ಟೇ ನಿರ್ಮಾಣ ಮಾಡಿ  ಕಾಮಗಾರಿಯನ್ನು ತರಾ ತುರಿ ಮುಗಿಸಲಾಗಿತ್ತು. ಆದರೇ ಅದ್ಯಾಕೋ ಏನೋ ಗೊತ್ತಿಲ್ಲಾ. ಪ್ರಸ್ತುತ ಈ ರಸ್ತೆಯ ಪರಿಸ್ಥಿತಿ ನೋಡಿದ್ರೆ ತುಂಬಾನೇ ಬೇಜಾರು ಆಗುತ್ತೇ ಕಣ್ರೀ. ಸಾಕಷ್ಟು ತಗ್ಗು ಗುಂಡಿಗಳಾಗಿರುವ ಈ ನಿರ್ಮಾಣವಾದ ರಸ್ತೆಯಲ್ಲಿ    ಕಳೆದ ಎರಡು ತಿಂಗಳಲ್ಲಿ ಸಾಕಷ್ಟು ಅವಘಡ ಸಂಭವಿಸಿ ದಿನನಿತ್ಯ ಇದರ ಮೂಲಕ ಓಡಾಡುವುದಕ್ಕೆ ತುಂಬಾನೇ ತೊಂದರೆಯಾಗುತ್ತಿದೆ. ಇನ್ನೂ ಈ ಸಮಸ್ಯೆಯ ಬಗ್ಗೆ ಇಲ್ಲಿನ ಸ್ಥಳೀಯ ಗ್ರಾಮಸ್ಥರುಗಳು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಪದೇ ಪದೇ ಗಮನ ತೆಗೆದುಕೊಂಡು ಬರುತ್ತಿದ್ದರೂ ಮೌನ ವಾಗಿರುವುದು ನೋಡಿದ್ರೆ ಜನ ಮರುಳೋ , ಜಾತ್ರೆ ಮರುಳೋ ಎಂಬಂತಾಗಿದೆ ಇಲ್ಲಿನ ಪರಿಸ್ಥಿತಿ. ಆದ್ದರಿಂದ ಇಲ್ಲಿನ ಎರಡು ಗ್ರಾಮಸ್ಥರ ಮನವಿ ಮೇರೆಗೆ ನಮ್ಮ ಪತ್ರಿಕಾ ಸಮೂಹದ ರಾಜ್ಯ ವಿಶೇಷ ಪ್ರತಿನಿಧಿ ಬಸವರಾಜು ಭೇಟಿಕೊಟ್ಟು ಇಲ್ಲಿನ ಸಮಸ್ಯೆಯ ಬಗ್ಗೆ ಸಮಗ್ರವಾಗಿ ವರದಿ ತಯಾರಿಸಿ ಬೈಲಹೊಂಗಲ ಉಪ ವಿಭಾಗದ ಪಂಚಾಯ್ ರಾಜ್ ಇಲಾಖೆಯ ಅಭಿಯಂತರರು ಗಮನಕ್ಕೆ ತೆಗೆದುಕೊಂಡು ಬಂದರು. ಇನ್ನಾದರೂ ಈ ರಸ್ತೆಯ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗುವುದೇ ಎಂಬುದನ್ನು ಕಾದು ನೋಡಬೇಕಿದೆ. ವರದಿ – ಚಲುವಾದಿ ಅಣ್ಣಪ್ಪ

Leave a Reply

Your email address will not be published. Required fields are marked *