ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ತಾವರಗೇರಾವತಿಯಿಂದ ಚುನಾವಣಾ ನಿಮಿತ್ಯ ಪೂರ್ವಭಾವಿ ಸಭೆ ಯಶಸ್ವಿಯಾಗಿ ಜರುಗಿತು….

Spread the love

ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ತಾವರಗೇರಾವತಿಯಿಂದ ಚುನಾವಣಾ ನಿಮಿತ್ಯ ಪೂರ್ವಭಾವಿ ಸಭೆ ಯಶಸ್ವಿಯಾಗಿ ಜರುಗಿತು….

ತಾವರಗೇರಾ ಪಟ್ಟಣದಲ್ಲಿಂದು ಇಂದು ನಡೆದ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾವತಿಯಿಂದ  ತಾವರಗೇರಾ ಪಟ್ಟಣದ ಚುನಾವಣಾ ನಿಮಿತ್ಯವಾಗಿ ಪೂರ್ವಭಾವಿ ಸಭೆಯ ಕಾರ್ಯಕ್ರಮವು ಯಶಸ್ವಿಯಾಗಿ ಜರುಗಿತು. ಈ ಕಾರ್ಯಕ್ರಮದಲ್ಲಿ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ರಾಜ್ಯ ಅಧ್ಯಕ್ಷರಾದ ತಾಹೇಋ್ ಹುಸೇನ್, ಜಿಲ್ಲಾಧ್ಯಕ್ಷರಾದ ಆದೀಲ್ ಪಾಟೀಲ್ ಕೊಪ್ಪಳ,ಮಹ್ಮದ ಅಲೀಮುದೀನ್ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳು, ಅಜೀಜ್ ಜಾಹಗೀರ್ದಾರ, ಹಸುನ್ನುದಿನ್ ಅಲಾಂಬ್ರದರ್ ಕುಷ್ಟಗಿ ಅಧ್ಯಕ್ಷರು. ಯಮನೂರಪ್ಪ ಬಿಳೆಗುಡ್ಡ ತಾವರಗೇರಾ ಹೋಬಳಿ ಅಧ್ಯಕ್ಷರು, ರಾಜಾನಾಯಕ ರಾಜ್ಯ ಸಂಚಾಲಕರು, ಜೊತೆಗೆ ತಾವರಗೇರಾ ಪಟ್ಟಣದ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ಆಕಾಂಕ್ಷಿಗಳು ಸೇರಿದ್ದು. ಈ ಪಟ್ಟಣ ಪಂಚಾಯತಿಯ ಚುನಾವಣೆಯಲ್ಲಿ ಅಭ್ಯರ್ಥಿಗಳು ಸುಮಾರು 3 ಅಭ್ಯಾರ್ಥಿಗಳು ಕಣಕ್ಕಿಳಿಯಲು ತಿರ್ಮಾನಿಸಿದ್ದು, 1) ದೇವೆಂದ್ರ ಮೋಚಿ 9ನೆ ವಾರ್ಡ, ರಾಜೇಶ್ವರಿ ಕಲಾಲ 4ನೇ ವಾರ್ಡ ಹಾಗೂ ಯಮನೂರಪ್ಪ ಬಿಳೆಗುಡ್ಡ 16ನೇ ವಾರ್ಡನಲ್ಲಿ ಅಭ್ಯಾರ್ಥಿಗಳು ಚುನಾವಣಾ ಪೈಪೋಟಿಯಲ್ಲಿ ಭಾಗಿಯಾಗುತ್ತಿದ್ದು,. ಈ ಪೂರ್ವಭಾವಿ ಸಭೆಯ ಕುರಿತು ರಾಜ್ಯ ಅಧ್ಯಕ್ಷರಾದ ತಾಹೇರ್ ಹುಸೇನ್ರವರು ವಿಶೇಷವಾಗಿ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ಕುರಿತು. 1) ಕೋರೊನಾದ ಸಂದರ್ಭದಲ್ಲಿ ಕೆ.ಎಸ್.ಆರ್.ಟಿ.ಎಸ್. ನೌಕರ ಸಾವಿನ ಸಂಖ್ಯೆಯನ್ನು ಆರ್.ಟಿ.ಐ ಮುಖಾಂತರ ತೆಗೆದುಕೊಂಡು ಪರಿಹಾರ ುದಗಿಸುವಲ್ಲಿ ನಮ್ಮ ಪಾರ್ಟಿಯು ಸತತವಾಗಿ ಶ್ರಮಿಸಿದೆ. 2) ರೈತರ ಕೃಷಿ ಕಾಯ್ದೆಯ ಬಗ್ಗೆ ನಿರಂತರವಾಗಿ ಸರ್ಕಾರಕ್ಕೆ ಮನವಿಯನ್ನ ಸಲ್ಲಿಸಿದ ಹಲವು ಉದಾಹರಣೆಗಳು ಇವೆ. 3) ಮುಂದಿನ ದಿನಮಾನಗಳಲ್ಲಿ ಪ್ರತಿ ವಾರ್ಡನಲ್ಲಿ ಅಭ್ಯರ್ಥಿಗಳನ್ನು ಹುಡುಕುವುದು 4) ಜೊತೆಗೆ ಪಟ್ಟಣ ಮೂರು ವಾರ್ಡಗಳಲ್ಲಿ ಸ್ಪರ್ಧೆಗೆ ಭಾಗಿಯಾಗುವವರು ಸ್ವಾತಂತ್ರ್ಯವಾಗಿ ನಿಲ್ಲಬೇಕು, ಹಾಗೂ ಪಕ್ಷದ ಅಭಿವೃದ್ಧಿಗಾಗಿ ಶ್ರಮಿಸುವಂತ ವ್ಯಕ್ತಿಗಳಾಗಬೇಕು, 5) ಪಕ್ಷ ಸಂಘಟನೆಗೆ ಯುವಕರು ಒಂದಾಗಬೇಕು, ಬ್ರಷ್ಟಾಚಾರ ಮುಕ್ತ ರಾಜಕೀಯ ಮಾಡಬೇಕು ಎಂದರು,. ಈ ಕಾರ್ಯಕ್ರಮದಲ್ಲಿ ತಾವರಗೇರಾ ಪಟ್ಟಣದ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಪಕ್ಷದ  ಸದಸ್ಯರಾದ ಶರಣಪ್ಪ ಕಲಾಲ, ಯಲ್ಲಪ್ಪ ಕಲಾಲ್ ಖಾಜಾಖಾನ, ಎಮ್.ಡಿ.ರಫೀಕ್, ಶ್ಯಾಮೂರ್ತಿ ಸಿದ್ದಾಪೂರ, ವೆಂಕಟೇಶ ಕಲಾಲ್, ಶ್ಯಾಮರಾಜ ಕಲಾಲ್ ರಾಜಾಸಾಬ ಮೆಣೇದಾಳ, ಹಾಗೂ ಇತರರು ಉಪಸ್ಥಿತರಿದ್ದರು.

ವರದಿ – ಉಪ-ಸಂಪಾದಕೀಯ

Leave a Reply

Your email address will not be published. Required fields are marked *