ಕಣದಿಂದ ಹಿಂದೆ ಸರಿಯುವ ಮಾತೆ ಇಲ್ಲ — ಹನುಮಂತಪ್ಪ ಅಂಡಗಿ……

Spread the love

ಕಣದಿಂದ ಹಿಂದೆ ಸರಿಯುವ ಮಾತೆ ಇಲ್ಲಹನುಮಂತಪ್ಪ ಅಂಡಗಿ……

ತಾವರಗೇರಾ :  ಕನ್ನಡ ಸಾಹಿತ್ಶ ಪರಿಷತ್ತಿನ  ಕೊಪ್ಪಳ  ಅಧ್ಶಕ್ಷ ಸ್ಥಾನದ  ನಾಲ್ಕನೆಯ ಕ್ರಮಸಂಖ್ಶೆಯ ಕೋಳಿಹಾಳ ಹನುಮಂತಪ್ಪ ಕಣದಿಂದ ನಿವೃತ್ತಿಯಾಗಿದ್ದಾರೆಯೇ ಹೊರತು ಹನುಮಂತಪ್ಪ ಅಂಡಗಿ ಚಿಲವಾಡಗಿಯಾದ ನಾನು ನಿವೃತ್ತಿಯಾಗಿರುವುದಿಲ್ಲ. ಇದನ್ನು ಕೆಲವರು ಗೊಂದಲ ಸೃಷ್ಟಿಮಾಡಿದ್ದಾರೆ. ಇಂತಹ ಗೊಂದಲಗಳಿಗೆ ಸದಸ್ಯರು ಕಿವಿಗೊಡಬಾರದು  ನನ್ನ ಕ್ರಮಸಂಖ್ಶೆ 3 ಇದೆ ನಾನು ಸ್ಪರ್ಧೆಯಲ್ಲಿದ್ದೇನೆ. ಜಿಲ್ಲಾದ್ಶಂತ ಏಕಾಂಗಿಯಾಗಿ ನನ್ನ ದ್ವಿಚಕ್ರ ವಾಹನದಲ್ಲಿಯೇ ಎಲ್ಲಾ ಮತದಾರರ ಮನೆ ಮನೆಗೆ ತೆರಳಿ ಮತಯಾಚನೆ ಮಾಡುತ್ತಿರುವ ಏಕೈಕ ಅಭ್ಶರ್ಥಿಯಾಗಿದ್ದೇನೆ.ಮತದಾರ ಪ್ರಭುಗಳಿಂದ ಉತ್ತಮ ಪ್ರತಿಕ್ರಿಯೆ ವ್ಶಕ್ತವಾಗುತ್ತಿದೆ. ಶತಮಾನ ಕಂಡ  ಕನ್ನಡಿಗರ ಹೆಮ್ಮೆಯ ಕನ್ನಡ ಸಾಹಿತ್ಶ ಪರಿಷತ್ತಿನ ಕೊಪ್ಪಳ ಜಿಲ್ಲಾ ಕನ್ನಡ ಸಾಹಿತ್ಶ ಪರಿಷತ್ತಿನ ಅಧ್ಶಕ್ಷ ಸ್ಥಾನಕ್ಕೆ ಒಬ್ಬ ಕ್ರಿಯಾಶೀಲ ಸಾಹಿತಿಯಾಗಿ ಸ್ಪರ್ಧೆಗಿಳಿದಿರುವುದು ಜೀವನದ ಸೌಭಾಗ್ಶವೆಂದು ನಾನು ಭಾವಿಸಿದ್ದೇನೆ.ಕನ್ನಡ ನಾಡು ನುಡಿಯ ಸೇವೆ ಮಾಡಲು ಕಂಕಣಬದ್ದನಾಗಿದ್ದೇನೆ. ಪ್ರೌಢಶಾಲಾ ಶಿಕ್ಷಕನಾಗಿ, ಉಪನ್ಶಾಸಕನಾಗಿ ಕಳೆದ 25 ವರ್ಷಗಳಿಂದ ವಿದ್ಶಾರ್ಥಿಗಳಲ್ಲಿ ಸಾಹಿತ್ಶಾಭಿಮಾನವನ್ನು ಬೆಳೆಸುವಲ್ಲಿ ಯಶಸ್ವಿಯಾಗಿದ್ದೇನೆ. ಸಾಲಿ ಮತ್ತು ಸಾಹಿತ್ಶ ನನ್ನ ಎರಡು ಕಣ್ಣುಗಳು.ಈ ಎರಡನ್ನೂ ನಾನು ಸಮರ್ಥವಾಗಿ ನಿಭಾಯಿಸಿಕೊಂಡು ಬಂದಿದ್ದೇನೆ.ಕನ್ನಡಮ್ಮನ ನಿಷ್ಠಾವಂತ ಸೇವಕನಾದ ನನಗೊಂದು ಸಲ ಅವಕಾಶ ಮಾಡಿಕೊಡಬೇಕೆಂದು  ಕೊಪ್ಪಳ ಜಿಲ್ಲಾ ಕನ್ನಡ ಸಾಹಿತ್ಶ ಪರಿಷತ್ತಿನ ಅಧ್ಶಕ್ಷ ಸ್ಥಾನದ ಪ್ರಬಲ ಅಭ್ಶರ್ಥಿಯಾದ ಹನುಮಂತಪ್ಪ ಅಂಡಗಿ ಚಿಲವಾಡಗಿ ಅವರು ಪಟ್ಟಣದ  ಕನ್ನಡ ಸಾಹಿತ್ಶ ಪರಿಷತ್ತಿನ ಹಿರಿಯ ಆಜೀವ ಸದಸ್ಶರಾದ ಷಣ್ಮುಖಪ್ಪ ಐಲಿ ಅವರಿಗೆ ತಮ್ಮ ಚುನಾವಣಾ ಪ್ರಣಾಳಿಕೆಯನ್ನು ನೀಡುವುದರ ಮೂಲಕ ಮತಯಾಚಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಅಜೀವ ಸದಸ್ಶರಾದ ಅಶೋಕ ಓದಾ, ಎಂ.ಡಿ.ಬಾಬು,ಕೃಷ್ಣಯ್ಶಶೆಟ್ಟಿ  ಯಾಡಕಿ,ಯಲ್ಲಪ್ಪ ತಾರನಾಳಕರ್,ನಾದಿರಷಾಶಾ ಮುಲ್ಲಾ,ಶ್ಶಾಮೂರ್ತಿ ಶಿರವಾರ, ತಿಪ್ಪಣ್ಣ ಸಜ್ಜನ; ವಿರೇಶ ನಾಗಲೀಕರ ಮುಂತಾದವರು ಉಪಸ್ಥಿತರಿದ್ದರು.

ವರದಿ – ಉಪ-ಸಂಪಾದಕೀಯ

Leave a Reply

Your email address will not be published. Required fields are marked *