ತಾವರಗೇರಾ ವೆಲ್ವೇರ್‌ ಪಾರ್ಟಿ ಆಫ್ ಇಂಡಿಯಾ ವತಿಯಿಂದ ಮಾನ್ಯ ಮುಂಖ್ಯಮಂತ್ರಿಗಳಿಗೆ (ಗೌಂವಠಾಣ) ಸರಕಾರಿ ಜಮೀನು ಉಳಿಸಿ ಕೊಡಲು ಮನವಿ. ಈ ಮನವಿಗೆ ಭರವೆಸೆ ನೀಡಿದ ಶ್ರೀ ಬಸವರಾಜ ಬೊಮ್ಮಾಯಿಯವರು…..

Spread the love

ತಾವರಗೇರಾ ವೆಲ್ವೇರ್ಪಾರ್ಟಿ ಆಫ್ ಇಂಡಿಯಾ ವತಿಯಿಂದ ಮಾನ್ಯ ಮುಂಖ್ಯಮಂತ್ರಿಗಳಿಗೆ (ಗೌಂವಠಾಣ) ಸರಕಾರಿ ಜಮೀನು ಉಳಿಸಿ ಕೊಡಲು ಮನವಿ. ಈ ಮನವಿಗೆ ಭರವೆಸೆ ನೀಡಿದ ಶ್ರೀ ಬಸವರಾಜ ಬೊಮ್ಮಾಯಿಯವರು…..


ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ತಾವರಗೇರಾ ಪಟ್ಟಣದ ವೆಲ್ವೇರ್‌ ಪಾರ್ಟಿ ಆಫ್ ಇಂಡಿಯಾ ತಾವರಗೇರಾ ಹೋಬಳಿ ಘಟಕದವತಿಯಿಂದ ಮಾನ್ಯ ಮುಂಖ್ಯಮಂತ್ರಿಗಳಾದ ಶ್ರೀ ಬಸವರಾಜ ಬೊಮ್ಮಾಯಿಯವರಿಗೆ ತಾವರಗೇರಾ ಪಟ್ಟಣದ ಹಲವು ಅಕ್ರಮಗಳ ಬಗ್ಗೆ ಸುಮಾರು 5 ವರ್ಷಗಳಿಂದ ಹೋರಾಟ ಹಮ್ಮಿಕೊಂಡಿದ್ದು ಇದರ ವಿರುದ್ದವಾಗಿ ಮನವಿ ಪತ್ರ ಸಲ್ಲಿಸಿದ್ದು, ಈ ಮನವಿಗೆ ಸ್ಪಂಧಿಸಿದ ಶ್ರೀ ಬಸವರಾಜ ಭೋಮ್ಮಾಯಿಯವರು ಮನವಿ ಪತ್ರ ಸ್ವೀಕರಿಸಿ ಈ ಮನವಿಗೆ ಸಂಬಂದಿಸಿದಂತೆ ಸಂಬಂದಪಟ್ಟ ಇಲಾಖೆಗೆ ಪತ್ರ ಬರೆಯುತ್ತೆವೆ ಎಂದು ಭರವೆಸೆಯಿಂದ ಮಾತನ್ನಾಡಿ ಕಳುಹಿಸಿದ ಸದಾ/ಸೀದಾ ಹಾಗೂ ಸರಳ ಸಜ್ಜನಿಕೆಯ ವ್ಯಕ್ತಿ. ಮನವಿಯಲ್ಲಿ ಸಾರಾಂಶ ಹಿಗಿದೆ :- ( ಸರ್ಕಾರಿ ( ಗೌಂವಠಾಣ ) ಆಸ್ಟ್ರಿ ಉಳಿವಿಗಾಗಿ ನಮ್ಮ ಹೋರಾಟ ) ಈ ವಿಷಯಕ್ಕೆ ಸಂಬಂಧಿಸಿದಂತೆ ಯಮನೂರಪ್ಪ ಬಿಳೆಗುಡ್ಡ ಅಧ್ಯಕ್ಷರು WPI ,ಹಾಗೂ ರಾಜಾನಾಯಕ ರಾಜ್ಯ ಕಾರ‍್ಕಾರಿ ಮಂಡಳಿ ಸದಸ್ಯರು, ಆರ್.ಬಿ.ಅಲಿಆದಿಲ್. ಸೋಮನಾಥ ಎಚ್.ಎಮ್ ರವರು ಈ ಮನವಿ ಮೂಲಕ ಕುಷ್ಟಗಿ ತಾಲೂಕಿನ ತಾವರಗೇರಾ ಪಟ್ಟಣಕ್ಕೆ ಹೊಂದಿಕೊಂಡಿರುವ ಸರ್ವೆ ನಂ 52, 54, ಸರ್ವೆ ನಂ 48 /, ಸರ್ವೆ ನಂ 49 /, ಜೊತೆಗೆ 221 / 1 ರ ಮದ್ಯ ಭಾಗದಲ್ಲಿ ಬರುವ ಈ ೩೩ ಜಮೀನು ಅಂದರೆ ( ಗೌಂವಠಾಣ ) ಸರಕಾರಿ ಜಮೀನು. ಈ ಜಮೀನು ಮುಂದಿನ ಪೀಳಿಗೆಗೆ ಅತ್ಯವಾಶವಾಗಿದ್ದು, ಸದ್ಯ ತಾವರಗೇರಾ ಪಟ್ಟಣದಲ್ಲಿ ಈ ಸರಕಾರಿ ಜಮೀನು ಕೊಟ್ಟಿಗಟ್ಟಲೆ ಬಾಳುತ್ತಿದ್ದು, ಈ ಜಮೀನಿನಲ್ಲಿ ಸಾಕಷ್ಟು ಜನರು ಅಕ್ರಮವಾಗಿ ವಾಣಿಜ್ಯ ಮಳಿಗೆ ನಿರ್ಮಾಣ ಮಾಡಿ, ಬಾಡಿಗೆ ರೂಪದಲ್ಲಿ ಹಣ ವಸೂಲಿ ಮಾಡುತ್ತಿದ್ದು, ಇಂತವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು , ಸರಕಾರಿ ಆಸ್ತಿ ಬಗ್ಗೆ ಸಂಪೂರ್ಣ ತನಿಖೆ ಕೈಗೊಳ್ಳಬೇಕು, ಗ್ರಾಮ ಪಂಚಾಯತಿಯ ಕಾಯಿದೆ ಪ್ರಕಾರ ಗ್ರಾಮ ಸಭೆ ಮಾಡಿ ಕಡು ಬಡವ / ನಿರ್ಗತಿಕ ಪಲಾನುಭವಿಗಳನ್ನು ಆಯ್ಕೆ ಮಾಡಬೇಕು , ಆದರೆ ಗ್ರಾಮ ಸಭೆ ಮಾಡದೆ ಸಾಮಾನ್ಯ ಸಭೆ ಮಾಡಿ ಕೇವಲ ಒಬ್ಬ ವ್ಯಕ್ತಿಯ ಹೆಸರಿನಲ್ಲಿ ಠರಾವು ಪಾಸು ಮಾಡಿರುವುದು ಕಾನೂನು ಭಾಹಿರವಾಗಿದೆ . ಕೂಡಲೇ ಅವರ ಹೆಸರಿನಲ್ಲಿರುವ ಆಸ್ತಿಯನ್ನು ರದ್ದು ಗೊಳಿಸಬೇಕು. ಜೊತೆಗೆ ಅಕ್ರಮವಾಗಿ ನಿರ್ಮಾಣಗೊಂಡ ವಾಣಿಜ್ಯ ಮಳಿಗೆಗಳನ್ನ ಕೂಡಲೆ ತೇರವುಗೊಳಿಸಬೇಕು.  ಈ ಸರ್ಕಾರಿ ಜಮೀನನ್ನು ಸರಕಾರಕ್ಕೆ ಒಪ್ಪಿಸಬೇಕು. ಜಿಲ್ಲಾಡಳಿತದಿಂದ ಹಿಡಿದು ತಾಲೂಕು ಆಡಳಿತ ಹಾಗೂ ಹೋಬಳಿ ಮಟ್ಟದ ಅಧಿಕಾರಿಗಳು ಈ ವಿಷಯದಲ್ಲಿ ಸಂಪೂರ್ಣ ವಿಫಲರಾಗಿರುತ್ತಾರೆ .

ಜೊತೆಗೆ ಈ ಗೌಂವಠಾಣ ಜಮೀನನ್ನು ಉಳಿಸುವ ಸಂಪೂರ್ಣ ಜವಬ್ದಾರಿ ತಮ್ಮದು, ಇಲ್ಲವಾದಲ್ಲಿ ಮುಂದಿನ ದಿನಮಾನಗಳಲ್ಲಿ ಈ ಗೌಂವಠಾಣ ಜಮೀನಿನ ಮುಂದೆ ಸರಕಾರಿ ಆಸ್ತಿ ಉಳಿವಿಗಾಗಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದೆಂದರು. ಹಕ್ಕೊತ್ತಾಯಗಳು  1) ತಾವರಗೇರಾ ಪಟ್ಟಣ ಪಂಚಾಯತಿಯ ಸದಸ್ಯರಾದವರು ಅಧಿಕಾರ ದುರುಪಯೋಗದಿಂದ ಬೇನಾಮಿ ಆಸ್ಟ್ರಿ ಮಾಡುವಲ್ಲಿ ಮುಂದಾಗಿದ್ದು ಖಂಡನೀಯ, ತತಕ್ಷಣವೇ ಅಕ್ರಮ ಆಸ್ತಿಯನ್ನು ತಮ್ಮ ವಶಕ್ಕೆ ತಗೇದುಕೊಳ್ಳಬೇಕು. 2) ಸರಕಾರಿ ಜಮೀನಿನಲ್ಲಿ ಅಂದರೆ 54 ಸರ್ವೇ ನಂಬರನಲ್ಲಿ ಹೋಸದಾಗಿ ಶೇಡ್ಡು ಹಾಕಿರುವುದನ್ನು ಕೂಡಲೇ ತೆರವುಗೊಳಿಸಬೇಕು, 3) ಸರಕಾರಿ ಜಮೀನಿನಲ್ಲಿ ಅಂದರೆ ಸ.ನಂ 54 ರಲ್ಲಿ ಬರುವ 18 ಎಕರೆ 34 ಗುಂ ಜಮೀನು ಕೂಡಲೇ ಸರ್ವೇಯಾಗಿದ್ದು , ಕೂಡಲೆ ಹದ್ದುಬಸ್ತು ಮಾಡಿ ತಮ್ಮ ಇಲಾಖೆ ವ್ಯಾಪ್ತಿಗೆ ವಶ ಪಡೆದುಕೊಳ್ಳಬೇಕು. 4) ( ಗೌಂವಠಾಣ ) ಸರಕಾರಿ ಜಮೀನಿನಲ್ಲಿ ಕಾನೂನು ಬಾಹೀರವಾಗಿ ಗ್ರಾಂ.ಪಂ ಅಡಿಯಲ್ಲಿ ಅಂದರೆ 2009 ರಲ್ಲಿ ತಮ್ಮ ಹೆಸರಿನಲ್ಲಿ ಮಾಡಿಕೊಂಡಿರುವ ಆಸ್ಥಿಯನ್ನು ರದ್ದುಗೊಳಿಸಬೇಕು ಜೊತೆಗೆ ಈ ಆಸ್ತಿಯನ್ನು ಸರಕಾರಕ್ಕೆ ಒಪ್ಪಿಸಬೇಕು. ಈ ಹಕ್ಕೊತ್ತಾಯಗಳೊಂದಿಗೆ ತಮ್ಮಲ್ಲಿ ಈ ಮನವಿ ಮಾಡಿಕೊಳ್ಳುವುದೇನಂದರೆ ತಾವರಗೇರಾ ಪಟ್ಟಣಕ್ಕೆ ಸಂಬಂಧಿಸಿದ ಹಲವು ( ಸಮಸ್ಯ ) ವಿಷಯಗಳ ಬಗ್ಗೆ ಹಲವು ಭಾರಿ ಪಟ್ಟಣ ಪಂಚಾಯತಿ ಅಧಿಕಾರಿಗಳಿಗೂ ಹಾಗೂ ನಾಡಕಚೇರಿಯವರಿಗೂ ಅರ್ಜಿ ಹಾಗೂ ತಕರಾರು ಅರ್ಜಿ ಸಲ್ಲಿಸಿದರು. ಇಲ್ಲಿಯವರೆಗೂ ಯಾವುದೇ ಕ್ರಮ ಕೈಗೊಳ್ಳದ ಬ್ರಷ್ಠ ಅಧಿಕಾರಿಗಳನ್ನು ಕೂಡಲೇ ವರ್ಗಾವಣೆಗೊಳಿಸಬೇಕು ವಿವರಿಸಿದರು.

ವಿಶೇಷ ವರದಿ – ಉಪ-ಸಂಪಾದಕೀಯ

Leave a Reply

Your email address will not be published. Required fields are marked *