ಕಸಾಪ ಚುನಾವಣೆ ಸೂಕ್ತ ಅಭ್ಯರ್ಥಿಯ ಆಯ್ಕೆಯಾಗಲಿ: ಖಿದ್ಮಾ ಸಂಚಾಲಕ ಆಮಿರ್ ಬನ್ನೂರು ಅಭಿಪ್ರಾಯ…..

Spread the love

ಕಸಾಪ ಚುನಾವಣೆ ಸೂಕ್ತ ಅಭ್ಯರ್ಥಿಯ ಆಯ್ಕೆಯಾಗಲಿ: ಖಿದ್ಮಾ ಸಂಚಾಲಕ ಆಮಿರ್ ಬನ್ನೂರು ಅಭಿಪ್ರಾಯ…..

ಸಮಸ್ತ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ ಗೆ ಇದೇ ಬರುವ ನವೆಂಬರ್ 21 ಭಾನುವಾರದಂದು ಚುನಾವಣೆ ನಡೆಯಲಿದೆ. ಪ್ರಸ್ತುತ ಕಸಾಪ ಚುನಾವಣೆಯಲ್ಲಿ ರಾಜ್ಯ ಮತ್ತು ಆಯಾ ಜಿಲ್ಲಾಧ್ಯಕ್ಷರ ಆಯ್ಕೆಯಾಗಲಿದ್ದು ಕನ್ನಡ ಪರ ಆಡಳಿತ ನೀಡಬಲ್ಲ ರಾಜ್ಯಕ್ಕೂ ಆಯಾ ಜಿಲ್ಲೆಗೂ ಪೂರಕವಾದ ಅಧ್ಯಕ್ಷರ ಆಯ್ಕೆಯಾಗಬೇಕು, ಕರ್ನಾಟಕಕ್ಕೆ ಹಾಗೂ, ಕನ್ನಡಕ್ಕೆ ಮೊದಲ ಆದ್ಯತೆ ನೀಡುವವರಷ್ಟೇ ಈ ಘನವೆತ್ತ ಹುದ್ದೆಗೆ ಅರ್ಹರು. ಹೊರನಾಡು ಹಾಗೂ ಹೊರ ದೇಶಗಳಲ್ಲಿ ಕನ್ನಡದ ಕಂಪನ್ನು ಬೀರುವ ಸಾಮರ್ಥ್ಯ ಹೊಂದಿದ ಅಭ್ಯರ್ಥಿಯಷ್ಟೇ ಆಯ್ಕೆಯಾಗಲಿ, ವಿಶೇಷವಾಗಿ ಯುವ ಸಾಹಿತಿಗಳು ಹಾಗೂ ಮಹಿಳಾ ಸಾಹಿತಿಗಳನ್ನು ಗುರುತಿಸಿ ಅವರ ಪ್ರಯತ್ನಕ್ಕೆ ಸೂಕ್ತ ವೇದಿಕೆ ಕಲ್ಪಿಸಿ ಅವರನ್ನು ಬೆಳಸುವ ಅಭ್ಯರ್ಥಿಗೆ ಮತ ನೀಡಿ ಅವರನ್ನು ಜಯಶೀಲರನ್ನಾಗಿಸಿ ಕನ್ನಡ ಸಾಹಿತ್ಯ ಪರಿಷತ್ತು ಇದರ ಘನತೆಯನ್ನು ಕಾಪಾಡಬೇಕೆಂದು ಈ ಮೂಲಕ ಕಸಾಪ ಇದರ ಮತದಾರರಲ್ಲಿ ಆತ್ಮೀಯತೆಯ ವಿನಂತಿ. ಭ್ರಷ್ಟಾಚಾರದ ವಿರುದ್ಧ ಹೋರಾಡಿ ಕನ್ನಡಿಗರಿಗೆ ಕರ್ನಾಟಕದಲ್ಲೇ ಉದ್ಯೋಗವನ್ನು ನೀಡಲು ಹೋರಾಟ ಮಾಡುವ ಅಧ್ಯಕ್ಷರುಗಳ ಅಗತ್ಯ ಇದೆ ಎಂದು ಖಿದ್ಮಾ ಫೌಂಡೇಶನ್ ಕರ್ನಾಟಕ ರಾಜ್ಯ ಸಂಚಾಲಕರಾದ  ಆಮಿರ್ ಬನ್ನೂರು ಅಭಿಪ್ರಾಯ ಪಟ್ಟಿದ್ದಾರೆ.

ವರದಿ – ಸಂಪಾದಕೀಯ

Leave a Reply

Your email address will not be published. Required fields are marked *