ಕಲ್ಮೇಶ್ವರ  ಕಾಲೇಜಿನಲ್ಲಿ  ಪಠ್ಯೇತರ ಚಟುವಟಿಕೆ ಉದ್ಘಾಟನೆ…..

Spread the love

ಕಲ್ಮೇಶ್ವರ  ಕಾಲೇಜಿನಲ್ಲಿ  ಪಠ್ಯೇತರ ಚಟುವಟಿಕೆ ಉದ್ಘಾಟನೆ…..

ಹೊಳೆಆಲೂರ:ಗದಗ ಜಿಲ್ಲೆಯ ರೋಣ ತಾಲೂಕಿನ ಹೊಳೆಆಲೂರಿನ ಶ್ರೀ ಕವಿಪ್ರ ಸಮಿತಿಯ ಕಲಾ,ವಿಜ್ಞಾನ,ವಾಣಿಜ್ಯ ಮಹಾವಿದ್ಯಾಲಯ ಹಾಗೂ ಕನ್ನಡ ಸ್ನಾತಕೋತ್ತರ ಅಧ್ಯಯನ  ಕೇಂದ್ರದಲ್ಲಿ ಪಠ್ಯೇತರ ಚಟುವಟಿಕೆಗಳ ಉದ್ಘಾಟನಾ ಸಮಾರಂಭ ಮತ್ತು ಬಿ.ಎ, ಬಿ.ಕಾಮ್, ಬಿ.ಎಸ್.ಸಿ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ದಿ.17 ರಂದು ಜರುಗಿತು.

ಮಹಾವಿದ್ಯಾಲಯದ ರಜತಮಹೋತ್ಸವ ಭವನದಲ್ಲಿ ನಡೆದ ಸಮಾರಂಭದಲ್ಲಿ  ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಉಚ್ಛನ್ಯಾಯಾಲಯದ ವಕೀಲರಾದ ಎಂ.ವಿ.ರಾಜಗುರು  ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.ನಂತರ  ಮಾತನಾಡಿದ ಅವರು ಓದಿಗೆ ಎಷ್ಟು  ಮಹತ್ವ ನೀಡುತ್ತೇವೆಯೋ   ಅಷ್ಟೇ  ನಾವು  ಆರೋಗ್ಯಕ್ಕೂ ಮಹತ್ವ ನೀಡಬೇಕು. ಅಲ್ಲದೆ ನಮ್ಮಲ್ಲಿ ಹುದುಗಿರುವ ಕಲೆಗಳನ್ನು ಹೊರತೆಗೆಯಲು ಪಠ್ಯೇತರ ಚಟುವಟಿಕೆಗಳು  ಅಗತ್ಯವಾಗುತ್ತವೆ. ವಿದ್ಯಾರ್ಥಿಗಳು  ಕಬಡ್ಡಿ, ಕೋಕೋ , ವಾಲಿಬಾಲ್, ಚೆಸ್, ಕೇರಂ, ಕ್ರಿಕೇಟ್ ,ಓಟ, ಜಿಗಿತ ವಿವಿಧ    ಒಳಾಂಗಣ ಮತ್ತು ಹೊರಾಂಗಣ ಆಟಗಳು ನಮ್ಮಲ್ಲಿ ದೈಹಿಕ ಸಾಮರ್ಥ್ಯ ತುಂಬಲು ಕಾರಣ ವಾಗುತ್ತವೆ. ದೈಹಿಕವಾಗಿ ನಾವು ಸದೃಢವಾದಲ್ಲಿ ನಮಗೆ ಓದಲು ಉತ್ಸಾಹ ಬರುತ್ತದೆ. ಇವುಗಳ ಜೊತೆಗೆ ಭಾಷಣ, ಸಂಗೀತ, ನಾಟಕ, ಏಕಪಾತ್ರಾಭಿನಯಗಳು, ನೃತ್ಯಗಳು ಮನಸ್ಸು ಖುಷಿಯಾಗಿರಲು ಸಹಕಾರಿಯಾಗುತ್ತವೆ. ಇವುಗಳನ್ನೆಲ್ಲ ವ್ಯಕ್ತಪಡಿಸಲು   ಪಠ್ಯೇತರ ಚಟುವಟಿಕೆಗಳ ವೇದಿಕೆಗಳು ಕಾರಣವಾಗುತ್ತವೆ ಎಂದರು. ಎಂ.ಬಿ.ಕೋಳೇರಿಯವರು ಮಾತನಾಡಿ ವಿದ್ಯಾರ್ಥಿಗಳ ಸಮಗ್ರ ಅಭಿವೃದ್ಧಿಗೆ ಆಡಳಿತ ಮಂಡಳಿಯವರು ಸದಾಕಾಲ ಸಿದ್ಧರಿದ್ದಾರೆ. ನುರಿತ ಶಿಕ್ಷಕವರ್ಗ ಇದ್ದಾರೆ. ಅವರ ಮಾರ್ಗದರ್ಶನದಲ್ಲಿ ನಿಮ್ಮ  ಉನ್ನತ ಕನಸನ್ನು ನನಸಾಗಿಸಿಕೊಳ್ಳಿ ಎಂದರು. ಪ್ರಥಮ ವರ್ಷದ ವಿದ್ಯಾರ್ಥಿಗಳನ್ನು ಅಂತಿಮ ವರ್ಷದ ವಿದ್ಯಾರ್ಥಿಗಳು ದೀಪ ನೀಡುವ ಮೂಲಕ ಸ್ವಾಗತಿಸಿಕೊಂಡರಲ್ಲದೆ ಶಶಿಕಲಾ ಡಾನಸೂರ, ಅರುಣ ವಾಘಮೋಡೆ  ಅನಿಸಿಕೆ ಹಂಚಿಕೊಂಡರು  ಅಧ್ಯಕ್ಷತೆಯನ್ನು  ವಹಿಸಿದ್ದ  ಸಂಸ್ಥೆಯ ಮಾಜಿ  ಅಧ್ಯಕ್ಷ ಸಿ.ಜಿ.ಬೀರನೂರ ಮಾತನಾಡಿ ನಮ್ಮ ಸಂಸ್ಥೆ ವಿದ್ಯಾರ್ಥಿಗಳಲ್ಲಿ ಸ್ಪರ್ಧಾತ್ಮಕ  ಮನೋಭಾವ ಬೆಳೆಸಲು ಅವರಿಗೆ ಬೇಕಾದ ಅಗತ್ಯ ಸೌಲಭ್ಯ ಕಲ್ಪಿಸಲು ಸಿದ್ಧ ಎಂದರು. ವೇದಿಕೆಯ ಮೇಲೆ ಸಂಸ್ಥೆಯ ಆಡಳಿತ ಮಂಡಳಿಯ ಉಪಾಧ್ಯಕ್ಷ ಎಂ.ಸಿ.ಬ್ಯಾಡಗಿ, ಗೌರವ ಕಾರ್ಯದರ್ಶಿ ಎಂ.ಎನ್.ತೇಜಿಗೌಡ್ರ, ಸದಸ್ಯರಾದ ಎಂ.ಬಿ.ಕೋಳೇರಿ, ಪ್ರಾಚಾರ್ಯ ಡಾ.ಎಸ್.ವಿ.ಅಂದಾನಶೆಟ್ರ,  ಸಾಂಸ್ಕೃತಿಕ ವಿಭಾಗದ ಚೇರ‍್ಮನ್ ಡಾ.ಎಂ.ಎನ್.ಕಡಪಟ್ಟಿ, ದೈಹಿಕ ಶಿಕ್ಷಣ ನಿರ್ದೇಶಕ ಎಂ.ಎಚ್.ಸೋಮನಕಟ್ಟಿ, ಸ್ನಾತಕೋತ್ತರ ಕನ್ನಡ ಅಧ್ಯಯನ ಕೇಂದ್ರದ ಸಂಯೋಜಕ ಡಾ.ಪ್ರಭು ಗಂಜಿಹಾಳ ,ಪ್ರಧಾನ ಕಾರ್ಯದರ್ಶಿ ದರ್ಶನ ಸಾಸಳ್ಳಿ, ಮಹಿಳಾ ಪ್ರತಿನಿಧಿ ಶೋಭಾ ಗೋಲಗೌಡ್ರ ಉಪಸ್ಥಿತರಿದ್ದರು. ಕುಮಾರಿ. ಶಶಿಕಲಾ ಡಾನಸೂರ ಪ್ರಾರ್ಥಿಸಿದರು. ಪ್ರಾಚಾರ್ಯ ಡಾ.ಎಸ್.ವಿ.ಅಂದಾನಶೆಟ್ರ ಪ್ರಾಸ್ತವಿಕವಾಗಿ ಮಾತನಾಡಿದರು.  ಸಂಗೀತಾ ಸತ್ತಿಗೇರಿ ಸ್ವಾಗತಿಸಿದರೆ ಭೀಮಾಂಬಿಕಾ ನಡಕಟ್ಟಿ ವಂದಿಸಿದರು. ಕುಮಾರಿ.ಸುಮಾ ಬಾರಕೇರ,ಕುಮಾರಿ. ಪ್ರತಿಭಾ ತಿಮ್ಮನಗೌಡರ ನಿರೂಪಿಸಿದರು. ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಂದ ಮನರಂಜನಾ ಕಾರ್ಯಕ್ರಮ ಜರುಗಿತು. ಈ ಸಂದರ್ಭದಲ್ಲಿ ಮಹಾವಿದ್ಯಾಲಯದ ಸರ್ವಸಿಬ್ಬಂದಿಗಳು, ವಿದ್ಯಾರ್ಥಿ, ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು. ವರದಿ – ಸಂಪಾದಕೀಯ

Leave a Reply

Your email address will not be published. Required fields are marked *