ಶಿಡ್ಲಘಟ್ಟ ತಾಲ್ಲೂಕಿನ ಗಾಂಡ್ಲಚಿಂತೆ ಗ್ರಾಮದ ಸರ್ಕಾರಿ ಶಾಲೆಯು ತೀರ ಹದಗೆಟ್ಟಿದ್ದು ಮಕ್ಕಳು ಶಾಲೆಗೆ ಬರಲು ಹಿಂಜರಿಯುತ್ತಿದ್ದಾರೆ.

Spread the love

ಸರ್ಕಾರವು ಶಿಕ್ಷಣ ವ್ಯವಸ್ಥೆಯನ್ನು ಪ್ರಬಲಗೊಳಿಸಲು ಉಚಿತ ಶಿಕ್ಷಣ ಅಕ್ಷರ ದಾಸೋಹ ಈ ರೀತಿಯ ನಾನಾ ರೀತಿಯ ಯೋಜನೆಗಳನ್ನು ತರುತ್ತಿದ್ದರು ಮಕ್ಕಳು ಖಾಸಗಿ ಶಾಲೆಗಳ ಕಡೆ ಹೆಚ್ಚು ಗಮನ ಹರಿಸುತ್ತಿದ್ದಾರೆ. ಇದಕ್ಕೆ ಕಾರಣ ಸರ್ಕಾರಗಳು ಉಚಿತ ಶಿಕ್ಷಣದ ಜೊತೆಗೆ ಒಳ್ಳೆಯ ಕೊಠಡಿಗಳು ಮೂಲಭೂತ ಸೌಕರ್ಯ, ನೀರಿನ ವ್ಯವಸ್ಥೆ ಹಾಗೂ ಶಿಕ್ಷಕರ  ಕೊರತೆಗಳನ್ನು ನೀಗಿಸುವಲ್ಲಿ ಸರ್ಕಾರಗಳು ವಿಫಲವಾಗಿವೆ ಇದರಿಂದ ಸರ್ಕಾರಿ ಶಾಲೆಗಳು ಮುಚ್ಚಿ ಹೋಗಲು ಕೂಡ ಪ್ರಮುಖ ಕಾರಣಗಳಾಗಿವೆ. ಗಡಿನಾಡಿನ ಜನರು ತೀರ ಕಡುಬಡವರಾಗಿದ್ದು  ತಮ್ಮ ಮಕ್ಕಳನ್ನು ವಿದ್ಯಾಭ್ಯಾಸಕ್ಕೆಂದು ಸರ್ಕಾರಿ ಶಾಲೆಗಳಿಗೆ ಕಳುಹಿಸುತ್ತಿದ್ದಾರೆ, ಆದ್ದರಿಂದ ಇದನ್ನು ಗಮನದಲ್ಲಿಟ್ಟುಕೊಂಡು ಶಿಕ್ಷಣದ ಜೊತೆಗೆ ಮಕ್ಕಳಿಗೆ ಉತ್ತಮವಾದ ಕೊಠಡಿಗಳನ್ನು ಸಹ ನಿರ್ಮಿಸಿ ಕೊಡುವುದು ಸರ್ಕಾರದ ಜವಾಬ್ದಾರಿಯಾಗಿರುತ್ತದೆ. ಪ್ರಸ್ತುತ ಗಾಂಡಚಿಂತೆ ಗ್ರಾಮದ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಒಂದರಿಂದ ಎಂಟನೇ ತರಗತಿಯವರೆಗೂ ಸರಿಸುಮಾರು ನೂರಕ್ಕೂ ಹೆಚ್ಚು ಮಕ್ಕಳಿದ್ದು ಮೂರು ಜನ ಶಿಕ್ಷಕರು ಇರುತ್ತಾರೆ ಇಲ್ಲಿ ಕಲಿಕೆಗೆ ಯಾವುದೇ ತೊಂದರೆ ಇಲ್ಲ ಆದರೆ ಮಕ್ಕಳು ಕೊಠಡಿಗಳ ಶಿಥಿಲ ವ್ಯವಸ್ಥೆಯನ್ನು ನೋಡಿ ಭಯಭೀತರಾಗಿ ಶಾಲೆಗೆ ಬರಲು ಹಿಂಜರಿಯುತ್ತಿದ್ದಾರೆ. ಈಗಾಗಲೇ ಕರೋನ ದಿಂದ ಸುಮಾರು ಎರಡು ವರ್ಷಗಳ ಕಾಲ ಮುಚ್ಚಿ ಹೋಗಿದ್ದ ಶಾಲೆಗಳು ಪುನಃ ಆರಂಭವಾಗಿದ್ದು ಮಕ್ಕಳು ಶಾಲೆಗಳತ್ತ ಮತ್ತೆ ಮುಖ ಮಾಡುತ್ತಿದ್ದಾರೆ. ಆದರೆ ಈಗ ಪ್ರಸ್ತುತ ಸುರಿಯುತ್ತಿರುವ ಧಾರಾಕಾರವಾದ ಮಳೆಗೆ ಶಾಲಾ ಕೊಠಡಿಗಳು  ತೀರ ಹದೆಗಟ್ಟಿದ್ದು ಮೇಲ್ಚಾವಣಿಯಿಂದ ನೀರು ಸೋರಿಕೆಯಾಗಿ ಗೋಡೆಗಳು ತುಂಬಾ ತೇವಾಂಶದಿಂದ ಕೂಡಿದ್ದು ಕುಸಿಯುವ ಪರಿಸ್ಥಿತಿ ನಿರ್ಮಾಣವಾಗಿದೆ, ಇದರಿಂದ ಮಕ್ಕಳು ಶಾಲೆಗೆ ಬರಲು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಇದರ ಬಗ್ಗೆ ಶಾಲಾ ಮುಖ್ಯ ಶಿಕ್ಷಕರಾದ ನಾಗೇಶ್ ರವರು ಮಾತನಾಡಿ ನಾವು ಈಗಾಗಲೇ ಈ ವಿಷಯದ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಗಮನಕ್ಕೆ ತಂದಿರುತ್ತೇವೆ ಅವರು ನಮಗೆ ಸರ್ಕಾರದಿಂದ ಯಾವುದೇ ಅನುದಾನವು ಕಟ್ಟಡಗಳಿಗೆ ಬರುವುದಿಲ್ಲ ತಾವು ಸ್ಥಳೀಯರಿಂದಲ್ಲೇ ಚರ್ಚಿಸಿ ಬಗೆಹರಿಸಿಕೊಳ್ಳಬೇಕಾಗಿ ಹೇಳಿದ್ದಾರೆಂದು ತಿಳಿಸಿದರು. ಶಾಲಾ S D M C ಅಧ್ಯಕ್ಷರು ಮಾತನಾಡಿ ನಾವು ಕೂಡ ನಮ್ಮ ಶಾಲೆಯ ಮೂಲಭೂತ ಸೌಕರ್ಯಗಳ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಹತ್ತಿರ ಚರ್ಚಿಸಲಾಗಿದ್ದು ಇದುವರೆಗೂ ಯಾರು ಕೂಡ ಇದರ ಬಗ್ಗೆ ಗಮನ ಹರಿಸಿಲ್ಲ ಇದರಿಂದ ಮಕ್ಕಳಿಗೆ ತುಂಬಾ ಅನುಕೂಲವಾಗುತ್ತಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ SDMC ಅಧ್ಯಕ್ಷರು ವೆಂಕಟರೆಡ್ಡಿ ಗ್ರಾಮ ಪಂಚಾಯಿತಿ ಸದಸ್ಯರು ನಾರಾಯಣಪ್ಪ ಊರಿನ ಮುಖಂಡರು ಮಂಜುನಾಥ್ ,ಕಿಶೋರ್ ನವೀನ್ , ಲೋಕೇಶ್ ಮತ್ತಿತರಿದ್ದರು.

ವರದಿ – ಮಹೇಶ ಶರ್ಮಾ

Leave a Reply

Your email address will not be published. Required fields are marked *