ಚಡಚಣ:ವೀರರಾಣಿ ಕಿತ್ತೂರ ಚೆನ್ನಮ್ಮಳ 243 ನೇ ಜಯಂತ್ಯೋತ್ಸವ-

Spread the love

“ಇಂದಿನ ಯುವ ಜನತೆ ಚೆನ್ನಮ್ಮಳ ಆದರ್ಶ ಪಾಲಿಸಲಿ: ಪ.ಪಂ ಮಾಜಿ ಅಧ್ಯಕ್ಷ ಬಾಬುಗೌಡ ಪಾಟೀಲ್ ಅಭಿಪ್ರಾಯ” ಚಡಚಣ: ಪಟ್ಟಣದ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ತಾಲ್ಲೂಕು ಘಟಕದ ವತಿಯಿಂದ ವೀರರಾಣಿ ಕಿತ್ತೂರು ಚನ್ನಮ್ಮಳ 243 ನೇ ಜಯಂತ್ಯೋತ್ಸವ ಹಾಗೂ 198 ನೇ ವಿಜಯೋತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಯಿತು. ಪಟ್ಟಣದ ಚನ್ನಮ್ಮ ವೃತ್ತದಲ್ಲಿ ಆಯೋಜಿಸಿದ ಕಿತ್ತೂರು ರಾಣಿ ಚನ್ನಮ್ಮನವರ 243 ನೇ ಜಯಂತ್ಯೋತ್ಸವ ಹಾಗೂ 198 ನೇ ವಿಜಯೋತ್ಸವ ಸಮಾರಂಭವನ್ನು ಮಾಜಿ ತಾ.ಪಂ ಸದಸ್ಯ ಚಂದ್ರಶೇಖರ್ ನಿರಾಳೆ ಅವರು ಚೆನ್ನಮ್ಮಳ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಬಳಿಕ ಪ.ಪಂ ಮಾಜಿ ಅಧ್ಯಕ್ಷ ಬಾಬುಗೌಡ ಪಾಟೀಲ್ ಧ್ವಜಾರೋಹಣ ನೇರವೇರಿಸಿ ಜಯಂತ್ಯೋತ್ಸಕ್ಕೆ ಚಾಲನೆ ನೀಡಿ ಮಾತನಾಡಿದರು. ಚೆನ್ನಮ್ಮಳಂತೆ ನಾವುಗಳು ಮಕ್ಕಳಿಗೆ ಒಳ್ಳೆಯ ಪ್ರಜೆಯಾಗುವಂತಹ ಸಂಸ್ಕಾರವನ್ನು ನೀಡುವ ಕಾರ್ಯಮಾಡಬೇಕಿದೆ. ಚನ್ನಮ್ಮಳ ಆದರ್ಶಗಳು ಕರ್ನಾಟಕಷ್ಷೇಅಲ್ಲ ರಾಷ್ಟ್ರಕ್ಕೆ ಆದರ್ಶಪ್ರಾಯ  ಎಂದರು. ಈ ಸಂದರ್ಭದಲ್ಲಿ ತಾಲ್ಲೂಕಾ ಲಿಂಗಾಯತ ಪಂಚಮಸಾಲಿ ಸಂಘದ ರಾಜ್ಯ ನಿರ್ದೇಶಕ ಶ್ರೀಮಂತ ಇಂಡಿ ಹಾಗೂ ತಾಲ್ಲೂಕಾ ಘಟಕದ ಅಧ್ಯಕ್ಷ ವಿಠ್ಠಲ್ ವಡಗಾಂವ ಮಾತನಾಡುತ್ತಾ, ನಮ್ಮ ವೀರಶೈವ ಲಿಂಗಾಯತ ಹಾಗೂ ಪಂಚಮಸಾಲಿ ಸಮಾಜದ ಯುವಕರು ರಾಣಿ ಚೆನ್ನಮ್ಮಳ ಆದರ್ಶ ಗುಣಗಳನ್ನು ಬೆಳೆಸಿಕೊಂಡು ಶಿಕ್ಷಣವಂತರಾಗಿ ಹೆಚ್ಚೆಚ್ಚು ಉದ್ಯೋಗಸ್ಥರಾಗಬೇಕು. ಜತೆಗೆ ಯುವ ಸಮುದಾಯ ಮದ್ಯಪಾನ ಹಾಗೂ ಮಾದಕ ಪದಾರ್ಥ ಸೇವನೆಯಿಂದ ದೂರವಿದ್ದು, ಸಮಾಜವನ್ನು ಮುನ್ನಡೆಸಬೇಕು ಎಂದರು. ಬಿ.ಜಿ ಸಾಹುಕಾರ ಅವರು ವೀರರಾಣಿ ಚನ್ನಮ್ಮಳು ಬ್ರಿಟಿಷರ ವಿರುದ್ಧ ನಡೆಸಿದ ಪರಾಕ್ರಮ ಕುರಿತು ಉಪನ್ಯಾಸ ನೀಡಿದರು. ಈ ಸಂಧರ್ಭದಲ್ಲಿ ಚಡಚಣ ಮಂಡಲದ ಬಿಜೆಪಿ ಅಧ್ಯಕ್ಷ  ರಾಮ ಅವಟಿ, ಪಂಚಮಸಾಲಿ ಸಮಾಜದ  ಪ್ರಧಾನ ಕಾರ್ಯದರ್ಶಿ ಮುಕುಂದ ಅಡಕೆ, ಸಂಘಟನಾ ಕಾರ್ಯದರ್ಶಿ ಎಸ್.ಬಿ ಪಾಟೀಲ್, ಉಪಾಧ್ಯಕ್ಷ ನಿವೃತ್ತ ಸಿಪಿಐ ವಿಠ್ಠಲ್ ಏಳಗಿ, ಕೃಷಿಕ ಸಮಾಜದ ಜಿಲ್ಲಾಧ್ಯಕ್ಷೆ ಧಾನಮ್ಮಗೌಡ್ತಿ ಪಾಟೀಲ್, ಸಮಾಜದ ಮುಖಂಡರಾದ ಹಣಮಂತ್ರಾಯ ಪಾಟೀಲ್, ಶ್ರೀಶೈಲ್ ಮಾಳಕೊಟಗಿ, ದೇವರ ನಿಂಬರಗಿ ಗ್ರಾ.ಪಂ ಸದಸ್ಯ ಸಂತೋಷ ಧಂದರಗಿ, ಶಾಂತೇಶ್ವರ ಸಹಕಾರಿ ಬ್ಯಾಂಕ್ ಮ್ಯಾನೇಜರ್ ಗಜಾನಂದ ಚೌದರಿ, ನಾಗನಾಥಗೌಡ ಬಿರಾದಾರ, ಮಹಾದೇವ ರಾಮಗೊಂಡ ಸೇರಿದಂತೆ ಸರ್ವ ಸದಸ್ಯರು ಹಾಗೂ ತಾಲ್ಲೂಕಿನ ಎಲ್ಲ ಯುವ-ಹಿರಿಯ ಸಮಾಜ ಬಾಂದವರು ಉಪಸ್ಥಿತರಿದ್ದರು.

ವರದಿ – ಮಹೇಶ ಶರ್ಮಾ

Leave a Reply

Your email address will not be published. Required fields are marked *