ಹುಬ್ಬಳ್ಳಿ – ಗುಂತಕಲ್: ಪ್ಯಾಸೆಂಜರ್ ರೈಲುಗಾಡಿ ಹರ್ಲಪೂರ ನಿಲ್ದಾಣದಲ್ಲಿ ನಿಲುಗಡೆಗೆ- ಆಗ್ರಹ-

Spread the love

ಹುಬ್ಬಳ್ಳಿಗುಂತಕಲ್: ಪ್ಯಾಸೆಂಜರ್ ರೈಲುಗಾಡಿ ಹರ್ಲಪೂರ ನಿಲ್ದಾಣದಲ್ಲಿ ನಿಲುಗಡೆಗೆಆಗ್ರಹ

ಹುಬ್ಬಳ್ಳಿಯಿಂದ ಗುಂತಕಲ್ ನಿತ್ಯ ವಿಶೇಷ ಪ್ಯಾಸೆಂಜರ್  ರೈಲು ಗಾಡಿ ಸಂಖ್ಯೆ 07337 /  07338 ಈ ರೈಲು ಗಾಡಿಯು ಕಳೆದ ತಿಂಗಳು  ಹೋಡುವ ಗಾಡಿಯು, ಗದಗ ತಾಲೂಕಿನ ಹರ್ಲಾಪೂರ ರೈಲ್ವೇ ನಿಲ್ದಾಣದಲ್ಲಿ ನಿಲ್ಲದ ಕಾರಣ ದಿನನಿತ್ಯ ಸಾರ್ವಜನಿಕರಿಗೆ ತುಂಬಾ ತೊಂದರೆ ಆಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಅಂದಪ್ಪ ರುದ್ರಪ್ಪ ಕೋಳೂರ ಇವರು ಆಗ್ರಹಿಸಿದರು.   ಕೂಪ್ಪಳ ನಗರದ ಕುಷ್ಟಗಿ ರಸ್ತೆ  ರೈಲ್ವೇ ಸಿ.ಸಿ ಎಲ್ 66 ಕ್ರಾಸಿಂಗ್ ಗೇಟ್ ಮೇಲ್ಸೇತುವೆ  ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಆಗಮಿಸಿದ ಕೊಪ್ಪಳ ಲೋಕಸಭಾ ಸಂಸದರಾದ ಸಂಗಣ್ಣ ಕರಡಿ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ ಹಾಲಪ್ಪ ಆಚಾರ್ ಮತ್ತು ಕೊಪ್ಪಳ ವಿಧಾನಸಭಾ ಕ್ಷೇತ್ರದ ಶಾಸಕ ರಾಘವೇಂದ್ರ ಹಿಟ್ನಾಳ  ರೈಲ್ವೆ  ಹಿರಿಯ ಅಧಿಕಾರಿಗಳು ಡಿಆರ್ ರಾಮು ವಿಶ್ವನಾಥ ಎಲ್ಲಾ ಗಣ್ಯರಿಗೆ  ಕಳೆದ ವಾರ  ನ1ರಂದು ಸೋಮವಾರ  ದಿವಸ ರೈತ ಸಂಘದ ಜಿಲ್ಲಾಧ್ಯಕ್ಷ ಅಂದಪ್ಪ ಕೋಳೂರ ಇವರು ಮನವಿ ಸಲ್ಲಿಸಿದ ಮೇಲೆ ಐದು ದಿನಗಳಲ್ಲಿ  5 ನೇ ನವಂಬರ ಶುಕ್ರವಾರದಂದು ದೀಪಾವಳಿ ವಿಶೇಷಶವಾಗಿ  ನೀಲುಗಡೆ ನೀಡಿದ್ದಾರೆ ಎಂದು ಹೆಳಿದರು. ಈ ಗಾಡಿ ರೈತ ಸಂಘದ ಹೋರಾಟದ ಪ್ರತಿಫಲವಾಗಿ ಗದಗ ತಾಲೂಕಿನ ಹರ್ಲಾಪೂರ ರೈಲ್ವೆ ನಿಲ್ದಾಣದಲ್ಲಿ ಈ ಗಾಡಿಯನ್ನು ದೀಪಾವಳಿ ವಿಶೇಷಶವಾಗಿ ಶುಕ್ರವಾರ ದಿವಸ ವಿರ್ಜಂಭಣೆ ಯಿಂದ ರೈತ ಸಂಘದ ಜಿಲ್ಲಾಧ್ಯಕ್ಷ ಅಂದಪ್ಪ ರುದ್ರಪ್ಪ ಕೋಳೂರ ಇವರು  ಈ  ರೈಲುಗಾಡಿಯನ್ನು  ಖುಷಿಯಿಂದ ಪೂಜೆ ಸಲ್ಲಿಸಿ ಹಸಿರು ನಿಶಾನೆ ತೋರಿಸಿ ಈ ರೈಲು ಗಾಡಿಯನ್ನು ಶುಕ್ರವಾರ ದಿವಸ ಚಾಲನೆ ನೀಡಿದರು  ಎಂದು ಮಾದ್ದಿಮದಲ್ಲಿ ಮಾತನಾಡಿದರು. ಮುಂದಿನ ದಿನಗಳಲ್ಲಿ ಕೊಪ್ಪಳ ರೈಲ್ವೇ ನಿಲ್ದಾಣಕ್ಕೆ ಕೊಪ್ಪಳ ಗವಿಸಿದ್ದೇಶ್ವರ ನಿಲ್ದಾಣ ಎಂದು ನಾಮಕರಣ ಮಾಡಬೇಕು ಗದಗ ರೈಲ್ವೇ ನಿಲ್ದಾಣಕ್ಕೆ ಪುಟ್ಟರಾಜ ಗವಾಯಿಗಳ ನಿಲ್ದಾಣ ಎಂದು ನಾಮಕರಣ ಮಾಡಬೇಕು ಶೀಘ್ರದಲ್ಲಿ ಮುಂದೆ ಗಂಗಾವತಿಯಿಂದ ಕಾರಟಗಿ ವರೆಗೂ  ರೈಲುಗಾಡಿಯನ್ನು ಓಡಿಸಬೇಕು ಎಂದು ಇವರು ಮಾತನಾಡಿದರು. ಈ ಸಂದರ್ಭದಲ್ಲಿ  ಗದಗ ಜಿಲ್ಲಾಧ್ಯಕ್ಷ ಯಲ್ಲಪ್ಪ ಬಾಬರಿ. ರೈತ ಸಂಘದ ಸದಸ್ಯರು ಆರ್. ಬಿ.ಅಬ್ಬಿಗೇರಿ. ಶರಣಪ್ಪ ಜೋಗಿನ ಗಿರೀಶ್ ಗುಡ್ಲಾನೂರ ಮಾರುತಿ ಲಕ್ಕುಂಡಿ ಅಜ್ಜಪ್ಪ ಜೋಗಿನ ಬಾಳಪ್ಪ ಗಂಗರಾತ್ರಿ, ರಾಮಪ್ಪ ಖಂಡ್ರೆ ಶಂಕರಪ್ಪ ಅಲ್ಲಿಪುರ ಶಿವಪುತ್ರಪ್ಪ ತಿಮ್ಮಾಪುರ, ಮಾರುತಿ ಜೋಗಿನ ವೆಂಕಟೇಶ ಸತ್ಯಪ್ಪನವರ ಮಾರುತಿ ಗದಗ,ಕೀರಣ ಗುಡ್ಲಾನೂರ , ವೆಂಕಟೇಶ ಪೂಜಾರ ಹಾಗೂ ರೈಲ್ವೇ ಸ್ಟೇಷನ್ ಮಾಸ್ಟರ್ ಸಮೇಂದ್ರ ಸಿಂಗ್ ಸಿಬ್ಬಂದಿ ನಿಂಗಪ್ಪ ಗುಡ್ಲಾನೂರ, ಇತರರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ವರದಿ – ಉಪ-ಸಂಪಾದಕೀಯ

Leave a Reply

Your email address will not be published. Required fields are marked *