ಈಶ್ವರಪ್ಪ ಅವರ ಹೇಳಿಕೆಯನ್ನು ಖಂಡಿಸಿ ಪ್ರತಿಭಟನೆ ಮೂಲಕ ಮನವಿ ಪತ್ರವನ್ನು ಸಲ್ಲಿಸಲಾಯಿತು ಈ ಸಂದರ್ಭದಲ್ಲಿ ರಂಗಪ್ಪ ದಾಸರ ಮಾತನಾಡಿ ರಾಜಕೀಯ ತೆವಲಿಗೆ ಅಂಗವೈಕಲ್ಯತೆಯ ಬಳಕೆ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟ ಖಂಡನೆ….

Spread the love

ಈಶ್ವರಪ್ಪ ಅವರ ಹೇಳಿಕೆಯನ್ನು ಖಂಡಿಸಿ ಪ್ರತಿಭಟನೆ ಮೂಲಕ ಮನವಿ ಪತ್ರವನ್ನು ಸಲ್ಲಿಸಲಾಯಿತು ಸಂದರ್ಭದಲ್ಲಿ ರಂಗಪ್ಪ ದಾಸರ ಮಾತನಾಡಿ ರಾಜಕೀಯ ತೆವಲಿಗೆ ಅಂಗವೈಕಲ್ಯತೆಯ ಬಳಕೆ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟ ಖಂಡನೆ….

ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯಿತ್ ರಾಜ್ ಸಚಿವ, ಹರುಕು ಬಾಯಿ ಈಶ್ವರಪ್ಪನವರು ತಮ್ಮ ರಾಜಕೀಯ ತೆವಲಿಗೆ ಅಂಗವೈಕಲತೆಯನ್ನು ಬಳಸಿಕೊಂಡಿರುವುದನ್ನು ಕರ್ನಾಟಕ ರಾಜ್ಯ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟ ಬಲವಾಗಿ ಖಂಡಿಸುತ್ತದೆ. ಇದು ಅವರ ತಿಳುವಳಿಕೆ ಕೊರತೆ ಮತ್ತು ಅಂಗವಿಕಲರ ಬಗ್ಗೆ ಇರುವ ಮನೋಭಾವವನ್ನು ತೋರಿಸುತ್ತದೆ ಎಂದು ಅಭಿಪ್ರಾಯ ಪಡುತ್ತದೆ. ನಂತರ ಡೊಳ್ಳಿನ ಬಸವರಾಜ್ ಕಾರ್ಯದರ್ಶಿ ಮಾತನಾಡಿದರು  ಅಂಗವಿಕಲರು ಶತ, ಶತಮಾನಗಳಿಂದಲೂ ಶೋಷಣೆಗೆ ಒಳಗಾಗಿದ್ದಾರೆ. ಅಂಗವಿಕಲರು ದುರ್ಬಲರು, ಸಮಾಜಕ್ಕೆ ಅನಗತ್ಯ ಹೊರೆಯಾದವರು ಎಂಬ ಮನೋಭಾವ ಹೊಂದಿರುವ ಸಂದರ್ಭದಲ್ಲಿ ಅಂಗವಿಕಲರು ದೀರ್ಘ ಕಾಲ ಹೋರಾಟ ನಡೆಸಿ ಅಂಗವಿಕಲರು ತಮಗಾಗಿ ಕಾನೂನನ್ನು ಜಾರಿಗೊಳಿಸಿಕೊಂಡಿದ್ದಾರೆ. ಅಂಗವಿಕಲತೆಯ ಕುರಿತು ಹಿಯ್ಯಾಳಿಕೆ, 2016ರ  ಅಂಗವಿಕಲರ ಹಕ್ಕುಗಳ ಕಾಯ್ದೆ ಪ್ರಕಾರ ಶಿಕ್ಷಾರ್ಹ ಅಪರಾಧವಾಗಿರುತ್ತದೆ. ಮುಖ್ಯಮಂತ್ರಿಗಳು ಇವರ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಅಂಗವಿಕಲರ ಹಾಗೂ ಪಾಲಕರ ಒಕ್ಕೂಟ ಒತ್ತಾಯಿಸುತ್ತದೆ.ಅಂಗವಿಕಲರನ್ನು ಗೌರವಿಸಬೇಕು. ಅಂಗವಿಕಲರನ್ನು ದುರ್ಬಲದ ಸಂಕೇತಗಳಿಗೆ ಬಳಸುವುದು, ಹಾಸ್ಯದ ವಸ್ತುವನ್ನಾಗಿ ಬಳಸುವುದನ್ನು ಒಕ್ಕೂಟ ತೀರ್ವವಾಗಿ ವಿರೋಧಿಸುತ್ತದೆ. ಇಂತಹ ಪ್ರಸಂಗಗಳು ಮತ್ತು ಪ್ರಕರಣಗಳಲ್ಲಿ ಸರ್ಕಾರ ಇಂತವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸುತ್ತದೆ.  ಈ ಸಂದರ್ಭದಲ್ಲಿ  ಅಧ್ಯಕ್ಷರು ಜವಳಿ ಕೊಟ್ರೇಶಪ್ಪ ರಾಜ್ಯ ಸಮಿತಿ ಸದಸ್ಯರು ರೇಣುಕಮ್ಮ  ಸದಸ್ಯರು  ಲಕ್ಷ್ಮಣ ಬಿ ಹುಲುಗಪ್ಪ ಖಲೀಲ್ ಸಾಬ್  ಹುಲುಗಪ್ಪ ಮಾರುತಿ ಮಹೇಶ್ ಉಮೇಶ್  ಕೊಟ್ರೇಶ್ ಟಿ ರಾಮನಗೌಡ ಭಾಗವಹಿಸಿದ್ದರು .

ವರದಿ – ಮಹೇಶ ಶರ್ಮಾ

Leave a Reply

Your email address will not be published. Required fields are marked *