ಕೂಡ್ಲಿಗಿ:”ಬನ್ನಿ ತಂಗಡು ಬಂಗಾರದಂಗಿರು”-ಪರಸ್ಪರ ಹಾರೈಸಿದ ಹಿತೈಷಿಗಳು…..

Spread the love

ಕೂಡ್ಲಿಗಿ:”ಬನ್ನಿ ತಂಗಡು ಬಂಗಾರದಂಗಿರು”-ಪರಸ್ಪರ ಹಾರೈಸಿದ ಹಿತೈಷಿಗಳು…..

ವಿಜಯನಗರ  ಜಿಲ್ಲೆ ಕೂಡ್ಲಿಗಿ ಪಟ್ಟಣ ಸೇರಿದಂತೆ ತಾಲೂಕಿನೆಲ್ಲೆಡೆಗಳಲ್ಲಿ,ವಿಜಯ ದಶಮಿ ಪ್ರಯುಕ್ತ ಶುಕ್ರವಾರ ಸಂಜೆ ಸಂಪ್ರದಾಯದಂತೆ ಭಕ್ತರು ಶಮೀವೃಕ್ಷಕ್ಕೆ ಪೂಜೆ ಸಲ್ಲಿಸಿ ಬನ್ನಿ ಮುಡಿದರು.ಪಟ್ಟಣದ ಶ್ರೀಪೇಟೆಬಸವೇಶ್ವರ ದೇವಸ್ಥಾನದ ಭಕ್ತವೃಂಧದವರು,ಬಸವಣ್ಣ ದೇವರ ಮೂರ್ತಿಯನ್ನು ಹೊತ್ತ ಪಲ್ಲಿ ಹೊತ್ತಭಕ್ತರು,ವಾಧ್ಯವೃಂಧದೊಂದಿಗೆ  ಪಟ್ಟಣದ ಪ್ರಮುಖ ಬೀದಿಗಳ ಮೂಲಕ ಸಾಗಿ.ಪಟ್ಟಣದ ಹೃದಯ ಭಾಗದಲ್ಲಿರುವ ಬನ್ನಿಮರಕ್ಕೆ ಹೆಚ್.ಎಮ್.ಚಿದಾನಂದ ಸ್ವಾಮಿಯವರ ಪೌರೋಹಿತ್ಯದಲ್ಲಿ ಪೂಜೆ ಸಲ್ಲಿಸಿದ ನಂತರ, ಸಾರ್ವಜನಿಕವಾಗಿ ಪರಸ್ಪರ ಬನ್ನಿ ಪತ್ರೆಯನ್ನು ನೀಡಿ ಶುಭ ಆರೈಸುವ ಸಾಂಪ್ರದಾಯಿಕ ಕಾರ್ಯ ಜರುಗಿತು. ಶ್ರೀಕೊತ್ತಲಾಂಜನೇಯ ಭಕ್ತ ವೃಂಧದವರು ಶ್ರೀಕೊತ್ತಲಾಂಜನೇಯ ಉತ್ಸವ ಮೂರ್ತಿ ಹೊಂದಿರುವ ಪಲ್ಲಕ್ಕಿಯನ್ನು ಹೊತ್ತು,ಭಜನೆ ತಂಡ ಹಾಗು ವಾದ್ಯ ವೃಂದದೊಂದಿಗೆ ಬೀದಿಗಳಲ್ಲಿ ಸಂಚರಿಸಿ, ಪಟ್ಟಣದ ಅಂಚಿನಲ್ಲಿರುವ ಶಮೀವೃಕ್ಷಕ್ಕೆ ನಮಿಸಿ ಪೂಜೆಗೈದು ಬನ್ನಿ ಮುಡಿಯೋದಕ್ಕೆ ಪ್ರಾರಂಭಿಸಲಾಯಿತು.ಪಟ್ಟಣದ ಭಜನೆ ತಂಡ ಹಾಗೂ ಶ್ರೀಕೊತ್ತಲಾಂಜನೇಯ ಭಕ್ತವೃಂಧ ನೇತೃತ್ವದಲ್ಲಿ,ಶ್ರೀಬನ್ನಿಮಹಾಕಾಳಿಗೆ ವಿಧಿವತ್ತಾಗಿ ಶ್ರದ್ಧಾ ಭಕ್ತಿಯಿಂದ ಪೂಜೆ ಸಲ್ಲಿಸಿದ ನಂತರ. ಸಾರ್ವಜನಿಕರು ಹಿರಿಯರಿಗೆ ಬನ್ನಿ ನೀಡಿ ಅವರಿಂದ ಆಶೀರ್ವಾದ ಪಡೆಯೋ ಕಾರ್ಯದಲ್ಲಿ ತೊಡಗಿದರು,ಕಿರಿಯರು ಹಿರಿಯರಿಗೆ ಬನ್ನಿ ನೀಡಿ ಆಶೀರ್ವಾದ ಪಡೆದರು. ಅಂತೆಯೇ ಪಟ್ಟಣ ಸೇರಿದಂತೆ ತಾಲೂಕಿ ನೆಲ್ಲೆಡೆಗಳಲ್ಲಿ. ನಾಗರೀಕರು ಸಾರ್ವಜನಿಕರು ಹಿರಿಯರು ಕಿರಿಯರು,ಮಹಿಳೆಯರು ಮಕ್ಕಳು ಪರಸ್ಪರ ಬನ್ನಿ ನೀಡೋ ಮೂಲಕ ದಸರಾ ಹಬ್ಬ ಆಚರಿಸಲಾಯಿತು. ಸಹೋದರರು ಸಹೋದರಿಯರು ಸ್ನೇಹಿತರು ಪರಸ್ಪರ,ಬಂಧು ಬಳಗದವರು ಪರಸ್ಪರ ಬನ್ನಿ ಪತ್ರೆಯನ್ನ ಕೊಡೋ ಮೂಲಕ ಶುಭ ಕೋರಿದರು.ಶುಕ್ರವಾರ ಸಂಜೆ ದಶಮಿಯಂದು ಬನ್ನಿ ಮಹಾಕಾಳಿಗೆ ವಿಶೇಷ ಪೂಜೆ ಕೈಂಕರ್ಯಾದಿಗಳನ್ನ ನೆರವೇರಿಸಿ ದಸರಾ ಹಬ್ಬಕ್ಕೆ ಅಂಕಿತ ನೀಡಲಾಯಿತು.✍️ ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ-9008937428

Leave a Reply

Your email address will not be published. Required fields are marked *