ತಾವರಗೇರಾ ದಸರಾ. ನೋಡಲು ಬಂತು ಜನಸಾಗರ. ಹಾಲಗಂಬ ಏರಿ ಕಡಗ ತೊಟ್ಟಾನ ಛತ್ರಪ್ಪ ಕೊಪ್ಪಳದರ್.

Spread the love

ತಾವರಗೇರಾ ದಸರಾ. ನೋಡಲು ಬಂತು ಜನಸಾಗರ. ಹಾಲಗಂಬ ಏರಿ ಕಡಗ ತೊಟ್ಟಾನ ಛತ್ರಪ್ಪ ಕೊಪ್ಪಳದರ್.

ಯಾಧವ ಸಮಾಜದವತಿಯಿಂದ ಹಾಲುಗಂಬ ಏರುವ ಕಾರ್ಯಕ್ರಮವು  ಎರಡು ವರ್ಷ ಕರಿ ನೇರಳು ಕೊರೋನಾ ಮಹಾ ಮಾರಿ ಯಿಂದ ಮಂಕಾಗಿದ್ದ  ದಸರಾ ಹಬ್ಬವು ಈ ವರ್ಷವು ಅಧ್ದೂರಿಯಾಗಿ ಜರುಗಿತು. ಕೊಪ್ಪಳ ಜಿಲ್ಲೆಯಕುಷ್ಟಗಿ ತಾಲೂಕಿನ ತಾವರಗೇರಾ ಪಟ್ಟಣದಲ್ಲಿ ಪ್ರತಿ ವರ್ಷದಂತೆ ನಡೆಯುವ ಹಾಲುಗಂಬ ಏರುವ ಕಾರ್ಯಕ್ರಮವು ಯಾದವ್ ಸಮಾಜದವತಿಯಿಂದ ಈ ವರ್ಷವು ಅಧ್ದೂರಿಯಾಗಿ ಜರುಗಿತು.  ತಾವರಗೇರಾ ಪಟ್ಟಣದ ವ್ಯಾಪ್ತಿಗೆ ಬರುವ ಯಾದವ್ ಸಮಾಜದ ಯುವಕರು ಪ್ರತಿ ಹಳ್ಳಿ ಹಳ್ಳಿಯಿಂದ ಯುವಕರು ಈ ಹಾಲುಗಂಬ ಏರುವ ಕಾರ್ಯಕ್ರಮದಲ್ಲಿ ಪಾಲುಗೊಂಡು ಸತತ ಎರಡು ತಾಸಿನವರೆಗೂ ಹಾಲುಗಂಬ ಏರುವ ಸ್ಫರ್ಧೆಯಲ್ಲಿ  ನಿರತರಾದರು.  ಕೆಲವು ಯುವಕರು ಹಾಲುಗಂಬ ಏರುವಾಗ ಹರಸಹಾಸ ಪಟ್ಟರು. ಕೊನೇಗೆ ಛತ್ರಪ್ಪ ಕೊಪ್ಪಳದರ್ ಸಾ// ಬಚ್ಚಿನಾಳ ಇವರು ಹಾಲುಗಂಬ ಏರಿ ಸ್ಫರ್ಧೆಯಲ್ಲಿ ವಿಜೇತರಾದರು. ತಾವರಗೇರಾ ಪಟ್ಟಣದ ಊರಿನ ಸಾರ್ವಜನಿಕರು ಹಾಗೂ ಸುತ್ತಮುತ್ತಲಿನ ಹಳ್ಳಿ ಜನರ ಸೋಗಡು ಕಣ್ಣುತುಂಬಿಕೊಂಡಿತ್ತು. ಈ ಮಹಾಮಾರಿ ಕರೋನದ ಅಲೇಗೆ ಯಾವುದೇ ಹಬ್ಬ ಹರೀದಿನಗಳು ಕಾಣದಂತೆ ಮಾಯವಾಗಿದ್ದವು.  ತಾವರಗೇರಾ  ಪಟ್ಟಣದಲ್ಲಿ ಈ ದಸರಾ ಹಬ್ಬದ ಪ್ರಯುಕ್ತ ತಾವರಗೇರಾ ಪಟ್ಟಣದಲ್ಲಿ ಮೊದಲ ಭಾರಿಗೆ ಸಾವಿರಾರು ಜನ ಸಂಖ್ಯೆಯಲ್ಲಿ ಈ ಹಾಲುಗಂಬ ಏರುವ ಸ್ಫರ್ದೇ ಕಾರ್ಯಕ್ರಮ ನೋಡಲು ಸಹಸ್ರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಸಾಗರವೆ ಹರಿದು ಬಂದಿತ್ತು. ಈ ಹಾಲುಗಂಬ ಏರುವ ಸ್ಪರ್ದೇಗೆ ವಿಜೇತರಾದವರಿಗೆ 11 ತೊಲೆಯ ಬೆಳ್ಳಿ ಕಡಗವನ್ನು  ಕಾಂಗ್ರೆಸ್ ಪಕ್ಷದ ಜನಪ್ರಿಯ  ಶಾಸಕರಾದ ಶ್ರೀ ಅಮರೇಗೌಡ ಎಲ್ ಬಯ್ಯಾಪೂರ. ಹಾಗೂ ಮಾಜಿ ಶಾಸಕರಾದ ದೊಡ್ಡನಗೌಡ ಪಾಟೀಲ್ ಇವರು ಸಹ 11 ತೊಲೆಯ ಬೆಳ್ಳಿ ಕಡಗವನ್ನು ಕೋಡುಗೆಯಾಗಿ ನೀಡಿದರು. ಒಟ್ಟಿನಲ್ಲಿ ಈ ಹಾಲುಗಂಬ ಏರುವ ಸ್ಪರ್ದೆಯು ನೋಡುಗರ ಮನದಲ್ಲಿ ಉತ್ಸಹವು ತುಂಬಿತ್ತು. ಪ್ರತಿ ವರ್ಷದಂತೆ ಈ ವರ್ಷದಿಂದ ಯಾವುದೇ ಮಹಮಾರಿ ಖಾಯಿಲೆಗಳು ಬಾರದಂತೆ ತಾಯಿ ಚಾಮುಂಡೇಶ್ವರಿ ದೇವಿಯನ್ನು ನೇನೆದು ಈ ಕಾರ್ಯಕ್ರಮವು ಅದ್ದೂರಿಯಾಗಿ ಜರುಗಿತು.

ವರದಿ – ಉಪ- ಸಂಪಾದಕೀಯ

Leave a Reply

Your email address will not be published. Required fields are marked *