“ಜಂಬಿಗಿ(ಆ)ಗ್ರಾಮದಲ್ಲಿ ಡಾ//ಎಪಿಜೆ  ಅಬ್ದುಲ್ ಕಲಾಂ ಅವರ ಜನ್ಮದಿನಾಚರಣೆ ಮಾಡಲಾಯಿತು”

Spread the love

“ಜಂಬಿಗಿ(ಆ)ಗ್ರಾಮದಲ್ಲಿ ಡಾ//ಎಪಿಜೆ  ಅಬ್ದುಲ್ ಕಲಾಂ ಅವರ ಜನ್ಮದಿನಾಚರಣೆ ಮಾಡಲಾಯಿತು”

ಇಂದು ವಿಜಯಪುರ ತಾಲೂಕಿನ ಜಂಬಗಿ (ಆ) ಗ್ರಾಮದಲ್ಲಿ ಶ್ರೀ ಡಾ// ಎಪಿಜೆ ಅಬ್ದುಲ್ ಕಲಾಂ ಅವರ ಜನ್ಮದಿನದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಡಾ//ಎಪಿಜೆ ಅಬ್ದುಲ್ ಕಲಾಂ ಅವರ ಫೋಟೋ ಪೂಜೆ ಮಾಡಿ ಸಾರ್ವಜನಿಕರನ್ನು ಉದ್ದೇಶಿಸಿ ಅವರ ಜೀವನ ಚರಿತ್ರೆಯನ್ನು ಸವಿಸ್ತಾರವಾಗಿ ಅವ್ವ ಪ್ರಶಸ್ತಿ ವಿಜೇತರಾದ ಶ್ರೀ ರಾಜು ಮಾಳಿ ಶಿಕ್ಷಕರು ಮಾತನಾಡಿದರು. ಮತ್ತು ಶ್ರೀ ಜಬ್ಬಾರ್ ಮುಲ್ಲಾ ರವರು ಮಾತನಾಡಿ ಗ್ರಾಮದಲ್ಲಿ ಡಾ// ಎಪಿಜೆ ಅಬ್ದುಲ್ ಕಲಾಂ ಅವರ ಆದರ್ಶ ತತ್ವಗಳನ್ನು ಎಲ್ಲರ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು. ಅದರಂತೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ ಬಸವರಾಜ ಭಾವಿಮನಿ, ಗ್ರಾಪಂ ಸದಸ್ಯರಾದ ಶ್ರೀ ದಾವಲಸಾಬ ನಧಾಪ, ಗ್ರಾಮದ ಹಿರಿಯರಾದ ಮಾದೇವ ಮಾಲಗಾರ, ಹಾಜಿಮಲಂಗ ಮುಲ್ಲಾ, ಪಿಕೆಪಿಎಸ್ ಸದಸ್ಯರಾದ ಅಸ್ಲಾಂ ಗೋಗಿ, ಪಿಕೆಪಿಎಸ್ ಉಪಾಧ್ಯಕ್ಷರಾದ ಭೀಮರಾಯ ನಡುಗಡ್ಡೆ, ಅನೀಲ ಸಂಕದ, ಅಜೀಜ್ ಮುಲ್ಲಾ, ಉತಾಲ ನಧಾಪ್, ಅನ್ಸರಸಾ ಮುಲ್ಲಾ, ವಿಜಯ ನಡಗಡ್ಡಿ, ಶ್ರೀಶೈಲ ಮಾನೆ, ಹಾಗೂ ಗ್ರಾಮದ ಅನೇಕರು ಉಪಸ್ಥಿತರಿದ್ದರು. ಶ್ರೀ ಬಾಳಪ್ಪ ಮಾನೆಯವರು ಕಾರ್ಯಕ್ರಮದ ನಿರೂಪಣೆ ಮತ್ತು ವಂದನಾರ್ಪಣೆ ಮಾಡಿದರು.

  ವರದಿ – ಮಲ್ಲು ಬಿ. 

Leave a Reply

Your email address will not be published. Required fields are marked *