🇮🇳ರಾಜ ವೀರಮದಕರಿ ನಾಯಕ🇮🇳-

Spread the love

🇮🇳ರಾಜ ವೀರಮದಕರಿ ನಾಯಕ🇮🇳-

ಚಿತ್ರದುರ್ಗದ ನಾಯಕರಲ್ಲಿ ಕಡೆಯ ನಾಯಕರಾದ, ಮದಕರಿ ನಾಯಕ, ಚಿತ್ರದುರ್ಗದ ಸಿಂಹಾಸನವನ್ನು ಅಲಂಕರಿಸಿದಾಗ ಹನ್ನೆರಡು ವರ್ಷ ವಯಸ್ಸಿನವರಾಗಿದ್ದರು. ಚಿತ್ರದುರ್ಗದ ವೈರಿಗಳು ಮತ್ತೊಮ್ಮೆ ದುರ್ಗವನ್ನು ವಶಪಡಿಸಿಕೊಳ್ಳಲು ಪ್ರಯತ್ನಿಸಿದರು. ಆದರೆ ಬೇಡರ ಸಮುದಾಯ ತಮ್ಮ ನಾಯಕನಿಗೆ ನಿಷ್ಠಾವಂತರಾಗಿ ಉಳಿದು ಆತನನ್ನು ರಕ್ಷಿಸುತ್ತಾರೆ. ಕಲ್ಯದುರ್ಗ ಒಬ್ಬನೇ  ಆಕ್ರಮಿಸಲು ಮತ್ತೊಮ್ಮೆ ಪ್ರಯತ್ನಿಸಿ ಸೋಲುತ್ತಾನೆ. ನಂತರ ೧೭೫೯–೬೦ರಲ್ಲಿ, ರಾಯದುರ್ಗ, ಹರಪನಹಳ್ಳಿ, ಹಾಗು ಸವಣೂರಿನ ಏಕೀಕೃತ ಮೈತ್ರಿಕೂಟ ಶತ್ರುಸೈನ್ಯವು ಆಕ್ರಮಣ ನಡೆಸಿತು. ಐಹೊಸ್ಕೆರೆ ಸಮೀಪ ಈ ಕದನ ನಡೆಯುತ್ತದೆ. ಇದರಲ್ಲಿ ಕೆಲವನ್ನು ಕಳೆದುಕೊಂಡರೂ, ಈ ಹಾನಿಯೊಂದಿಗೆಯೇ ಚಿತ್ರದುರ್ಗ ಸೈನ್ಯ ಜಯ ಗಳಿಸುತ್ತದೆ. ಇದರ ನಂತರ ರಾಜ್ಯದ ಗಡಿ ಪ್ರದೇಶಗಳಾದ ತರಿಕೆರೆ ಹಾಗು ಜರಿಮಲೆಯ ನಾಯಕರುಗಳು ಉಂಟುಮಾಡಿದ ಕುಕೃತ್ಯಗಳಿಂದಾಗಿ ಕೆಲವು ಸಣ್ಣಪುಟ್ಟ ಗಲಾಟೆಗಳು ಸಂಭವಿಸುತ್ತವೆ. ತದನಂತರ ಚಿತ್ರದುರ್ಗವು, ದಕ್ಷಿಣದಲ್ಲಿ ಒಂದು ಬಲಶಾಲಿ ಸೈನ್ಯವಾಗುತ್ತದೆ. ಪರಿಣಾಮವಾಗಿ ಪ್ರಬಲವಾಗಿದ್ದ ಹೈದರ್ ಅಲಿ ಹಾಗು ಪೇಶ್ವೆಗಳು ಪರಸ್ಪರ ಕದನಕ್ಕೆ ಇದರ ಸಹಾಯ ಯಾಚಿಸುತ್ತಾರೆ. ನಾಯಕನು, ಬಂಕಾಪುರ, ನಿಜಗಲ್, ಬಿದನೂರು, ಹಾಗು ಮರಾಠರ ವಿರುದ್ಧದ ಕದನಗಳಲ್ಲಿ ಮೊದಲ ಬಾರಿಗೆ ಹೈದರ್ ಅಲಿಗೆ ಸಹಾಯ ಮಾಡಿರುತ್ತಾನೆ. ಇದರ ಹೊರತಾಗಿಯೂ, ನವಾಬನು ಚಿತ್ರದುರ್ಗವನ್ನು ಆಕ್ರಮಿಸಲು ಸೂಕ್ತ ಸಮಯಕ್ಕಾಗಿ ಕಾಯುತ್ತಿರುತ್ತಾನೆ. ೧೭೭೭ರಲ್ಲಿ, ಮರಾಠ ಹಾಗು ನಿಜಾಮರ ಮಿತ್ರಕೂಟ ಸೈನ್ಯದಿಂದ ಹೈದರ್, ಭಯಾನಕ ಆಕ್ರಮಣವನ್ನು ಎದುರಿಸಬೇಕಾಗುತ್ತದೆ. ಈ ನಡುವೆ ಚಿತ್ರದುರ್ಗದ ನಾಯಕನು ತನ್ನ ಸ್ವಾಮಿನಿಷ್ಠೆಯನ್ನು ಬದಲಿಸುತ್ತಾನೆ. ಅಲ್ಲದೇ ನಾಯಕನು ದೊಡ್ಡ ಮೊತ್ತದ ಕಪ್ಪವನ್ನು ಸಲ್ಲಿಸುವ ಪ್ರಸ್ತಾಪದ ಹೊರತಾಗಿಯೂ, ಹೈದರ್ ಅದನ್ನು ನಿರಾಕರಿಸಿ ಚಿತ್ರದುರ್ಗದೆಡೆಗೆ ದಾಳಿಗಾಗಿ ಕ್ರಮಣ ಮಾಡುತ್ತಾನೆ. ಕೋಟೆಯನ್ನು ಪ್ರವೇಶಿಸಲು ಸೂಕ್ತ ತಯಾರಿಯನ್ನು ಮಾಡಿಕೊಳ್ಳುವವರೆಗೂ ಕೆಲವು ತಿಂಗಳುಗಳ ಕಾಲ ಮುತ್ತಿಗೆ ನಿಷ್ಫಲವಾಗುತ್ತದೆ. ಅಲ್ಲದೇ ಹದಿಮೂರು ಲಕ್ಷಗಳ ಪಗೋಡಗಳನ್ನು ಮುಖ್ಯಸ್ಥ, ನಾಯಕನಿಂದ ಕಪ್ಪವಾಗಿ ಪಡೆಯಲಾಗುತ್ತದೆ. ಮರಾಠ ಸೈನ್ಯದ ಕಾರ್ಯಾಚರಣೆ ಮುಗಿದ ನಂತರ, ಹೈದರ್ ಮತ್ತೊಮ್ಮೆ ಚಿತ್ರದುರ್ಗದ ನಾಯಕನೊಂದಿಗೆ ಪ್ರಸ್ತಾಪ ಮಾಡುತ್ತಾನೆ. ಆದರೆ ಈ ಸಂದರ್ಭದಲ್ಲಿ ಹೈದರ್ ನ ವಿರುದ್ಧ ಸೈನ್ಯವು ತಿಂಗಳುಗಟ್ಟಲೇ ತನ್ನ ಪ್ರತಿರೋಧವನ್ನು ಮುಂದುವರೆಸುತ್ತದೆ. ಪಾಳೆಯಗಾರರ ಸೇವೆಯಲ್ಲಿದ್ದ ವಿಶ್ವಾಸಘಾತುಕ ಮುಸಲ್ಮಾನ ಅಧಿಕಾರಿಗಳ ಸಹಾಯದೊಂದಿಗೆ, ಚಿತ್ರದುರ್ಗವನ್ನು ೧೭೭೯ರಲ್ಲಿ ವಶಪಡಿಸಿಕೊಳ್ಳಲಾಯಿತು. ಮದಕೆರಿ ನಾಯಕ ಹಾಗು ಆತನ ಕುಟುಂಬವನ್ನು ಶ್ರೀರಂಗಪಟ್ಟಣಕ್ಕೆ ಬಂಧಿಸಿ ಸೆರೆಮನೆಗೆ ಕಳುಹಿಸಲಾಯಿತು. ಚಿತ್ರದುರ್ಗದ ೨೦,೦೦೦ ಬೇಡ ಸಮುದಾಯದ ಸೈನಿಕರನ್ನು ಶ್ರೀರಂಗಪಟ್ಟಣ ದ್ವೀಪಕ್ಕೆ (ಮೈಸೂರು) ಕಳುಹಿಸಲಾಯಿತು. ಇದರ ಏಕೈಕ ಉದ್ದೇಶವೆಂದರೆ ಅವರ ಬಲವನ್ನು ಮುರಿಯುವುದೇ ಆಗಿತ್ತು. ನಾಯಕನ ಮರಣಾನಂತರ, ಚಿತ್ರದುರ್ಗದ ಬೊಕ್ಕಸವು ಹೈದರಾಲಿಯ ವಶಕ್ಕೆ ಬಂದಿತೆಂದು ಹೇಳಲಾಗುತ್ತದೆ. ಇತರ ಸಂಪತ್ತಿನೊಂದಿಗೆ , ಈ ಕೆಳಕಂಡ ಪ್ರಮಾಣದಲ್ಲಿ ನಾಣ್ಯಗಳು ದೊರಕಿತೆಂದು ಹೇಳಲಾಗುತ್ತದೆ: ೪೦೦,೦೦೦ ರಜತ; ೧೦೦,೦೦೦ ರಾಜನಾಣ್ಯ; ೧,೭೦,೦೦೦ ಅಶ್ರಾಫಿ; ೨,೫೦೦,೦೦ ದಬೋಲಿಕದಲಿ; ಹಾಗು ೧,೦೦೦,೦೦೦ ಚವುರಿ ಇತ್ಯಾದಿ. ಇಂತಹ ಪರಾಕ್ರಮಕ್ಕೆ ಹೆಸರಾದ ನಮ್ಮ ವೀರ ಮದಕರಿ ನಾಯಕರ ಜಯಂತಿ ಅಕ್ಟೋಬರ್ 13 ರಂದು ನಾಡಿನಾದ್ಯಂತ ಸಂಭ್ರಮ ಸಡಗರದಿಂದ ಆಚರಿಸೋಣ. ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ-9008937428

Leave a Reply

Your email address will not be published. Required fields are marked *