ಚಿರಿಬಿ:ಸಂಘಟಿತರಾಗಿ ಸೌಲಭ್ಯಗಳನ್ನು  ಹೊಂದಿರಿ- ಹೋರಾಟಗಾರ ಸಿ.ವಿರುಪಾಕ್ಷಪ್ಪ..

Spread the love

ಚಿರಿಬಿ:ಸಂಘಟಿತರಾಗಿ ಸೌಲಭ್ಯಗಳನ್ನು  ಹೊಂದಿರಿಹೋರಾಟಗಾರ ಸಿ.ವಿರುಪಾಕ್ಷಪ್ಪ..

ವಿಜಯನಗರ  ಜಿಲ್ಲೆ ಕೊಟ್ಟೂರು ತಾಲೂಕು ಚಿರಬಿ ಗ್ರಾಮದಲ್ಲಿ, ಸಿಐಟಿಯು ಹಾಗೂ ಸಿಡಬ್ಲ್ಯೂಎಫ್ ಐ ನೇತೃತ್ವದಲ್ಲಿ.ಕಟ್ಟಡ ಕಾರ್ಮಿಕರ ಸಂಘಟನೆಯ ನಾಮ ಫಲಕ ಉದ್ಘಾಟನೆ ಜರುಗಿತು.ನಾಮಫಲಕ ಉದ್ಘಾಟಿಸಿದ ಹೋರಾಟಗಾರ ಹಾಗೂ ವಕೀಲರಾದ ಸಿ.ವಿರುಪಕ್ಷಪ್ಪ ಮತನಾಡಿ, ಕಾರ್ಮಿಕರು ಸಂಘಟಿತರಾಗಬೇಕು ಹಾಗೂ ಹೋರಾಟಗಳಲ್ಲಿ ಸಕ್ರೀಯವಾಗಿ ಪಾಲ್ಗೊಳ್ಳಬೇಕಿದೆ ಎಂದರು. ಕಾರ್ಮಿಕ ಇಲಾಖೆಯ ಸಕಲ ಸೌಲಭ್ಯಗಳ ಕುರಿತು ಮಾಹಿತಿ ನೀಡಿ ವಿವರಸಿದರು,ಸೌಲಭ್ಯಕ್ಕಾಗಿ ಸಂಘಟನೆಯೊಂದಿಗೆ ಸದಾ ಸಂಪರ್ಕದಲ್ಲಿದ್ದು ನೆರವು ಪಡೆಯಬಹುದಾಗಿದೆ ಎಂದರು.ಕಾರ್ಮಿಕರು ಹಾಗೂ ಕುಟುಂಬ ಸದಸ್ಯರು  ಸರ್ಕಾರದ ಸಕಲ ಸೌಲಭ್ಯಗಳನ್ನು ಪಡೆದು, ಕಾರ್ಮಿಕರೆಲ್ಲರೂ  ಸರ್ವತೋಮುಖ ಅಭಿವೃದ್ಧಿ ಹೊಂದಬೇಕಿದೆ ಎಂದರು. ಸಿಐಟಿಯು ಕಾರ್ಯದರ್ಶಿ ಹಾಗೂ ಹೋರಾಟ ಗಾರ ಗುನ್ನಳ್ಳಿ ರಾಘವೇಂದ್ರ ಮಾತನಾಡಿ, ಗ್ರಾಮ ಘಟಕಗಳೇ ಸಂಘಟನೆಯ ನರ ನಾಡಿಗಳು.ಎಲ್ಲಾ ಕಾರ್ಮಿಕರು ಸಂಘಟನೆಯ ರಕ್ತ ವಿದ್ದಂತೆ ಕೆಂಬಾವುಟ ನಮ್ಮೆಲ್ಲರ ಸಂಕೇತವಾಗಿದೆ.ಪ್ರತಿ ಗ್ರಾಮದಲ್ಲಿ ಕಾರ್ಮಿಕರು ಪ್ರಜ್ಞಾವಂತರಾಗಿ ಸಂಘಟಿತರಾಗಬೇಕು, ಜನ ವಿರೋಧಿ ಸರ್ಕಾರಗಳಿಗೆ ಬುದ್ದಿ ಕಲಿಸಬೇಕಿದೆ ಅದಕ್ಕಾಗಿ ಕಾರ್ಮಿಕರು ರೈತರೆಲ್ಲರೂ ಜಾಗ್ರತರಾಗಬೇಕಿದೆ  ಎಂದರು.ಹಿರಿಯ ಮುಖಂಡರಾದ ಕಾಳಾಪುರ ಬಸವರಾಜ,ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ಚಿನ್ಮಯ ಸ್ವಾಮಿ,ಗ್ರಾಪಂ ಸದಸ್ಯರಾದ ಪಿ.ನಾಗರಾಜ,ಎಂ.ಮೂಗಣ್ಣ. ಗ್ರಾಮದ ಮುಖಂಡ ಒಂಟಿ ಕುಬೇರಪ್ಪ ವೇದಿಕೆಯಲ್ಲಿದ್ದರು. ಸಿಐಟಿಯು ನೇತೃತ್ವದ ಕಟ್ಟಡ ಕಾರ್ಮಿಕ ಸಂಘದ ಚಿರಬಿ ಗ್ರಾಮಘಟಕ  ಪದಾಧಿಕಾರಿಗಳನ್ನು, ಇದೇ ಸಂದರ್ಭದಲ್ಲಿ ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಒಂಟಿ ನಾಗರಾಜ,ಉಪಾಧ್ಯಕ್ಷ ರಮೇಶ,ಕಾರ್ಯದರ್ಶಿಯಾಗಿ ಓಬಳೇಶರನ್ನು ಆಯ್ಕೆ ಮಾಡಲಾಯಿತು.ಗ್ರಾಮ ಘಟಕದ ವಿವಿದ ಪದಾಧಿಕಾರಿಗಳನ್ನು ಮತ್ತು ಕಾರ್ಯಕಾರಿ ಸಮಿತಿ ಸದಸ್ಯರನ್ನು ನೇಮಿಸಲಾಯಿತು,ಕಟ್ಟಡ ಕಾರ್ಮಿಕರು  ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.✍️ ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ-9008937428

Leave a Reply

Your email address will not be published. Required fields are marked *