ಒಂದು ಪ್ರೀತಿ  ಎರಡು ಕನಸು   ಕಿರು ಚಿತ್ರ ತೆರೆಗೆ ಸಿದ್ಧತೆ……

Spread the love

ಒಂದು ಪ್ರೀತಿ  ಎರಡು ಕನಸು   ಕಿರು ಚಿತ್ರ ತೆರೆಗೆ ಸಿದ್ಧತೆ……

ಲಾಕ್ಡೌನ್ ಸಮಯದಲ್ಲಿ ನಡೆದ ಒಂದು ಘಟನೆಯನ್ನು ಇಟ್ಟುಕೊಂಡು ಒಂದು ಕಿರುಚಿತ್ರ ಸಿದ್ಧವಾಗುತ್ತಿದೆ, ನಿರ್ಮಾಪಕಿ  ಮಂಜುಳಾ ಪವರ್,ಮಸ್ಕಿ  ಛಾಯಾಗ್ರಹಣ ಮೋಹನ್ ರಾಜು ಬೆಂಗಳೂರು, ನಿರ್ದೇಶಕ ಅಭಿಲಾಷ್ ಹಾಸನ ರವರು ಈ ಚಿತ್ರವನ್ನು ಒಂದು ಪ್ರೀತಿ ಎರಡು ಕನಸು   ಎಂದು ಹೆಸರಿಡಲಾಗಿದೆ, ನಿರ್ದೇಶಕ ಅಭಿಲಾಷ್ ಹಾಸನ ಅವರು ತಾವು ಕಂಡ ಪ್ರೇಮಕಥೆಯನ್ನು ಕಿರುಚಿತ್ರ ಮೂಲಕ ತೋರಿಸಲು ಹೊರಟಿರುವ  ಅಭಿಲಾಷ್  ಹಾಸನ ಅವರು ಈ ಚಿತ್ರದ ಕಥೆ ಚಿತ್ರಕಥೆ ಹಾಗೂ ಸಂಭಾಷಣೆಯನ್ನು ಅವರೇ ಬರೆದಿದ್ದಾರೆ ಕೆಲ ದಿನಗಳ ಹಿಂದೆ ಅಷ್ಟೇ ದೇವನಹಳ್ಳಿಯಲ್ಲಿ ಚಿತ್ರೀಕರಿಸುವ ಮೂಲಕ ಚಿತ್ರೀಕರಣ ಆರಂಭವಾಗಿದೆ, ಈ ಚಿತ್ರದಲ್ಲಿ ನಾಯಕನಟನಾಗಿ ಮೌನೇಶ ರಾಥೋಡ್ ಮಸ್ಕಿ ಮತ್ತು ನಾಯಕಿನಟಿ ಯಾಗಿ ಪಲ್ಲವಿ, ದಾವಣಗೆರೆ.ಮೌನೇಶ ರಾಥೋಡ್ ಮಸ್ಕಿ ಅವರು ಈ ಹಿಂದೆ ಸುಮಾರು ಧಾರವಾಹಿಯಲ್ಲಿ, ನಟಿಸಿದ್ದು,  ಅಳಿಗುಳಿಮನೆ. ಸಿಲ್ಲಿ ಲಲ್ಲಿ ಕಾದಂಬರಿ ಕಣಜ ರೋಬೋ ಫ್ಯಾಮಿಲಿ.ಚಿಕ್ಕ ಚಿಕ್ಕ ಪಾತ್ರದಲ್ಲಿ ನಟಿಸಿದ್ದಾರೆ, ಹಾಗೂ ತಮ್ಮದೇ ಆದ ನಿಹಾರಿಕ ಕ್ರಿಯೇಶನ್ಸ್ ಬ್ಯಾನರ್ ನಲ್ಲಿ ಎರಡು  ಕಿರುಚಿತ್ರ ವನ್ನು ನಿರ್ಮಾಣ/ನಾಯಕ್ ನಟನಾಗಿ ನಟಿಸಿದ್ದಾರೆ.ಪ್ರೀತಿ ಬೆಸೆದ ಕರೋನಾ ಯಮಧರ್ಮರಾಜ ಎಂಬ ಕಿರು ಚಿತ್ರ  ಇದು ಅವರ ಮೂರನೇ ಕಿರು ಚಿತ್ರ  ಒಂದು ಪ್ರೀತಿ ಎರಡು ಕನಸು,  ಪಾತ್ರದಾರಿಯಾಗಿ ,ಮಲ್ಲಿಕಾರ್ಜುನ್ (ಕೊಪ್ಪಳ) ರೂಪಾ (ವಾಸು) (ಬೆಂಗಳೂರು)  ಮತ್ತಿತರು  ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ, ಬೆಂಗಳೂರಿನ ಸುತ್ತಮುತ್ತ ಈ ಚಿತ್ರವನ್ನು ಚಿತ್ರೀಕರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ,. ವರದಿ – ಸಂಪಾದಕೀಯ

Leave a Reply

Your email address will not be published. Required fields are marked *