(ಗೌಂವಠಾಣ) ಸರಕಾರಿ ಜಮೀನು ಉಳಿವಿಗಾಗಿ ತಾವರಗೇರಾ ಪ್ರಗತಿಪರ ಸಂಘಟನೆಗಳ ಮನವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು ಆದೇಶ ಮೇರೆಗೆ ಇಂದು ಸರ್ವೇಗೆ ಬಂದ  ಅಧಿಕಾರಿಗಳು…..

Spread the love

(ಗೌಂವಠಾಣ) ಸರಕಾರಿ ಜಮೀನು ಉಳಿವಿಗಾಗಿ ತಾವರಗೇರಾ ಪ್ರಗತಿಪರ ಸಂಘಟನೆಗಳ ಮನವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು ಆದೇಶ ಮೇರೆಗೆ ಇಂದು ಸರ್ವೇಗೆ ಬಂದ  ಅಧಿಕಾರಿಗಳು…..

ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ತಾವರಗೇರಾ ಪಟ್ಟಣಕ್ಕೆ ಹೊಂದಿಕೊಂಡಿರುವ (ಗೌಂವಠಾಣ) ಸರಕಾರಿ ಜಮೀನು ಮುಂದಿನ ಪೀಳಿಗೆಗಾಗಿ (ಉಳಿವಿಗಾಗಿ) ತಾವರಗೇರಾ ಪಟ್ಟಣದ ಪ್ರಗತಿಪರ ಸಂಘಟನೆಗಳಿಂದ ಮಾನ್ಯ ಜಿಲ್ಲಾಧಿಕಾರಿಗಳಿಗೆ ಹಾಗೂ ಯೋಜನಾ ನಿರ್ದೇಶಕರಾದ ನಗರಾಭಿವೃದ್ದಿ ಕೋಶ ಅಧಿಕಾರಿಗಳಿಗೆ ಜೊತೆಗೆ ತಾವರಗೇರಾ ಪಟ್ಟಣದ ನಾಡ ಕಚೇರಿ ಇಲಾಖೆಗೆ ದಿನಾಂಕ 28/09/10 ರಂದು ಮನವಿ ಪತ್ರ ಸಲ್ಲಿಸಿದೆವು. ಮನವಿಯಲ್ಲಿ ಸಲ್ಲಿಸಿದ ವಿವರಣೆ :- ತಾವರಗೇರಾ ಪಟ್ಟಣಕ್ಕೆ ಹೊಂದಿಕೊಂಡಿರುವ ಸರ್ಕಾರಿ ಜಮೀನು ಸರ್ವೆ ನಂಬರ್ 54 * ರಲ್ಲಿ ಸುಮಾರು 18 ಎಕರೆ 36 ಗುಂಟೆ ಜಮೀನು ಇದ್ದು, ಜೊತೆಗೆ ಈ ಜಮೀನಿಗೆ ಹತ್ತಿಕೊಂಡಿರುವ ಗೌಂವಠಾಣ ಜಮೀನು ಇರುತ್ತದೆ,ಎರಡು ಸರಕಾರಿ ಜಮೀನಿನಲ್ಲಿ ರಾಜಕೀಯ ಪ್ರಭಾರಿಗಳು, ಊರಿನ ಗಣ್ಯರು.ಅತೀ ಕ್ರಮಿಸಿದ್ದು, ಖಂಡನೀಯವಾಗಿರುತ್ತದೆ. ಜೊತೆಗೆ ಇದೇ ವಿಷಯಕ್ಕೆ ಸಂಬಂದಪಟ್ಟಂತೆ ಹಲವು ಭಾರಿ ಸ್ಥಳಿಯ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು. ಕ್ಯಾರೇ ಎನ್ನದೇ ಬಲಿಷ್ಠ ಸದಸ್ಯರ ಜೊತೆ ಶಾಮೀಲು ಆಗಿದ್ದು ಮೇಲ್ನೋಟಕ್ಕೆ ಕಂಡು ಬರುತ್ತಿತ್ತು ಈ ವಿಷಯಕ್ಕೆ ಸ್ಥಳಿಕ ಪ್ರಗತಿಪರ ಸಂಘಟಿಕರು ಆಗ್ರಹಿಸಿದರು. ಇದರ ನಿಮಿತ್ಯವಾಗಿ ಇಂದು ದಿನಾಂಕ 07/10/2021 ರಂದು ಕುಷ್ಟಗಿ ತಾಲೂಕಾ ತಹಶೀಲ್ದಾರ ಸಾಹೇಬರ ಉಪಸ್ಥಿತಿಯಲ್ಲಿ ಸರ್ಕಾರಿ ನೌಕರರಾದ ಅಜೇಯ ಸರ್ (ಸರ್ವರ್) ರವರು ತಾವರಗೇರಾ ಪಟ್ಟಣಕ್ಕೆ ಆಗಮಿಸಿ ಸ್ಥಳಿಯ ಅಧಿಕಾರಿಗಳಾದ ನಾಡ ಕಚೇರಿಯ ಆರ್.ಐ.ಶರಣಪ್ಪ ದಾಸರ, ಹಾಗೂ ತಲಾಟಿಗಳಾದ ಸೂರ್ಯಕಾಂತ್ ಜೊತೆಗೆ ಸಿಬ್ಬಂದಿಗಳು ಹಾಗೂ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು. ಎಲ್ಲಾ ಅಧಿಕಾರಿಗಳ ಮಧ್ಯಸ್ಥಿತಿಯಲ್ಲಿ ಸರ್ಕಾರಿ ಜಮೀನು ಸರ್ವೆ ನಂಬರ್ 54 * ರಲ್ಲಿ ಸುಮಾರು 18 ಎಕರೆ 36 ಗುಂಟೆ ಜಮೀನು ಸರ್ವೇ ಮಾಡುವುದರ ಜೊತೆಗೆ ಪಟ್ಟಣಕ್ಕೆ ಹೊಂದಿಕೊಂಡಿರುವ (ಗೌಂವಠಾಣ) ಸರಕಾರಿ ಜಮೀನು ಸರ್ವೇ ಮುಖಾಂತರ ಸ್ಥಳಿಯ ಅಧಿಕಾರಿಗಳಿಗೆ ಸರ್ವರ್ ಮುನ್ಸೂಚನೆ ನೀಡಿ ಸರ್ಕಾರಿ ಜಮೀನು ಹಾಗೂ (ಗೌಂವಠಾಣ) ಸರಕಾರಿ ಜಮೀನಿನಲ್ಲಿ ವಾಣಿಜ್ಯ ಮಳಿಗೆ ಹಾಗೂ ಪ್ರಭಾರಿ ವ್ಯಕ್ತಿಗಳ ಮನೆಗಳ ಸಂಪೂರ್ಣ ಮಾಹಿತಿ ತೆಗೆದುಕೊಂಡು ವರದಿ ರಡಿ ಮಾಡಿ ನಮ್ಮ ಇಲಾಖೆಗೆ ಕಳುಹಿಸಿ ಎಂದು  ಹೇಳಿದರು. ಇದರಲ್ಲಿ ಪಾಲುಗೊಂಡವರು ವೆಲ್ಫರ್ ಪಾರ್ಟಿ ಆಪ್ ಇಂಡಿಯಾ ತಾವರಗೇರಾ ಹೋಬಳಿ ಘಟಕ ಅಧ್ಯಕ್ಷರಾದ ಯಮನೂರಪ್ಪ ಬಿಳೆಗುಡ್ಡ, ರಾಜ್ಯ ಕಾರ್ಯಕರಣಿ ಸದಸ್ಯರಾದ ರಾಜಾನಾಯಕ, ಆನಂದ್ ಬಂಡಾರಿ, ಶ್ಯಾಮೀದಸಾಬ್ ಮೇಣೆದಾಳ, ಕ.ನ.ಸೇ ತಾಲೂಕಾ ಅಧ್ಯಕ್ಷರಾದ ಶ್ಯಾಮೂರ್ತಿ ಅಂಚಿ, ಜೊತೆಗೆ ಕ.ನ.ಸೇ ಹೋಬಳಿ ಘಟಕದ ಅಧ್ಯಕ್ಷರಾದ ಸಿದ್ದು ಪುಂಡುಗೌಡ್ರು, ರವಿ ಆರೇರ್, ಹನುಮೇಶ, ಖಾಜಾಖಾನ್, ಶ್ಯಾಮ ದಾಸನೂರ, ಮಂಜುನಾಥ ಎಸ್.ಕೆ. ಆರ್.ಬಿ.ಅಲಿಆದಿಲ್, ಚಂದ್ರು ಸಿ.ಎಮ್, ಅಂಬಣ್ಣ ಕಲಾಲ್, ರಮೇಶ ಗದ್ದಿ,  ಸಂಗಪ್ಪ ಸುಣಗಾರ, ನಾಗೇಶ ಹುನಗುಂದ್, ಮಲ್ಲೇಶ ಹುನುಗುಂದ, ವೆಂಕಟೇಶ ಗೋತಗಿ, ಶರಣಪ್ಪ ಕಲಾಲ್, ಶ್ಯಾಮೀದ್ ಸೈಕಲ್ ಶಾಪ್, ಶ್ಯಾಮೀದ್ ಟೈಲರ್, ವಿಜೇಯ ಚಲುವಾದಿ ಹಾಗೂ ಊರಿನ ಪ್ರಮುಖರು., ಇತರರು ಭಾಗಿಯಾಗಿದ್ದರು.

ವರದಿ – ಉಪ-ಸಂಪಾದಕೀಯ

Leave a Reply

Your email address will not be published. Required fields are marked *