ಸದಲಗಾ  “ಸ್ಥಳೀಯ ಉತ್ಪನ್ನಗಳನ್ನು ಉತ್ತೇಜಿಸೋಣ, ಆತ್ಮನಿರ್ಭರ ಭಾರತದತ್ತ ಹೆಜ್ಜೆ ಹಾಕೋಣ”…

Spread the love

ಸದಲಗಾ  ಸ್ಥಳೀಯ ಉತ್ಪನ್ನಗಳನ್ನು ಉತ್ತೇಜಿಸೋಣ, ಆತ್ಮನಿರ್ಭರ ಭಾರತದತ್ತ ಹೆಜ್ಜೆ ಹಾಕೋಣ”…

ರಾಷ್ಟ್ರಪಿತ ಮಹಾತ್ಮ ಗಾಂಧಿಜಿಯವರ 152 ನೇ ಜಯಂತಿಯ ಅಂಗವಾಗಿ, ಸದಲಗಾ ಪಟ್ಟಣದಲ್ಲಿ ಆಚಾರ್ಯ 1008 ವಿದ್ಯಾಸಾಗರ ಮಹಾರಾಜರ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಮಹಾಕವಿ ಪಂಡಿತ ಭುರಾಮಲ ಸಾಮಾಜಿಕ ಸಹಕಾರ ಕೈಮಗ್ಗ ತರಬೇತಿ ಕೇಂದ್ರಕ್ಕೆ ಮುಜರಾಯಿ, ಹಜ ಮತ್ತು ವಕ್ಫ್ ಇಲಾಖೆಯ ಸಚಿವರಾದ ಸೌ. ಶಶಿಕಲಾ ಜೊಲ್ಲೆ ಜಿ ಹಾಗೂ ಚಿಕ್ಕೋಡಿ ಲೋಕಸಭೆ ಸಂಸದರಾದ ಮಾನ್ಯ ಶ್ರೀ ಅಣ್ಣಾಸಾಹೇಬ ಜೊಲ್ಲೆ ಜಿ ಯವರು ಭೇಟಿ ನೀಡಿದರು. ಈ ವೇಳೆ ಚರಕದ ಮೂಲಕ ನೂಲು ನೇಯ್ದು, ಅಲ್ಲಿ ತಯಾರಿಸಿದ ಖಾದಿ ವಸ್ತುಗಳನ್ನು ವೀಕ್ಷಿಸಿದರು.  ಆಧುನಿಕ ಶೈಲಿಯ ಭರಾಟೆಯ ನಡುವೆಯೂ ಚರಕದ ಮೂಲಕ ನೂಲು ನೇಯ್ದು ಉಡುಪು ಸಿದ್ಧಪಡಿಸಿ, ಮಾರುಕಟ್ಟೆಯಲ್ಲಿ ಜನರ ಅಭಿರುಚಿಗೆ ತಕ್ಕಂತೆ ಮಾರಾಟ ಮಾಡುತ್ತಿರುವ ಈ ಸಂಸ್ಥೆಯ ಕಾರ್ಯ ನಿಜಕ್ಕೂ ಮೆಚ್ಚುವಂತದ್ದು. ಸ್ಥಳೀಯ ಕೈಮಗ್ಗದ ಉತ್ಪನ್ನಗಳಿಗೆ ಉತ್ತೇಜನ ನೀಡುವ ಮೂಲಕ  ಸನ್ಮಾನ್ಯ ಪ್ರಧಾನಮಂತ್ರಿಗಳಾದ ಶ್ರೀ ನರೇಂದ್ರ ಮೋದಿಜಿಯವರ ಮಹತ್ವಕಾಂಕ್ಷೆಯ ‘ವೋಕಲ್ ಫಾರ್ ಲೋಕಲ್ ಅಭಿಯಾನಕ್ಕೆ ಕೈಜೋಡಿಸೋಣ ಎಂದು ಹೇಳಿದರು.

ವರದಿ – ಮಹೇಶ ಶರ್ಮಾ

Leave a Reply

Your email address will not be published. Required fields are marked *