ಶರಣ ಸಂಸ್ಕೃತಿ ಉತ್ಸವ 2021, ರ  ಕುರಿತು ಬರೆದ ಲೇಖನ…..

Spread the love

ಶರಣ ಸಂಸ್ಕೃತಿ ಉತ್ಸವ 2021, ರ  ಕುರಿತು ಬರೆದ ಲೇಖನ…..

12 ನೇ ಶತಮಾನದ ಬಸವಾದಿ ಶರಣರ ಆದರ್ಶ ಸಂಸ್ಕೃತಿಯ ಆಶಯದಂತೆ ವೈಚಾರಿಕತೆಯನ್ನು ಈ ನೆಲದಲ್ಲಿ ಬಿತ್ತುವ ಉದ್ದೇಶ ಹಾಗೂ ಸಮಾನತೆ, ಸಹೋದರತೆ, ನಿಸ್ವಾರ್ಥ ಸೇವೆ, ಕಾಯಕದ ಮಹತ್ವ ಸಾರುವುದು.ಅನ್ನ , ಅಕ್ಷರ, ಆರೋಗ್ಯ, ದಾಸೋಹ ಸೇವೆಯನ್ನು ಮಾಡುತ್ತ ನೂರಾರು ವರ್ಷಗಳಿಂದ ಸಮಾಜ ಸುಧಾರಣೆಗಾಗಿ ಶ್ರಮಿಸುತ್ತಿರುವ  ಚಿತ್ರದುರ್ಗದ ಮುರುಘಾ ಶ್ರೀಮಠವು ಒಂದಾಗಿದೆ.  ಈ ಮಠವು 12ನೆಯ ಶತಮಾನದ ಮನುಕುಲದ ಉದ್ಧಾರಕ ಬಸವಣ್ಣನವರು ಸೇರಿದಂತೆ ಶಿವಶರಣರ ವಚನಗಳ ಅನುಭಾವದ ಅರಿವು ಜನಸಾಮಾನ್ಯರಿಗೆ ತಲುಪಿಸುವ ಕಾಯಕದಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದೆ.ಅಲ್ಲದೆ ಸಕಲ ಜೀವಾತ್ಮರೀಗೊ ಲೇಸನ್ನೇ ಬಯಸುವ ದಿಸೆಯಲ್ಲಿ ದುಡಿಯುವ ವರ್ಗಗಳ  ಶ್ರೇಯಸ್ಸು ಬಯಸುತ್ತಾ ಸಾಗುತ್ತಿದೆ. ಈ ಮಾಹಾ ಸದಾಶಯದ ಪರಿಕಲ್ಪನೆಯ ಹಿನ್ನೆಲೆಯಲ್ಲಿ ಪೂಜ್ಯ ಶಿವಮೂರ್ತಿ ಮುರುಘಾ ಶರಣರ ನೇತೃತ್ವದಲ್ಲಿ ಶರಣ ಸಂಸ್ಕೃತಿ ಉತ್ಸವವು ಪ್ರತಿ ವರ್ಷ ಅರ್ಥಪೂರ್ಣವಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ಅದೇ ರೀತಿ ಈ ಬಾರಿಯೂ ಡಾ.ಶಿವಮೂರ್ತಿ ಮುರುಘಾ ಶರಣರ ಪೀಠಾರೋಹಣದ ತೃತೀಯ ದಶಮಾನೋತ್ಸವ ಸವಿನೆನಪಿನಲ್ಲಿ ಶರಣ ಸಂಸ್ಕೃತಿ ಉತ್ಸವ, ಸಹಜ ಶಿವಯೋಗ, ಸಾವಿರಕಿಂತಲೂ ಅಧಿಕ ಮಠಾಧೀಶರಿಂದ ವಿಶ್ವ ಕಲ್ಯಾಣಕ್ಕಾಗಿ ಇಷ್ಟಲಿಂಗ ಪೂಜೆ ನೆರವೇರಲಿದೆ. ಅಲ್ಲದೆ ಸಾವಿರ ಮಠಾಧೀಶರ ಸಮ್ಮುಖದಲ್ಲಿ ಸರ್ವಜನಾಂಗದ ಮಠಾಧೀಶರ ಬೃಹತ್ ಸಮಾವೇಶ ಸಹ ಜರುಗಲಿದೆ.ಅಕ್ಟೋಬರ್ 8 ರಿಂದ 18 ರ ವರೆಗೆ  ಜರುಗುವ ಶರಣ ಸಂಸ್ಕೃತಿ ಉತ್ಸವವು ಗ್ರಾಮೀಣ ಸಂಸ್ಕೃತಿಯ ಅನಾವರಣದ ಜೊತೆ ಜೊತೆಗೆ ಉಪನ್ಯಾಸ,ವಿವಿಧ ವಿಚಾರಗೋಷ್ಠಿಗಳು ನಡೆಯಲಿದ್ದು, ನಾಡಿನ ಹಲವು ಚಿಂತಕರು ಮಠಾಧೀಶರು ಭಾಗವಹಿಸಲಿದ್ದು, ಅತ್ಯುತ್ತಮ ಚಿಂತನ, ಮಂಥನ ನಡೆಯುತ್ತದೆ.ಮಾನವನ ಸಮಾಜಮುಖಿ ವಿಚಾರಗಳ ಚಿಂತನ-ಮಂಥನದ ವೇದಿಕೆಯಾಗಲಿದೆ. ಇನ್ನು ಕ್ರೀಡಾ ಪಟುಗಳಿಗೆ ಜಮುರಾ ಕಪ್ ಪಂದ್ಯಾವಳಿ,  ಒತ್ತಡ ರಹಿತ ಜೀವನ, ಉತ್ತಮ ಆರೋಗ್ಯ ನೀಡುವ ಉದ್ದೇಶದಿಂದ ಸಹಜ ಶಿವಯೋಗ, ರೈತರ ಸಾಧಕ-ಬಾಧಕಗಳ ಮೇಲೆ ಬೆಳಕು ಚೆಲ್ಲುವ ಕೃಷಿಮೇಳ, ಯುವಜನರನ್ನೂ ಪ್ರೇರೇಪಿಸಲು  ಯುವಜನಮೇಳ,  ಸಂಗೀತೋತ್ಸವ, ಹಾಸ್ಯ ನಾಟಕೋತ್ಸವ,  ಜಾನಪದ ಕಲಾಮೇಳ, ಸಾಹಸ ಕ್ರೀಡೋತ್ಸವ ಹಾಗೂ ಬಸವಶ್ರೀ ಪ್ರಶಸ್ತಿ ಪ್ರದಾನ ಇವೆಲ್ಲವೂ ಉತ್ಸವದ ಪ್ರಮುಖ ಮೈಲುಗಲ್ಲಾಗಿವೆ.ಈ ಉತ್ಸವವು ಉತ್ತರ ಕರ್ನಾಟಕದ ಭಾಗದಲ್ಲಿ ನಡೆಯುವ ಪರ್ಯಾಯ ಶರಣರ ದಸರಾ ಉತ್ಸವ ಆಗಿದ್ದು, ಬೇರೆ ಬೇರೆ ಜಿಲ್ಲೆಗಳು ಸೇರಿದಂತೆ ಹಲವು ರಾಜ್ಯಗಳಿಂದ ಸಾವಿರಾರು ಸಂಖ್ಯೆಯಲ್ಲಿ ಜನಸಾಮಾನ್ಯರು,ಬಸವಾಭಿಮಾನಿಗಳು ಶ್ರೀಮಠಕ್ಕೆ ಬರುತ್ತಾರೆ. ಪ್ರತಿದಿನ ಲಕ್ಷಾಂತರ ಜನರಿಗೆ ಶ್ರೀಮಠದಲ್ಲಿ ದಾಸೋಹ ಪ್ರಸಾದದ ವ್ಯವಸ್ಥೆ ಇರುತ್ತದೆ.ಶಿವಮೂರ್ತಿ ಶರಣರು : ಪೂಜ್ಯ ಶಿವಮೂರ್ತಿ ಮುರುಘಾ ಶರಣರು ತಮ್ಮ ಇಪ್ಪತ್ತನೆಯ ವಯಸ್ಸಿನಲ್ಲಿಯೇ ಸನ್ಯಾಸ ದೀಕ್ಷೆಯನ್ನು ಸ್ವೀಕರಿಸಿ ಶ್ರೀ ಮುರುಘರಾಜೇಂದ್ರಮಠದಲ್ಲಿ ಸಾಧಕರಾದರು. ಇವರ ಸರಳ, ಸೌಜನ್ಯ, ಸಜ್ಜನಿಕೆಯಿಂದ ಜಗದ್ಗುರು ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳವರ ಪ್ರೀತಿಗೆ ಪಾತ್ರರಾಗಿ ಮಹಾಸಂಸ್ಥಾನದ ಶಾಖಾಮಠವಾದ ಶಿರಸಿಯ ರುದ್ರದೇವರ ಮಠಕ್ಕೆ 1978ರಲ್ಲಿ ಉತ್ತರಾಧಿಕಾರಿಯಾಗಿ ನೇಮಕವಾಗಿರುತ್ತಾರೆ. ನಂತರ 1984ರಲ್ಲಿ ಹಾವೇರಿಯ ಹೊಸಮಠದ ಉತ್ತರಾಧಿಕಾರತ್ವ ಸಹ ಇವರ ಹೆಗಲೇರಿತು. ಹೀಗೆ ಈ ಎರಡೂ ಮಠಗಳಲ್ಲಿ ಕೈಗೊಂಡ ಹತ್ತು ಹಲವು ಮೌಲ್ಯಾಧಾರಿತ ಜನಜಾಗೃತಿ ಕಾರ್ಯಕ್ರಮಗಳಿಂದ ಆಕರ್ಷಿತರಾದ ಹಿರಿಯ ಜಗದ್ಗುರುಗಳು,  ಇವರ ನಿಷ್ಕಲ್ಮಶ ನಿಸ್ವಾರ್ಥ ಸೇವಾಮನೋಭಾವವನ್ನು ಕಂಡು ಶ್ರೀ ಮುರುಘಾ ಮಠದ ಉತ್ತರಾಧಿಕಾರಿಗಳನ್ನಾಗಿ 1991ರಲ್ಲಿ ನೇಮಕ ಮಾಡಿಕೊಂಡರು. ಡಾ. ಶಿವಮೂರ್ತಿ ಮುರುಘಾ ಶರಣರು ಚಿತ್ರದುರ್ಗ ಶ್ರೀ ಮುರುಘಾಮಠದ ಪೀಠಾಧಿಪತಿಯಾಗಿ ಆಯ್ಕೆಗೊಂಡ ನಂತರ ಮೊದಲು ಮಾಡಿದ ಕಾರ್ಯವೆಂದರೆ ತಮ್ಮ ಹೆಸರಿನ ಮುಂದೆ ಇದ್ದ ಜಗದ್ಗುರು ಪದವಿಯನ್ನು ತೆಗೆಸಿ ಹಾಕಿ ಶರಣರು ಎಂದರೇ ಸಾಕು ಎಂದು ಹೇಳಿ ಔದಾರ್ಯ ಮೆರೆದಿದ್ದು ಭಾರತ ದೇಶದಲ್ಲಿ ಪ್ರಥಮ, ಅಲ್ಲದೆ ಇನ್ನೊಂದು ಸುವರ್ಣಾಕ್ಷರದಲ್ಲಿ ಬರೆದ ಐತಿಹಾಸಿಕ ಘಟನೆ ಎಂದರೆ ತಪ್ಪಾಗಲಾರದು. ಆಡಂಬರಕ್ಕೆ ಕಡಿವಾಣ ಹಾಕಿ ಸರಳತೆಯ ಬದುಕನ್ನು ರೂಢಿಸಿಕೊಂಡಿದ್ದಾರೆ. ಅದರಂತೆ ಚಾಚೂತಪ್ಪದೆ ನಡೆದುಕೊಂಡು ಬರುತ್ತಿದ್ದಾರೆ. ಇದೀಗ ಶರಣರು ಪೀಠಾಧಿಕಾರಿಯಾಗಿ 30 ನೇ ವರ್ಷಕ್ಕೆ ಕಾಲಿಡುತ್ತಿರುವುದು ಬಹಳ ಸಂತಸವಾಗುತ್ತಿದೆ.ಹೀಗೆ ಇವರ ಸೇವೆ ವಿಶ್ವಾದ್ಯಂತ ಸಾಗಲಿ, ಬಸವಾದಿ ಶರಣರ ಸಂದೇಶಗಳನ್ನು ಸಾಗರದಾಚೆಗೂ ತಲುಪಿಸಲಿ ಎಂಬುದೇ, ಸಮಸ್ತ  ಬಸವಾಭಿಮಾನಿಗಳ ಹಾಗೂ ಪ್ರಗತಿಪರ ಚಿಂತಕರ ಸದಾಶಯವಾಗಿದೆ.  ಶರಣ ಸಂಸ್ಕೃತಿ : ಶಿವಮೂರ್ತಿ ಮುರುಘಾ ಶರಣರು ಪ್ರತಿ ವರ್ಷವೂ ಆಚರಿಸಿದಂತೆ ಈ ವರ್ಷವೂ  ಶರಣ ಸಂಸ್ಕೃತಿ ಉತ್ಸವವು ಆಚರಣೆ ಮಾಡುತ್ತಿದ್ದಾರೆ. ಈ ಉತ್ಸವವೂ ಯಾವುದೇ ಜಾತಿ, ಮತ, ಪಂಥಗಳಿಗೆ ಸೀಮಿತವಾಗದೇ ಸರ್ವರೂ ಪಾಲ್ಗೊಳ್ಳುವ ಉತ್ಸವವಾಗಿದ್ದು, ಇದು ಭಾರತೀಯ ಪರಂಪರೆ ಮತ್ತು ವೈಜ್ಞಾನಿಕ ಮತ್ತು ವೈಚಾರಿಕ ಮೌಲ್ಯಗಳನ್ನು ಪ್ರತಿಬಿಂಬಿಸುತ್ತದೆ.ರಾಜಪ್ರಭುತ್ವ ಪದ್ಧತಿಯಲ್ಲಿ ತಮ್ಮ ಸ್ವಾರ್ಥ್ಯ‌ಕ್ಕಾಗಿ ಜಾತಿ ಪದ್ಧತಿ ಹುಟ್ಟು ಹಾಕಿ ಜನರನ್ನು ಶೋಷಣೆ ಮಾಡುತ್ತಿರುವುದನ್ನು ಮನಗಂಡು 12ನೇ ಶತಮಾನದಲ್ಲಿಯೇ ಬಸವಾದಿ ಶರಣರು ತಮ್ಮ ವಚನಗಳ ಮೂಲಕ ಸಮಾಜದಲ್ಲಿ ನಡೆಯುವ ಅಂಧಾಕಾರ, ಮೂಡನಂಬಿಕೆ, ಶೋಷಣೆಯನ್ನು ಪ್ರಶ್ನಿಸಿದ್ದಾರೆ. ಪ್ರತಿಭಟನೆ ಮಾಡಿದ್ದಾರೆ. ಜೊತೆಗೆ ನಿರಾಕರಿಸಿದಾರೆ. ಅಲ್ಲದೇ ಮೌಲ್ಯಾಧಾರಿತ ಮಾರ್ಗಗಳನ್ನು ಸೂಚಿಸುವ ಕೆಲಸವನ್ನು ಮಾಡಿದ್ದಾರೆ. ಇನ್ನು ಬಸವಾದಿ ಶರಣರು ತಮ್ಮ ಅನುಭವ ಮಂಟಪದಲ್ಲಿ  ಜರ್ವ ಜನಾಂಗದ ಶರಣರಿಗೆ ಸಮಾನತೆಯ ಸೌಭಾಗ್ಯ ನೀಡಿ, ಅಂಧತ್ವದ ಕತ್ತಲೆಯನ್ನು ಹೊಡೆದು ಹಾಕಿವ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಅನುಭವ ಸಾರದ ವಚನಗಳು ರಚಿಸಿ, ಜನಸಾಮಾನ್ಯರಿಗೆ ಸುಜ್ಞಾನವನ್ನು ಧಾರೆಯೆರೆದು,ಸತ್ಯದ ವಿಚಾರಗಳನ್ನು ಸಾಕಾರಗೊಳಿಸಿರುವ ಕೆಲಸಗಳನ್ನು ಮಾಡುವ ಮೂಲಕ ಜಗತ್ತಿಗೆ ನೈಜತೇ ಅರಿವು ತಿಳಿಸಿದ್ದಾರೆ. ಇದಲ್ಲದೆ ಜ್ಞಾನದ ಹಸಿವಿಲ್ಲದೆ ಕೆಟ್ಟ ಸಂಸ್ಕೃತಿಯನ್ನು ಹುಟ್ಟು ಹಾಕಿ ಸಮಾಜದಲ್ಲಿ ಶೋಷಣೆ ಮಾಡುತ್ತಿರುವವರ ವಿರುದ್ಧ ಧ್ವನಿ ಎತ್ತಿದವರು ನಮ್ಮ 12 ನೇ ಶತಮಾನದ ಶರಣರು ಎನ್ನುವುದು ನಾವ್ಯಾರೂ ಮರೆಯಬಾರದು. ಶೋಷಣೆಗೆ ಒಳಗಾದ ಜನರಿಗೆ ಅರಿವಿನ ಜ್ಞಾನವನ್ನು ತಿಳಿಸುವ ಮೂಲಕ ಅಜ್ಞಾನವನ್ನು ತೊಲಗಿಸಿ ಸುಜ್ಞಾನದ ಕಡೆ ಹೆಜ್ಜೆ ಹಾಕಿಸಿದ್ದಾರೆ. ಸಮಾಜದಲ್ಲಿ ಸ್ವಾತಂತ್ರ್ಯ, ಸಮಾನತೆ ಸಹೋದರತೆ ಪ್ರೀತಿ ಎಲ್ಲರಲ್ಲಿಯೋ ಬಿತ್ತಿ,  ಅಪ್ಪಿಕೊಳ್ಳುವ ಮೂಲಕ ಜನರಲ್ಲಿ ಮಾನವೀಯ ಮೌಲ್ಯಗಳನ್ನು  ಬೆರೂರಿದ್ದಾರೆ. ಅರಿವಿನ ಜ್ಯೋತಿಯ ಆರಾಧಕರು, ಅನ್ವೇಷಕರು, ಬೆಳಕಿನ ಅನ್ವೇಷಣೆಯೊಂದಿಗೆ ಜೀವನ ಸಾಗಿಸಿದವರು ಶರಣರು.ಅವರು ಹೊತ್ತಿಸಿದ ಜ್ಯೋತಿಯ ಪ್ರಕಾಶನವನ್ನು ಎಲ್ಲರೂ ಆಂತರ್ಯದಲ್ಲಿ ಅಳವಡಿಸಿಕೊಳ್ಳಬೇಕಿದೆ. ಬಂಡವಾಳಶಾಹಿಗಳಿಗಿಂತ ನಮ್ಮ ದೇಶಕ್ಕೆ ಹೃದಯವಂತ ಜನಸಾಮಾನ್ಯರಿಂದ ಸಮೃದ್ಧವಾಗಬೇಕಾಗಿದೆ. ನಮ್ಮ ದೇಶದಲ್ಲಿ ಅನೇಕ ಮಹಿಳೆಯರು ಕೆಲವು ಧರ್ಮಗಳಲ್ಲಿ ಧಾರ್ಮಿಕ ಸ್ವಾತಂತ್ರ್ಯದಿಂದ ವಂಚಿತವಾಗಿದ್ದಾರೆ. ಆದರೆ ಈಗಿನ ಸಮಾಜದಲ್ಲಿ ಮಹಿಳೆಗೆ ಸರಿಯಾದ ಗೌರವ, ಸ್ಥಾನಮಾನ ಸಿಕ್ಕಿಲ್ಲ. ಆದರೆ 12ನೇ ಶತಮಾನದಲ್ಲಿ ಬಸವಾದಿ ಶಿವಶರಣರು ಅನುಭವ ಮಂಟಪದಲ್ಲಿ ಮಹಿಳೆಯರಿಗೆ ಪ್ರಪ್ರಥಮ ಭಾರಿಗೆ ಧಾರ್ಮಿಕ ಸ್ವಾತಂತ್ರ್ಯ ನೀಡಿದ್ದಲ್ಲದೇ ಅವರು ವಿಚಾರಗಳನ್ನು ಹಂಚಿಕೊಳ್ಳಲು ಮುಕ್ತವಾದ ಸ್ವಾತಂತ್ರ್ಯವನ್ನು ನೀಡುವ ಮೂಲಕ ವಿಶ್ವಕ್ಕೆ ಮಾದರಿಯಾಗಿದಾರೆ . ಅರ್ಚನೆ ಮಾಡಬೇಕಾದರೆ ಅರಿವು ಬೇಕು. ಅರಿವಿನ ದೀಪ ಹಿಡಿದುಕೊಂಡವ ಅನುಭಾವ ಹುಡುಕುತ್ತಾ ಹೋಗಬೇಕು. ಅಂತರಾಳದಲ್ಲಿ ಅರಿವಿನ ಜ್ಯೋತಿ ಹೊತ್ತಿಸಿಕೊಂಡಾಗ ಮಾತ್ರ ಅನುಭವದ ಜೀವನ ನಮ್ಮದಾಗುತ್ತದೆ ಎನ್ನುವುದು ಶರಣ ಸಂಸ್ಕೃತಿ. ಹೀಗಾಗಿ ಅರಿವಿನ ಶ್ರೀಮಂತಿಕೆ ಶರಣ ಸಂಸ್ಕೃತಿಯಿಂದ ಎಲ್ಲರೂ ಪಡೆಯಬೇಕು ಎಂಬುದೇ ಶರಣ ಸಂಸ್ಕೃತಿ ಉತ್ಸವ ಆಶಯ.ಇದೇ ಆಶಯವನ್ನು ಹೊತ್ತು ಶಿವಮೂರ್ತಿ ಮುರುಘಾ ಶರಣರು ಹಗಲಿರುಳು ಲೆಕ್ಕಿಸದೆ ದೇಶ ಸೇರಿದಂತೆ ವಿಶ್ವದ ಉನ್ನತಿಗಾಗಿ ಶ್ರಮಿಸುತ್ತಿದ್ದಾರೆ.

ದೇಶದ ಹೆಮ್ಮೆಯ ಮಠ :  ದೇಶದ  ಹೆಮ್ಮೆಯ ಪ್ರಗತಿಪರ ಮಠ ಎಂದೇ ಪ್ರಸಧ್ಧಿ ಹೊಂದಿರುವ ಹಾಗೂ ಸಮಾಜಿಕ, ಧಾರ್ಮಿಕ, ಶೈಕ್ಷಣಿಕ ,ಸಾಹಿತ್ಯ ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಮಾಡಿರುವ. ಬಡವರ ,ನಿರ್ಗತಿಕರ,ಅನಾಥ ಮಕ್ಕಳ ಆಶಾಕಿರಣವಾಗಿರುವ, ಸಮಾನತೆಯ ಸಮತಾವಾದ ಮೌಲ್ಯಗಳನ್ನು ಈ ದೇಶದಲ್ಲಿ ಬಿತ್ತುತಿರುವ ಜನಸಾಮಾನ್ಯರ ಪ್ರೀತಿಯ ಮಠ ಎಂದೇ ಪ್ರಖ್ಯಾತಿ ಪಡೆದ ನಮ್ಮ ಚಿತ್ರದುರ್ಗದ ಪೂಜ್ಯ ಶಿವಮೂರ್ತಿ ಮುರುಘಾ ಶರಣರ ಮುರುಘಾಮಠ. ಶ್ರೀ ಮುರುಘಾಮಠವು ಇಷ್ಟೊಂದು ಬೆಳಕಿಗೆ ಬರಲು ಈಗಿನ ಪೀಠಾಧಿಪತಿಗಳಾದ ಪೂಜ್ಯ ಶಿವಮೂರ್ತಿ ಶರಣರ ಅವಿರತ ಪ್ರಯತ್ನದ ಕಾರಣದಿಂದ ಇಂದು ದೇಶಾದ್ಯಂತ ಬೆಳಗುತ್ತಿದೆ.ಅನ್ನ , ಅಕ್ಷರ, ಆರೋಗ್ಯ ದಾಸೋಹ ಹೀಗೆ ತ್ರಿವಿಧ ದಾಸೋಹ ಸೇವೆಗಳನ್ನು ನಾಡಿನ ಜನಸಾಮಾನ್ಯರಿಗೆ ಸಲ್ಲಿಸುತ್ತಾ, ನೂರಾರು ವರ್ಷಗಳಿಂದ ಸಮಾಜ ಸುಧಾರಣೆಗಾಗಿ ಹಗಲಿರುಳು ಶ್ರಮಿಸುತ್ತಿರುವ ಶ್ರೀಮಠವು, 12ನೆಯ ಶತಮಾನದ ಮನುಕುಲದ ಉದ್ಧಾರಕ ಅಣ್ಣ ಬಸವಣ್ಣನವರು ಸೇರಿದಂತೆ ಇಡೀ ಶರಣ ಸಂಕದ ಶಿವಶರಣರ ವಚನತತ್ತ್ವಗಳನ್ನು  ಪ್ರಸಾರ ಮಾಡಿ, ಜನಮಾನಸಕ್ಕೆ ಮುಟ್ಟಿಸುವ ಕಾಯಕದಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದೆ, ಹೀಗೆ ಈ ಮಠವು ಸಮಾಜಿಕ ಸೇವಾ ಕಾರ್ಯಗಳು ಮಾಡುವ ಮೂಲಕ ಗೌರವ ಹೊಂದಿದೆ ಎಂದು ಹೇಳಿದರೆ ತಪ್ಪಾಗಲಾರದು.ಇದೆ ತಿಂಗಳು ಅಕ್ಟೋಬರ್ 8 ರಿಂದ 18 ರವರೆಗೆ ಅತ್ಯಂತ ಶಿಸ್ತು ಬದ್ದತೆಯ, ವೈಜ್ಞಾನಿಕ ಮತ್ತು ವೈಚಾರಿಕತೆಯ ತಳಹದಿ ಮೇಲೆ ಶರಣ ಸಂಸ್ಕೃತಿ ಉತ್ಸವ ಜರುಗುತ್ತಿದೆ.ಹಾಗಾಗಿ ಹಿಂದಿನಿಂದಲೂ ಶ್ರೀಮಠದ ಈ ಉತ್ಸವವು ಮಧ್ಯ ಕರ್ನಾಟಕದ ಶರಣ ಸಂಸ್ಕೃತಿ ಮಹೋತ್ಸವವಾಗಿದೆ. ಪ್ರಗತಿಪರ ವಿಚಾರಗಳಿಂದ ಸಮಾಜವನ್ನು ತಿದ್ದುವ ಕೆಲಸವನ್ನು ಮುರುಘಾಮಠ ಮಾಡುತ್ತಿದೆ.  ಈ ಶರಣ ಸಂಸ್ಕೃತಿ ಉತ್ಸವವು, ಶಿವಶರಣರ ವಿಚಾರ ಧಾರೆಗಳ ವೈಚಾರಿಕ ಮತ್ತು ವೈಜ್ಞಾನಿಕ ಹಬ್ಬ, ಬಸವಣ್ಣನವರ ಆದಿಯಾಗಿ ಶರಣರ ವಿಚಾರಧಾರೆಗಳು ದೇಶದ ಜನಸಾಮಾನ್ಯರಿಗೆ ತಲುಪಿಸುವ ಉದ್ದೇಶದೂಂದಿಗೆ ಮತ್ತು ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ಶರಣರ ನಿಲುವುಗಳನ್ನು ದೇಶಾದ್ಯಂತ ಬಿತ್ತರಿಸುವ ಕಾರ್ಯ ಈ ಶರಣ ಉತ್ಸವದಲ್ಲಿ ನಡೆಯಲಿದೆ ಹಾಗೂ ಈ ಕಾರ್ಯಕ್ರಮಕ್ಕೇ ನಾವೆಲ್ಲರೂ ಸಾಕ್ಷಿಗಳಾಗಿ ಶರಣ ಸಂಸ್ಕೃತಿ ಸಂದೇಶಗಳನ್ನು ತಿಳಿದುಕೂಳ್ಳುವುದು ಅವಶ್ಯಕತೆ ಇದೆ.ಹಾಗಾಗಿ ಶರಣರ ವಿಚಾರಗಳನ್ನು  ಪ್ರತಿಯೊಬ್ಬ ವ್ಯಕ್ತಿಗೂ ಈ ಶರಣ ಸಂಸ್ಕೃತಿ ಕಾರ್ಯಕ್ರಮದಿಂದ ತಲುಪಲಿ ಎನ್ನುವ ಅದಮ್ಯ ಬಯಕೆ ಪೂಜ್ಯ ಶಿವಮೂರ್ತಿ ಶರಣರದು.ಹಾಗೆ ಈ ವರ್ಷವೂ ಕೂಡಾ ಜನರನ್ನು ಚಿಂತನೆಗೆ ಹಚ್ಚುವ ನಿಟ್ಟಿನಲ್ಲಿ ಮಹತ್ವದ ಗೋಷ್ಟಿಗಳು ಸೇರಿದಂತೆ ಮತ್ತಿತರ ಕಾರ್ಯಕ್ರಮ ಇರುತ್ತವೆ.ಬಸವತತ್ವ ಧ್ವಜಾರೋಹಣ, ವಚನ ಕಮ್ಮಟ ಪರೀಕ್ಷೆಯ ವಿಜೇತರಿಗೆ ಪ್ರಶಸ್ತಿ ಪ್ರದಾನ ಮತ್ತು ಶರಣ ದಂಪತಿಗಳಿಗೆ ಗೌರವಾರ್ಪಣೆ ನಡೆಯಲಿದೆ. ವಿನಂತಿಯ ನುಡಿ : ಬಸವಣ್ಣನವರ ವಚನಾದರ್ಶವಾದ ಜಾತಿ, ಮತ, ವರ್ಣ, ಲಿಂಗಭೇದ, ವರ್ಗರಹಿತ ಸಮಾಜವೇ ಸಂಸ್ಕೃತಿ ಎನ್ನುವುದನ್ನು ಪ್ರತಿಪಾದಿಸುವ  ಹಾಗೂ ಶರಣರ ವೈಚಾರಿಕ ವಿಚಾರಗಳನ್ನು ತಿಳಿಸುವ ಉದ್ದೇಶದಿಂದ ಜನರಲ್ಲಿ ಸಮಾನತೆ ಸಾರುವ, ಬಸವಾದಿ ಶರಣರ ಅನುಭವ ಮಂಟಪದ ಪರಿಕಲ್ಪನೆಗಳನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಶರಣ ಸಂಸ್ಕೃತಿ ಉತ್ಸವ ವೈಜ್ಞಾನಿಕವಾಗಿ ಹಾಗೂ ಅರ್ಥಪೂರ್ಣವಾಗಿ ಆಚರಣೆ ಮಾಡಲಾಗುತ್ತದೆ.ಕಾರಣ ಪಕ್ಷಾತೀತವಾಗಿ ನಿಸ್ವಾರ್ಥ ಮನೋಭಾವದಿಂದ ಈ  ಶರಣ ಸಂಸ್ಕೃತಿ ಉತ್ಸವದಲ್ಲಿ, ಸರ್ವ ಜನಾಂಗದ ಬಂಧುಗಳು ಪಾಲ್ಗೊಂಡು,ಯಶಸ್ವಿಗೊಳಿಸಬೇಕಾಗಿ ವಿನಂತಿ.

ಲೇಖಕರು – ಸಂಗಮೇಶ ಎನ್ ಜವಾದಿ.

Leave a Reply

Your email address will not be published. Required fields are marked *