76ನೇ ದಿನ ಮುಂದುವರೆದ ಅನಿರ್ಧಿಷ್ಟ ಧರಣಿಗೆ ಮಸ್ಕಿ ತಾಲೂಕಿನ ರೈತರ ಬೆಂಬಲ….

Spread the love

76ನೇ ದಿನ ಮುಂದುವರೆದ ಅನಿರ್ಧಿಷ್ಟ ಧರಣಿಗೆ ಮಸ್ಕಿ ತಾಲೂಕಿನ ರೈತರ ಬೆಂಬಲ….

*ಅಧಿಕಾರಿಗಳು ಗುತ್ತಿಗೆದಾರರ ಜೋತೆ ಶಾಮೀಲು ಸಂತೋಷ್ ಹಿರೆದಿನ್ನಿ ಅಧಿಕಾರಿಗಳು ಗುತ್ತಿಗೆದಾರರ ಜೋತೆ ಶಾಮೀಲಾಗಿದ್ದರಿಂದ 4500 ಕೋಟಿ ನೀರಾವರಿ ಅನುದಾನವನ್ನು ದುರ್ಬಳಿಕೆ ಮಾಡಿಕೊಂಡಿದ್ದಾರಲ್ಲದೇ, ಎನ್‌ಆರ್‌ಬಿಸಿ ಕಾಲುವೆ ಆಧುನೀಕರಣ ಕಾಮಗಾರಿ ಕಳಪೆಯಾಗಿದ್ದರು ಅಧಿಕಾರಿಗಳು ಕಣ್ಮುಚ್ಚಿಕೊಂಡು ಕುಳಿತ್ತಾರೆಂದು ಸಿಪಿಐ ಎಮ್ ಎಲ್ ರೇಡ್ ಸ್ಟಾರ್ ಪಕ್ಷದ ಮಸ್ಕಿ ತಾಲೂಕು ಕಾರ್ಯದರ್ಶಿ  ಆರೋಪಿಸಿದರು. ಪಟ್ಟಣದ ಸಹಾಯಕ ಆಯುಕ್ತರ ಕಛೇರಿ ಆವರಣದಲ್ಲಿ ನಡೆಯುತ್ತಿರುವ 76ನೇ ದಿನದ  ಅನಿರ್ಧಿಷ್ಟ ಧರಣಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಬಾರಿ ಹಗರಣದಲ್ಲಿ ಪಾಲ್ಗೊಂಡಿರುವ ಗುತ್ತಿಗೆ ಕಂಪನಿಗಳನ್ನು ಕಪ್ಪುಪಟ್ಟಿಗೆ ಸೇರಿಸಬೇಕು. ಗುತ್ತಿಗೆದಾರರನ್ನು ಜೈಲಿಗೆ ಕಳುಹಿಸಬೇಕು. ಸಾವಿರಾರು ಕೋಟಿ ಅನುದಾನವನ್ನು ತಿಂದು ತೇಗಿದವರಿಂದ ಪೂರ್ಣ ಅನುದಾನವನ್ನು ಬಡ್ಡಿ ಸಮೇತ ವಸೂಲಿ ಮಾಡಬೇಕು. ಕಳೆದ 76 ದಿನಗಳಿಂದ ನಡೆಯುತ್ತಿರುವ ಅನಿರ್ಧಿಷ್ಟ ಧರಣಿಗೆ ಅಧಿಕಾರಿಗಳಾಗಲಿ ಅಥವಾ ಜನಪ್ರತಿನಿಧಿಗಳಾಗಲಿ ಸೌಜನ್ಯಕ್ಕಾದರೂ ಭೇಟಿ ನೀಡದಿರುವುದು ಅವರು ಸಹ ಈ ಹಗರಣದಲ್ಲಿ ಭಾಗಿಯಾಗಿದ್ದಾರೆಂಬುದಕ್ಕೆ ಸಾಕ್ಷಿಯಾಗಿದೆ. ಅಧಿಕಾರಿಗಳ ಈ ನಿರ್ಲಕ್ಷ್ಯತನ ಹೀಗೆಯೇ ಮುಂದುವರೆದರೆ ಅದಕ್ಕೆ ತಕ್ಕ ಉತ್ತರ ಸಂಘಟನೆಯ ಮೂಲಕ ನೀಡಲಾಗುತ್ತದೆ. ಈ ಪ್ರತಿಭಟನೆಯ ಸ್ವರೂಪ ಬದಲಾಗಿ ಯಾವುದೇ ಅನಾಹುತಗಳು ಸಂಭವಿಸಿದರೆ ಅದಕ್ಕೆ ತಾಲೂಕಿನ ಜನಪ್ರತಿನಿಧಿಗಳು ಹಾಗೂ ಅಧಿಕಾರಗಳೇ ನೇರ ಹೊಣೆಗಾರರಾಗುತ್ತಾರೆಂದು ಈ ಮೂಲಕ ಎಚ್ಚರಿಕೆಯನ್ನು ನೀಡಲಾಗುತ್ತದೆ ಎಂದರು. ಈ ವೇಳೆ ಇತರರು ರೈತರು ಭಾಗವಹಿಸಿದ್ದರು ಮಾರುತಿ ಜಿನ್ನಾಪೂರ, ಆದಯ ಸ್ವಾಮಿ, ಹನುಮಂತ,ರಮೇಶ್ ನಾಯಕ,ಹುಚ್ಚಪ, ಕೃಪಾನಂದ ..

ವರದಿ – ಸಂಪಾದಕೀಯ

Leave a Reply

Your email address will not be published. Required fields are marked *