ನರೇಗಾ ಪ್ರತಿಯೊಬ್ಬರು ಯೋಜನೆಯ ಸದುಪಯೋಗವನ್ನು ಪಡೆದುಕೊಳ್ಳಬೇಕು ಡಾ.ಡಿ.ಮೋಹನ್…….

Spread the love

ನರೇಗಾ ಪ್ರತಿಯೊಬ್ಬರು ಯೋಜನೆಯ ಸದುಪಯೋಗವನ್ನು ಪಡೆದುಕೊಳ್ಳಬೇಕು ಡಾ.ಡಿ.ಮೋಹನ್…….

ಗಂಗಾವತಿ:ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣಾ ಉದ್ಯೋಗ ಖಾತ್ರಿ ಯೋಜನೆಯಡಿ ಮಹಿಳೆಯರ ಭಾಗವಹಿಸುವಿಕೆಯ ಪ್ರಮಾಣವನ್ನು ಹೆಚ್ಚಿಸುವ ಸಲುವಾಗಿ ಮಹಿಳಾ ಕಾಯಕೋತ್ಸವ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ಪ್ರತಿಯೊಬ್ಬರು ಯೋಜನೆಯ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳಾದ ಡಾ.ಡಿ.ಮೋಹನ್ ಹೇಳಿದರು. ತಾಲ್ಲೂಕಿನ ಸಂಗಾಪುರ ಗ್ರಾಮದ ಲಕ್ಷ್ಮೀ ನಾರಾಯಣ ಕೆರೆಯಲ್ಲಿ ಸಂಗಾಪುರ ಗ್ರಾ.ಪಂ ವತಿಯಿಂದ 2ನೇ ಹಂತದ “ಮಹಿಳಾ ಕಾಯಕೋತ್ಸವ” ಅಭಿಯಾನದ ಅಂಗವಾಗಿ ನರೇಗಾ ಯೋಜನೆಯಡಿ ಕೆರೆ ಹೂಳೆತ್ತುವ ಕಾಮಗಾರಿ ಕೆಲಸ ನೀಡಲಾಗಿದ್ದು, ಶುಕ್ರವಾರ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅವರು ಮಾತನಾಡಿದರು. ಕಾಯಕೋತ್ಸವ ಅಭಿಯಾನದಡಿ ತಾವೆಲ್ಲಾ ಕೆಲಸ ಮಾಡಲು ಬೇಡಿಕೆ ಸಲ್ಲಿಸಿದ ಹಿನ್ನೆಲೆ ತಮಗೆ ತಮ್ಮೂರಲ್ಲೇ ಕೆಲಸವನ್ನು ನೀಡಲಾಗಿದೆ. ಪ್ರತಿಯೊಬ್ಬರು ಈ ಯೋಜನೆಯ ಸದುಪಯೋಗವನ್ನು ಪಡೆದುಕೊಳ್ಳಬೇಕು. ನೀವು ದುಡಿದ ಕೂಲಿ ಹಣ ನೇರವಾಗಿ ನಿಮ್ಮ ಖಾತೆಗೆ ಜಮೆಯಾಗುತ್ತದೆ ಎಂದರು. ಇನ್ನು, ಕೋವಿಡ್ 3ನೇ ಅಲೆ ಭೀತಿ ಎಲ್ಲರನ್ನು ಕಾಡುತ್ತಿದೆ. ಆ ನಿಟ್ಟಿನಲ್ಲಿ ಕೂಲಿಕಾರರು ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಹಾಗೂ ಕಡ್ಡಾಯವಾಗಿ ಮಾಸ್ಕ್ ಧರಿಸಿ ಕೆಲಸ ಮಾಡುವಂತೆ ತಿಳಿಸಿದರು. ಇದೇ ವೇಳೆ ಕಾಮಗಾರಿ ಸ್ಥಳದಲ್ಲಿ ಕೂಲಿಕಾರರಿಗೆ ಆರೋಗ್ಯ ಇಲಾಖೆ ಸಿಬ್ಬಂದಿ ಕೋವಿಡ್ ಲಸಿಕೆಯನ್ನು ಹಾಕಿದರು.ಈ ವೇಳೆ ಗ್ರಾ.ಪಂ ಅಧ್ಯಕ್ಷ ಹರೀಶ್ ಘಂಟಾ, ಉಪಾಧ್ಯಕ್ಷೆ ಯಲ್ಲಮ್ಮ ಬಸವರಾಜ್, ಸದಸ್ಯ ವೆಂಕಟೇಶ್, ಪಿಡಿಓ ಶೇಖ್ ಸಾಬ್, ಕಾರ್ಯದರ್ಶಿ ನೂರು ಉಲ್ ಹಕ್, ಟಿಐಇಸಿ ಸಂಯೋಜಕರಾದ ಶಿವಕುಮಾರ್ ಕೆ, ಬಿಎಫ್.ಟಿ ವೆಂಕೋಬ ಹಾಗೂ ಗ್ರಾ.ಪಂ ಸಿಬ್ಬಂದಿ ಮತ್ತು ಮಹಿಳಾ ಕೂಲಿಕಾರರು ಇದ್ದರು.

ವರದಿ – ಅಮಾಜಪ್ಪ ಜುಮಾಲಾಪೂರ

Leave a Reply

Your email address will not be published. Required fields are marked *