ನಿರಾಶ್ರಿತರ ಬದುಕಿಗೆ ಆಶ್ರಯದಾತೆಯಾದ ಶ್ರೀಮತಿ ಎಂ.ಪಿ.ವೀಣಾ…..

Spread the love

ನಿರಾಶ್ರಿತರ ಬದುಕಿಗೆ ಆಶ್ರಯದಾತೆಯಾದ ಶ್ರೀಮತಿ ಎಂ.ಪಿ.ವೀಣಾ…..

ವಿಜಯನಗರ ಜಿಲ್ಲೆ  ಹರಪನಹಳ್ಳಿ ಕ್ಷೇತ್ರದಲ್ಲಿ,ಅಶಕ್ತರ ಆಶಾಕಿರಣ ಆಸರೆಯ ಜೀವಾಳ ಮಹಿಳಾ ಜನನಾಯಕಿ ಶ್ರೀಮತಿ ಎಂ.ಪಿ.ವೀಣಾರವರು. ಅವರು ಪಟ್ಟಣದ ಐ‌ಯ್ಯನಕೆರೆ ಸಮೀಪದ ಆಂಜನೇಯ ಬಡಾವಣೆಯಲ್ಲಿ, ಇತ್ತೀಚೆಗೆ ಆಕಸ್ಮಿಕ ಬೆಂಕಿಯಿಂದ ಮನೆ ಸುಟ್ಟು ಅಪಾರ ಪ್ರಮಾಣದ ಹಾನಿ ಸಂಭವಿಸಿದ್ದ ಕುಟುಂಬಕ್ಕೆ.ಅಗತ್ಯ ಸಾಮಾಗ್ರಿಗಳನ್ನು ನೀಡಿ ನಿರ‍ಶ್ರಿತರನ್ನ ಸಾಂತೈಸಿದ್ದಾರೆ, ನೊಂದವರಿಗೆ ಸಾಂತ್ವನ ಹೇಳುವ ಜೊತೆಗೆ ಆಹಾರದ ಕಿಟ್,ಹಾಸಿಗೆ, ಬಟ್ಟೆ ಹಾಗೂ ಪಾತ್ರೆ,ಅಗತ್ಯ  ಗೃಹಬಳಕೆ ಸಾಮಾಗ್ರಿಗಳನ್ನು ನೀಡಿದ್ದಾರೆ.ಕೂಡಲೇ ತಾತ್ಕಾಲಿಕ ಶೆಡ್ ನಿರ್ಮಿಸಿಕೊಳ್ಳಲು ಬೇಕಾಗುವ ಸಲಕರಣೆಗಳನ್ನು ನೀಡಿದ್ದಾರೆ,ಈ ಮೂಲಕ ನಿರಾಶ್ರಿತರಿಗೆ ತುರ್ತು ಆಶ್ರಯ ವ್ಯವಸ್ಥೆ ಮಾಡಿ ಮಾನವೀಯತೆ ಮೆರೆದಿದ್ದಾರೆ. ನೆರೆದ ನೊಂದ ಕುಟುಂಬಗಳ ಆಹುವಾಲಗಳನ್ನು ಸ್ವೀಕರಿಸಿದ್ದು, ಕಂದಾಯ ಅಧಿಕಾರಿಗಳ ಗಮನಕ್ಕೆ ತಂದು ಸೂಕ್ತ ಪರಿಹಾರ ದೊರಕುವಂತೆ ಪ್ರಯತ್ನಿಸುತ್ತೇನೆ ಎಂದು ಭರವಸೆ ನೀಡಿ ಧೈರ್ಯ ತುಂಬಿದರು.ಡಾಕ್ಟರ್ ಮಹಾಂತೇಶ್ ಚರಂತಿಮಠ, ಕೆಪಿಸಿಸಿ ವೈದ್ಯ ಘಟಕದ ಉಪಾಧ್ಯಕ್ಷರು ಶ್ರೀಮತಿ ಕವಿತಾ ವಾಗೀಶ್,ಮಾಜಿ ಪುರಸಭೆ ಅಧ್ಯಕ್ಷ  ದಾದಾಪೀರ್ ಮಕರಬ್ಬಿ, ಹರಪನಹಳ್ಳಿ ಬ್ಲಾಕ್ ಯುವ ಕಾಂಗ್ರೆಸ್ ಉಪಾಧ್ಯಕ್ಷ ಸಿ. ಮಂಜುನಾಥ್,ಹರಪನಹಳ್ಳಿ ಬ್ಲಾಕ್ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶಶಿಕುಮಾರ್, ಪ್ರಜ್ವಲ್, ಅರುಣ್ ಕುಮಾರ್, ಮದನ್ ಸ್ವಾಮಿ, ಸಾಗರ್ ಪಾಟೀಲ್, ಗುರು ಬಸವರಾಜ್, ಜೆ.ಕೆ.ಮಾರುತಿ, ರೂಪ ಮುಂತಾದವರಿದ್ದರು.. ವರದಿ – ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ

Leave a Reply

Your email address will not be published. Required fields are marked *