ಪಿರಿಯಾಪಟ್ಟಣ ತಾಲೂಕಿನ ರೈತರ ಜೀವನಾಡಿ ಕರಡಿ ಲಕ್ಕನ ಕೆರೆ ಏತ ನೀರಾವರಿ ಯೋಜನೆಗೆ  ಚಾಲನೆ ಶಾಸಕ ಕೆ ಮಹಾದೇವ…

Spread the love

ಪಿರಿಯಾಪಟ್ಟಣ ತಾಲೂಕಿನ ರೈತರ ಜೀವನಾಡಿ ಕರಡಿ ಲಕ್ಕನ ಕೆರೆ ಏತ ನೀರಾವರಿ ಯೋಜನೆಗೆ  ಚಾಲನೆ ಶಾಸಕ ಕೆ ಮಹಾದೇವ….

ರೈತರ ಕನಸನ್ನು ಹಸಿರಾಗಿಸುವುದು ಮುಂಗಾರಿನ ಮಳೆ. ಜೊತೆಗೆ ಕರಡಿ ಲಕ್ಕನ ಕೆರೆ ಏತ ನೀರಾವರಿ ಯೋಜನೆಯಿಂದ ಹೊರಬರುವ ನೀರು ತಾಲೂಕಿನ ಮೂರು ಹೋಬಳಿಗಳ ರೈತರ ಕನಸು ಏತನೀರಾವರಿ ಯೋಜನೆ. ಅಂತಹ ಯೋಜನೆಗೆ ಇಂದು ತಾಲೂಕಿನ ಜನಪ್ರಿಯ ಶಾಸಕರಾದ ಕೆ ಮಹದೇವ್ ಅವರಿಂದ ಪಂಪ್ ಆನ್ ಮಾಡುವ ಮೂಲಕ ನೀರು ಹೊರ ಬಿಡಲಾಯಿತು. ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಮಳೆಯ ಅಬ್ಬರ ಜೋರಾಗಿದ್ದು ಸುತ್ತಮುತ್ತಲಿನ ಕೆರೆಕಟ್ಟೆಗಳು ತುಂಬಿಕೊಂಡಿವೆ. ಇದರಜೊತೆಗೆ 150 ಕೆರೆಗೆ ನೀರು ತುಂಬಿಸುವ ಕಾವೇರಿ ಏತ ನೀರಾವರಿ ಯೋಜನೆಯ ಮತ್ತೊಂದು ಯೋಜನೆಯಲ್ಲಿ ಡಿಸೆಂಬರ್ ಅಂತ್ಯದಲ್ಲಿ ಪ್ರಾರಂಭಗೊಳ್ಳಲಿದೆ. ಈ ಕಾರ್ಯಕ್ರಮವನ್ನು ಚಾಲನೆ ನೀಡಿ ಮಾತನಾಡಿದ ಶಾಸಕ ಕೆ ಮಹದೇವ್ ರವರು ಸರ್ಕಾರದಲ್ಲಿ ಜೆಡಿಎಸ್ ಪಕ್ಷ ಅಧಿಕಾರದಲ್ಲಿ ಇಲ್ಲದೇ ಹೋದರೂ ತಾಲೂಕಿನ ಅಭಿವೃದ್ಧಿಗೆ ಹಗಲಿರುಳು ಹೋರಾಡಿ ಅನುದಾನವನ್ನು ತಂದು ರೈತರ ಏಳಿಗೆಗಾಗಿ ದುಡಿಯುವುದೇ ನನ್ನ ಉದ್ದೇಶವಾಗಿದೆ. ಪಕ್ಷಪಾತ ಮರೆತು ತಾಲೂಕಿನ ಜನತೆಯನ್ನು ಏಕಮುಖಿಯಾಗಿ ಭಾವನೆಯಿಂದ ಎಲ್ಲರೊಂದಿಗೆ ಒಗ್ಗೂಡಿ ತಾಲೂಕನ್ನು ಅಭಿವೃದ್ಧಿಪಡಿಸುವುದೆ ನನ್ನ ಗುರಿ ಎಂದು ಇದೇ ಸಂದರ್ಭ ಮಾತನಾಡಿದರು. ತಾಲೂಕಿನಲ್ಲಿರುವ ಅಧಿಕಾರಿಗಳು ನನ್ನ ತಾಲೂಕಿನ ಜನರು ಯಾವುದೇ ಸಂದರ್ಭದಲ್ಲಿ ತಮ್ಮ ಬಳಿಗೆ ಬಂದು ಯಾವುದೇ ಕೆಲಸ ಕಾರ್ಯಗಳ ಬಗ್ಗೆ ತಮ್ಮಲ್ಲಿ ಬೇಡಿಕೆ ಇಟ್ಟರೆ ಅದನ್ನು ಕೂಡಲೇ ಜಾರಿಗೆ ತರಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು ಈ ಮೂಲಕ ತಾಲೂಕಿನಲ್ಲಿ ಪ್ರತಿಯೊಬ್ಬರು ಸಮೃದ್ಧಿಯಾಗಿ ಬಾಳಬೇಕು ಎನ್ನುವುದೇ ನನ್ನ ಕನಸು ಎಂದು ತಮ್ಮ ಮನಸ್ಸಿನ ಭಾವನೆಯನ್ನು ವ್ಯಕ್ತ ಪಡಿಸಿದರು.

ವರದಿ – ಮಹೇಶ ಶರ್ಮಾ

Leave a Reply

Your email address will not be published. Required fields are marked *