ಶಾಲಾ ಮಕ್ಕಳಿಗೆ ಕ್ಷೀರಭಾಗ್ಯ ಯೋಜನೆ ಎಫ್ ಎಂ ಕಳ್ಳಿಯರಿಂದ ವಿತರಣೆ…..

Spread the love

ಶಾಲಾ ಮಕ್ಕಳಿಗೆ ಕ್ಷೀರಭಾಗ್ಯ ಯೋಜನೆ ಎಫ್ ಎಂ ಕಳ್ಳಿಯರಿಂದ ವಿತರಣೆ…..

ಇಂದು ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಪೋಷಕರಿಗೆ ಅಕ್ಷರ ದಾಸೋಹ ಕಾರ್ಯಕ್ರಮದ ಕ್ಷೀರಭಾಗ್ಯ ಯೋಜನೆಯಡಿ ಹಾಲಿನ ಪುಡಿ ವಿತರಣೆ ಮಾಡಲಾಯಿತು. ಹಾಲಿನ ಪುಡಿ ವಿತರಣೆ ಕಾರ್ಯಕ್ರಮದಲ್ಲಿ ಶ್ರೀ ಎಫ್.ಎಮ್.ಕಳ್ಳಿ ಸಹಾಯಕ ನಿರ್ದೇಶಕರು ಅಕ್ಷರ ದಾಸೋಹ ಯಲಬುರ್ಗಾರವರು ಪ್ರಾಸ್ತವಿಕವಾಗಿ  ಮಾತನಾಡಿ 2021-22ನೇ ಸಾಲಿನ ಜೂನ್ ರಿಂದ ಜುಲೈ ತಿಂಗಳಿಗಾಗಿ ಕ್ಷೀರಭಾಗ್ಯ ಯೋಜನೆಯಡಿ ಪ್ರತಿ ಮಗುವಿಗೆ ಪ್ರತಿ ತಿಂಗಳು ತಲಾ ಅರ್ಧ ಕೆಜಿ ಯಂತೆ ಒಟ್ಟು ಒಂದು ಕೆಜಿ ಹಾಲಿನ ಪುಡಿ ವಿತರಣೆ ಮಾಡಲು ಸರ್ಕಾರದ ಆದೇಶದ ಮೇರೆಗೆ ಕ್ರಮ ಕೈಗೊಳ್ಳಲಾಗಿದೆ. ತಾಲೂಕಿನ ಸರ್ಕಾರಿ ಮತ್ತು ಅನುದಾನಿತ ಪ್ರಾಥಮಿಕ/ ಪ್ರೌಢಶಾಲೆಗಳ ಒಟ್ಟು 253 ಶಾಲೆಗಳ ಸುಮಾರು 44803 ಫಲಾನುಭವಿಗಳಿಗೆ ಹಾಲಿನ ಪುಡಿ ವಿತರಣೆ ಮಾಡಲು ಕ್ರಮ ಕೈಗೊಳ್ಳಲಾಗಿದೆ ಹಾಗೂ ವಿಶೇಷ ಚೇತನ ಮಕ್ಕಳಿಗೆ ಕ್ಷೀರಭಾಗ್ಯ ಯೋಜನೆಯಡಿ ವಾರದಲ್ಲಿ ಐದು ದಿನ ಉಚಿತ ಹಾಲನ್ನು ವಿತರಿಸಲು ಅನುಮತಿ ಸಿದೆ  ಕರ್ನಾಟಕ ಸರ್ಕಾರದ ಅನುದಾನದಡಿಯಲ್ಲಿ ಕ್ಷೀರಭಾಗ್ಯ ಯೋಜನೆಗೆ ಅಗತ್ಯ ಕೆನೆಭರಿತ ಹಾಲಿನ ಪುಡಿಯನ್ನು ಶಾಲಾ ಬಾಗಿಲಿಗೆ ಸರಬರಾಜು ಮಾಡುತ್ತಿದೆ. ಎಂದು ಹೇಳಿದರು ಶಿಕ್ಷಕರಾದ ಶ್ರೀಕಾಂತ ಮಾಸಗಟ್ಟಿ ಮಾತನಾಡಿದರು. 1 ರಿಂದ 10 ನೇ ತರಗತಿ ಓದುತ್ತಿರುವ ಸರ್ಕಾರಿ ಮತ್ತು ಅನುದಾನಿತ ಎಲ್ಲಾ ಶಾಲಾ ಮಕ್ಕಳಿಗೆ 18 ಗ್ರಾಂ ಕೆನೆಭರಿತ ಹಾಲಿನ ಪುಡಿಯಿಂದ ತಯಾರಿಸಿದ 150ml ಹಾಲನ್ನು ವಾರದಲ್ಲಿ ಮೂರು ದಿನ ಕೊಡಬೇಕು ಅಪೌಷ್ಟಿಕತೆ ನಿವಾರಣೆ ಮಾಡುವ ಘನ ಉದ್ದೇಶದಿಂದ ಸರ್ಕಾರ ಮಕ್ಕಳಿಗೆ ಆಹಾರ ಧಾನ್ಯಗಳೊಂದಿಗೆ ಹಾಲಿನ ಪುಡಿ ಕೂಡಾ ವಿತರಣೆ ಮಾಡಲಾಗುತ್ತಿದೆ. ಕೋವಿಡ್ ಹಿನ್ನೆಲೆಯಲ್ಲಿ ಎಲ್ಲಾ ಶಾಲೆಗಳಲ್ಲಿ ಕಡ್ಡಾಯವಾಗಿ ಸುರಕ್ಷತಾ ಕ್ರಮಗಳನ್ನು ಅನುಸರಿಸಿ ಮಕ್ಕಳ ಬದಲಾಗಿ ಪೋಷಕರಿಗೆ ಕರೆದು ವಿತರಣೆ ಮಾಡುವಂತೆ ತಿಳಿಸಲಾಗಿದೆ. ವಿತರಣೆ ಮಾಡುವ ಹಾಲಿನ ಪುಡಿಯನ್ನು ಮನೆಗಳಲ್ಲಿ ತಾಯಂದಿರು ಮಕ್ಕಳಿಗೆ ಯಾವ ರೀತಿಯಾಗಿ ಸಂರಕ್ಷಣೆ ಮಾಡುವುದು ಮತ್ತು ಯಾವ ರೀತಿ ಹಾಲು ತಯಾರಿಸಬೇಕು ಎಂಬುದರ ಕುರಿತು ಶಾಲಾ ಅಡುಗೆ ಸಿಬ್ಬಂದಿಯವರಿಂದ ಮಾಡಿ ತೋರಿಸಲಾಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು SDMC ಅಧ್ಯಕ್ಷರಾದ ಶ್ರೀ ಕಳಕಪ್ಪ ಹಿರೇಹಾಳ ಅವರು ವಹಿಸಿದ್ದರು. ಮತ್ತು ಸದಸ್ಯರಾದ ಶ್ರೀ ಬಸಯ್ಯ ಪೂಜಾರ, ಮಹ್ಮದ ಮುರ್ತುಜಾಸಾಬ, ಸುಧಾ ಕಮ್ಮಾರ, ಮುಖ್ಯೋಪಾಧ್ಯಾಯಿನಿ ಶ್ರೀಮತಿ ರೇಣುಕಾ ಬಾಗಲಿ ಸೇರಿದಂತೆ ಇನ್ನೊರ್ವ ಶಿಕ್ಷಕರು, ಅಡುಗೆ ಸಿಬ್ಬಂದಿ, ಪೋಷಕರು ಉಪಸ್ಥಿತರು ಭಾಗಿಯಾಗಿದ್ದರು.

ವರದಿಹುಸೇನ್ ಮೋತೆಖಾನ್

Leave a Reply

Your email address will not be published. Required fields are marked *