ಪೊಲೀಸ್ ವರ್ಗಕ್ಕೆ ತಾವರಗೇರಾ ನ್ಯೂಸ ವೆಬ್ ಬಳಗದವತಿಯಿಂದ ನಮ್ಮದೊಂದು ಸಲಾಂ

Spread the love

: *

ಪೊಲೀಸರು ಒಳ್ಳೆಯವರಲ್ಲ…

ರಸ್ತೆಯಲ್ಲಿ ಗುಂಡಿ ಬಿದ್ದಿರುತ್ತದೆ
ಅದೇ ರಸ್ತೆಯಲ್ಲಿ ಲಾಯರ್ ಗಳು ಓಡಾಡುತ್ತಾರೆ
ಅದೇ ರಸ್ತೆಯಲ್ಲಿ ಡಾಕ್ಟರ್ಗಳು ಓಡಾಡುತ್ತಾರೆ
ಅದೇ ರಸ್ತೆಯಲ್ಲಿ ಇಂಜಿನಿಯರ್ ಗಳು ಓಡಾಡುತ್ತಾರೆ
ಆದರೆ ಕೊನೆಗೆ ಗುಂಡಿ ಮುಚ್ಚುವುದು ಮಾತ್ರ ಪೊಲೀಸರೆ
ಆದರೂ ಪೊಲೀಸರು ಒಳ್ಳೆಯವರಲ್ಲ….

ಜಗತ್ತಿನ ತುಂಬೆಲ್ಲಾ ಕರೋನಾ
ನ್ಯಾಯ ಕೊಡುವ ನ್ಯಾಯಾಲಯವು ಮುಚ್ಚಿರುತ್ತದೆ
ಕಾನೂನು ರೂಪಿಸುವ ಸಂಸತ್ತು ಮುಚ್ಚಿರುತ್ತದೆ
ಎಲ್ಲಾ ಸರ್ಕಾರಿ ಕಚೇರಿಗಳು ಮುಚ್ಚಿರುತ್ತದೆ
ಆದರೆ ಜೀವದ ಹಂಗುತೊರೆದು ಪೊಲೀಸರು ಮಾತ್ರ ಕರ್ತವ್ಯ ಮಾಡಬೇಕು
ಆದರೂ ಪೊಲೀಸರು ಒಳ್ಳೆಯವರಲ್ಲ…

ಅಪಘಾತವಾಗಿ ರಕ್ತದ ಮಡುವಿನಲ್ಲಿ ನರಳಾಡುತ್ತಿರುತ್ತಾರೆ
ಅದರ ಜೊತೆಗೆ ಸೆಲ್ಫಿ ತೆಗೆದುಕೊಳ್ಳುತ್ತಾರೆ
Different angle ಗಳಲ್ಲಿ ವಿಡಿಯೋ ಮಾಡುತ್ತಾರೆ
ಎಲ್ಲರಿಗೂ ಸಾಮಾಜಿಕ ಜವಾಬ್ದಾರಿ ಇರುತ್ತದೆ
ಆದರೆ ಪೋಲಿಸರು ಬರುವವರೆಗೂ ಆಸ್ಪತ್ರೆಗೆ ಸಾಗಿಸುವುದಿಲ್ಲ
ಆದರೂ ಪೊಲೀಸರು ಒಳ್ಳೆಯವರಲ್ಲ…

ಮನೆಗೆ ಬೆಂಕಿ ಬಿದ್ದಾಗ ಪೊಲೀಸರು ನಿಮ್ಮ ಪರವಾಗಿರಬೇಕು
ಮನೆಯಲ್ಲಿ ಕಳ್ಳತನ ವಾದಾಗ ಪೊಲೀಸರು ನಿಮ್ಮ ಪರವಾಗಿರಬೇಕು
ನಿಮ್ಮ ಜೀವನದ ಎಲ್ಲಾ ಒಳಿತು-ಕೆಡುಕುಗಳಲ್ಲು ಪೊಲೀಸರು ನಿಮ್ಮ ಪರವಾಗಿರಬೇಕು
ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಮಾತ್ರ ನಿಮ್ಮ ಚರ್ಚೆ ಪೊಲೀಸರ ಪರವಾಗಿರುವುದಿಲ್ಲ
ಆದರೂ ಪೊಲೀಸರು ಒಳ್ಳೆಯವರಲ್ಲ… ಈ ನನ್ನೇಲ್ಲಾ ಪೊಲೀಸ್ ಅಭಿಮಾನಿಗಳಿಗೂ ಹಾಗೂ ಪೊಲೀಸ್ ಸಿಬ್ಬಂದಿಗಳಿಗೂ ತಾವರಗೇರಾ ನ್ಯೂಸ ಪತ್ರಿಕೆ ಬಳಗ ಹಾಗೂ ತಾವರಗೇರಾ ನ್ಯೂಸ್ ವೆಬ್ ಪೋರ್ಟಲ್ ಬಳಗದವತಿಯಿಂದ ಅನಂತ ಅನಂತ ವಂದನೆಗಳು.. 🙏🙏💐💐🙏

 

Leave a Reply

Your email address will not be published. Required fields are marked *