ಚಿತ್ರಕಲೆ ಸಾಧನೆಯ ಹಾದಿಯಲ್ಲಿ ಬಾಲಕ ಅಮೀನ್ ಮಿಶಾಲ್.,

Spread the love

       ಜೀವನಶೈಲಿಗಳು ಬದಲಾದಂತೆ ಮತ್ತು ವಯಸ್ಕರ ನಿರೀಕ್ಷೆಗಳು ಮಾರ್ಪಾಡುಗೊಂಡಂತೆ ಬಾಲ್ಯದ ಪರಿಕಲ್ಪನೆಯು ವಿಕಸನಗೊಂಡಂತೆ ಮತ್ತು ಬದಲಾದಂತೆ ಕಾಣುತ್ತವೆ. ಮಕ್ಕಳಿಗೆ ಯಾವುದೇ ಚಿಂತೆಗಳಿರಬಾರದು ಮತ್ತು ಅವರು ಕೆಲಸ ಮಾಡುವ ಅಗತ್ಯವಿರಬಾರದು.ಬಾಲ್ಯ ಜೀವನವು ಸಂತೋಷದಾಯಕ ಮತ್ತು ಕಷ್ಟರಹಿತವಾಗಿರಬೇಕು. ಸಾಮಾನ್ಯವಾಗಿ ಬಾಲ್ಯವು ಸಂತೋಷ, ಆಶ್ಚರ್ಯ, ತಲ್ಲಣ ಮತ್ತು ಚೇತರಿಸಿಕೊಳ್ಳುವಿಕೆಯ ಮಿಶ್ರಣವಾಗಿರಬೇಕು. ಅದು ಸಾಮಾನ್ಯವಾಗಿ ಹೆತ್ತವರನ್ನು ಹೊರತುಪಡಿಸಿ, ಆಡುವ, ಕಲಿಯುವ, ಜನರೊಂದಿಗೆ ಬೆರೆಯುವ, ಅನ್ವೇಷಿಸುವ, ಮತ್ತು ಸಾಕಷ್ಟು ವಯಸ್ಕರ ಮಧ್ಯಸ್ಥಿಕೆ ಇಲ್ಲದ ಪ್ರಪಂಚದಲ್ಲಿ ಚಿಂತಿಸುವ ಕಾಲವಾಗಿರಬೇಕು. ಅದು ವಯಸ್ಕ ಜವಾಬ್ದಾರಿಗಳನ್ನು ನಿಭಾಯಿಸುವ ಅಗತ್ಯವಿಲ್ಲದೇ ಜವಾಬ್ದಾರಿಗಳ ಬಗ್ಗೆ ಕಲಿಯುವ ಕಾಲವಾಗಿರಬೇಕು.ಹೀಗಾದರೆ ಮಾತ್ರ ಬಾಲ್ಯ ಜೀವನ ಸಾರ್ಥಕ ಕಾಣುತ್ತದೆ ಎನ್ನಬಹುದಾಗಿದೆ.ಹೀಗಾದಾಗ ಬಾಲ್ಯ ಜೀವನ ಅತ್ಯಂತ ಸಂತೋಷಕರವಾಗಿರುತ್ತದೆ ಹಾಗೂ ಬಾಲ್ಯದಲ್ಲಿ ಉತ್ತಮ ಸಾಧನೆಗಳನ್ನು ಮಾಡಲು ಸಾಧ್ಯ ಬಂಧುಗಳೆ. ಹಾಗಾಗಿ ಇಲ್ಲಿ ಕಲಿಯುವ ಮನಸ್ಸುಗಳಿಗೆ ವಯಸ್ಸಿನ ಭೇದ- ಭಾವವಿಲ್ಲ ಅದಕ್ಕೆ ಬೇಕಾಗಿರುವುದು ಆಸಕ್ತಿ ಮಾತ್ರ, ಆಸಕ್ತಿಯ ಜೊತೆಗೆ ಪ್ರಯತ್ನ, ನಿಷ್ಠೆ, ಪ್ರಮಾಣಿಕತೆ ಮೈಗೂಡಿಸಿಕೊಂಡರೆ ಎಂತಹ ಕಷ್ಟಕರವಾದ ಕೆಲಸಗಳನ್ನು ಸಹ ಮಾಡಬಹುದು ಎನ್ನುವುದಕ್ಕೆ ನಮಗೆ ತಾಜಾ ಉದಾಹರಣೆಯಾಗಿ ನಮ್ಮ ಕಣ್ಣಮುಂದೆ ಹಲವು – ನೂರಾರು ಬಾಲ ಪ್ರತಿಭೆಗಳು ಸೀಗುತ್ತಾರೆ.
ಅದರಲ್ಲಿ ಈಗ ನಮಗೆ ಎದ್ದು ಕಾಣುವ ಬಾಲ ಪ್ರತಿಭೆ ಎಂದರೆ ಅಮೀನ್ ಮಿಶಾಲ್ ರವರು.
ಅಮೀನ್ ಮಿಶಾಲ್ ರವರು ಮಾಡಿರುವ ವಿಶೇಷ ಸಾಧನೆ ನೋಡಿ ನಮ್ಮೆಗೆಲ್ಲರಿಗೂ ಮಾದರಿ ಎಂದರೆ ತಪ್ಪಾಗಲಾರದು. ಈ ತನ್ಮೂಲಕ
ಈ ಬಾಲಕ ಸಾಧನೆ ಸೇವೆಗಾಗಿ
ಕರ್ನಾಟಕ ಅಚೀವರ್ಸ್ ಬುಕ್ ಆಫ್ ರೆಕಾರ್ಡ್ಗೆ ಸೇರ್ಪಡೆಯಾಗಿದ್ದಾನೆ.ಆದಕಾರಣ ನಮ್ಮಗೆಲ್ಲರಿಗೂ ಸ್ಪೂರ್ತಿ ಮತ್ತು ಮಾದರಿಯಾಗಿ ನಿಲ್ಲುತ್ತಾನೆ.ಆದ್ದರಿಂದ
ಈತನ ಪರಿಶ್ರಮದ ಸಾಧನೆಯಿಂದ ನಮ್ಮ ನಾಡಿಗೆ ಕೀರ್ತಿಯನ್ನು ತಂದಿದ್ದಾನೆ.ಇದು ನಮ್ಮಗೆಲ್ಲರಿಗೂ ಹೆಮ್ಮೆ ಕೊಡುವ ವಿಚಾರವಾಗಿದೆ. ಈಗ ಅಮೀನ್ ಮಿಶಾಲ್ ರವರು ಮಾಡಿರುವ ಸಾಧನೆ ಅನುಪಮವಾದದ್ದು.ಈ ನಿಟ್ಟಿನಲ್ಲಿ ಅವನು ಮಾಡಿರುವ ಸಾಧನೆ ವಿವರಗಳನ್ನು ತಮ್ಮ ಮುಂದೆ ಹಂಚಿಕೊಳ್ಳುತ್ತೀರುವೆ.
ಅಮೀನ್ ಮಿಶಾಲ್ ಹುಟ್ಟಿದ್ದು ಕರ್ನಾಟಕ ರಾಜ್ಯದ ರಾಜಧಾನಿ ಬೆಂಗಳೂರಿನ ಶೆರಿಫುಲ್ಲ ಹಾಸನ್ ಹಾಗೂ ಮೆಹರಾಜ್ ಬೇಗಮ್ ದಂಪತಿಗಳ ಮಗನಾಗಿ ದಿನಾಂಕ 21 ನವೆಂಬರ್ 2007 ರಂದು ಜನಿಸಿರುತ್ತಾನೆ.ಸಧ್ಯ ಬಾಲಕ ಎಂಟನೇ ತರಗತಿ ಯನ್ನು ಕ್ರೈಸ್ಟ್ ಶಾಲೆ ಬೆಂಗಳೂರಿನಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ. ಕಲಿಕೆಯಲ್ಲಿ ಅತಿ ಬುದ್ಧಿವಂತ ಹಾಗೂ ಅಪಾರ ಸ್ಮರಣ ಶಕ್ತಿ ಸಹ ಜೊತೆಗೆ ಓದಿನಲ್ಲಿ ಮುಂದೆ ಇದ್ದಾನೆ.ಚಿತ್ರಕಲೆಯಲ್ಲಿ ವಿಶೇಷವಾದ ಆಸಕ್ತಿ ಇಟ್ಟುಕೊಂಡಿದ್ದಾನೆ. ಅಂತೆಯೇ ಇವನ ಆಸಕ್ತಿಯ ಇಚ್ಛೆ ಅನುಸಾರ ವಿಶೇಷ ಸಾಧನೆ ಮಾಡಬೇಕೆಂಬ ಹಂಬಲದಿಂದ ಕ್ರೇಸ್ಟ್ರ್ ಶಾಲೆಯ ಆವರಣದಲ್ಲಿ ಚಿತ್ರ ಬಿಡಿಸಲು ಮುಂದಾಗುತ್ತಾನೆ. ಚಿತ್ರ ಬಿಡಿಸುವ ಹಾಳೆಯ ಉದ್ದ 90ಮೀಟರ ಹಾಗೂ ಅಗಲ 0.4 ಇರುವ ಪೇಪರ್ ತೆಗೆದುಕೊಂಡು ಅತ್ಯಂತ ವಿಶೇಷ ಕಾಳಜಿ – ಆಸಕ್ತಿಯಿಂದ ಸತತವಾಗಿ ಇಪ್ಪತ್ತು ಗಂಟೆಗಳ ಕಾಲ ವಿಭಿನ್ನವಾದ ನೂರು ಕಾರ್ಟೂನ್ ಪಾತ್ರಗಳ ಚಿತ್ರವನ್ನು ಯಶಸ್ವಿಯಾಗಿ ಬಿಡಿಸಿ ಹತ್ತು ಹಲವು ಬಣ್ಣಗಳನ್ನು ತುಂಬಿರುತ್ತಾನೆ. ಚಿತ್ರಗಳನ್ನು ಒಂದಕ್ಕೊಂದು ವಿಭಿನ್ನ ಹಾಗೂ ಅತ್ಯಂತ ವೇಗವಾಗಿ, ಸುಂದರವಾಗಿ ಚಿತ್ರಗಳನ್ನು ಬಿಡಿಸಿದ್ದಾನೆ. ಅತ್ಯಂತ ಅಮೂಘವಾಗಿ ಚಿತ್ರಗಳು ಮೂಡಿ ಬಂದಿವೆ.
ಈ ಸಾಧನೆ ದಾಖಲೆಯು ಕ್ರೈಸ್ಟ್ ಶಾಲೆಯ ಮುಖ್ಯಸ್ಥರು,ಪ್ರಾಂಶುಪಾಲರು ಸೇರಿದಂತೆ ನೂರಾರು ಶಿಕ್ಷಕರ ಸಮ್ಮುಖದಲ್ಲಿ ಈ ಚಿತ್ರಗಳನ್ನು ಬಿಡಿಸುವ ಮೂಲಕ ಕರ್ನಾಟಕ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ದಾಖಲೆ ಮಾಡಿದ್ದಾನೆ ಎಂದು ಹೆಮ್ಮೆಯಿಂದ ಹೇಳಬಹುದು. ಆದಕಾರಣ ಈ ಸಂಸ್ಥೆಯವರು ಈ ಬಾಲಕ ಪ್ರತಿಭೆಯನ್ನು ಕಂಡು ಅಧಿಕೃತವಾಗಿ ಈತನ ಹೆಸರನ್ನು (ಅವರ ಸಂಸ್ಥೆಯ ಲ್ಲಿ)ನೋಂದಾಯಿಸಿ ಮೆಚ್ಚುಗೆಯ ಪ್ರಮಾಣ ಪತ್ರವನ್ನು ನೀಡಿದ್ದಾರೆ.ಜೊತೆಗೆ ಇವನ ಈ ಅಪ್ರತಿಮ ಸಾಧನೆ ಕಂಡು ಹಲವು ಸಂಘ – ಸಂಸ್ಥೆಯವರು ಶುಭಹಾರೈಸಿದ್ದಾರೆ.ಶಿಕ್ಷಕ ವೃಂದದವರು ಶುಭಾಶಿರ್ವಾದ ಮಾಡಿರುತ್ತಾರೆ. ಕರ್ನಾಟಕ ಆಚೀವರ್ಸ್ ಬುಕ್ ಆಫ್ ರೆಕಾರ್ಡ್ ಸಂಸ್ಥಾಪಕ ಅಧ್ಯಕ್ಷೆ ಮತ್ತು ಮುಖ್ಯಸ್ಥರು ಆದ ಡಾ.ಅಂಬಿಕಾ ಹಂಚಾಟೆಯವರು ಈ ಬಾಲಕನನ್ನು ಅಭಿನಂದಿಸಿ, ಸನ್ಮಾನಿಸಿ ಗೌರವಿಸಿದಾರೆ.
ಅಭಿನಂದನೆ ನುಡಿ:-
ಅಮೀನ್ ಮಿಶಾಲ್ ರವರು ಚಿತ್ರಕಲೆಯಲ್ಲಿ ಮಿಂಚುತ್ತಾ,ಇನ್ನು ಹೆಚ್ಚಿನ ಸಾಧನೆ ಸೇವೆ ಮಾಡಲಿ ಹಾಗೂ ನಮ್ಮ ನಾಡಿಗೆ ಶ್ರೇಯಸ್ಸು ತರುವ ಕೆಲಸ ಮಾಡಲೆಂದು ಆಶಿಸುತ್ತವೆ ಮತ್ತು ಚಿತ್ರಕಲೆ ಸಾಧನೆ ಹಾದಿಯಲ್ಲಿ ಯಶಸ್ವಿಯಾಗಿ ಸಾಗಲೆಂದು ತಾವರಗೇರಾ ನ್ಯೂಸ್ ಪಾಕ್ಷಿಕ ಪತ್ರಿಕೆ ಹಾಗೂ ತಾವರಗೇರಾ ನ್ಯೂಸ್ ವೆಬ್ ಬಳಗದವತಿಯಿಂದ ಶುಭಾರೈಸುತ್ತೇವೆ.
——
ಲೇಖಕರು – ಸಂಗಮೇಶ ಎನ್ ಜವಾದಿ, ಬೀದರ ಜಿಲ್ಲೆ.

Leave a Reply

Your email address will not be published. Required fields are marked *