“ರೈತರಿಗೆ ಹೊಸ ವರ್ಷ ಹೊಸ ಹರ್ಷ ಕಾರಹುಣ್ಣಿಮೆ:ಶ್ರೀ ರಮೇಶ್ ಮಾಡಬಾಳ”

Spread the love

ರೈತರಿಗೆ ಹೊಸ ವರ್ಷ ಹೊಸ ಹರ್ಷ ಕಾರಹುಣ್ಣಿಮೆ:ಶ್ರೀ ರಮೇಶ್ ಮಾಡಬಾಳ

ವಿಜಯಪುರ ಜಿಲ್ಲೆ ಸೇರಿದಂತೆ ಉತ್ತರ ಕರ್ನಾಟಕದಲ್ಲಿ ರೈತಾಪಿ ವರ್ಗದ ಮೊದಲ ಹಬ್ಬ ಕಾರಹುಣ್ಣಿಮೆ ಆಗಿದೆ. ಕರೋನಾ 2021 ನೇ ಅಲೆಯಲ್ಲಿ ರೈತರು ಸಾಕಷ್ಟು ಕಷ್ಟ  ನಷ್ಟ ಗಳನ್ನು ಅನುಭವಿಸಿದ್ದಾರೆ. ವಿಶೇಷವಾಗಿ ಉತ್ತರ ಕರ್ನಾಟಕದಲ್ಲಿ ರೈತಾಪಿ ವರ್ಗದವರು ಕಾರಹುಣ್ಣಿಮೆ ಯನ್ನು ಅತಿ ವಿಜೃಂಭಣೆಯಿಂದ ಆಚರಿಸಲು ಸಾಧ್ಯವಾಗದೆ ಆರ್ಥಿಕ ಹೊಡೆತದಿಂದ ತತ್ತರಿಸಿದ್ದಾರೆ. ಹಿಂದೂ ಧಾರ್ಮಿಕವಾಗಿ ಯುಗಾದಿಯು ಎಲ್ಲರಿಗೂ ಹೊಸ  ವರ್ಷವಾಗಿದ್ದು ಅದೇ ರೀತಿ ಬೇಸಿಗೆ ಕಳೆದು ಮುಂಗಾರು ಬರುವ ಹೊತ್ತಿಗೆ ರೈತರಿಗೆ ಕಾರಹುಣ್ಣಿಮೆ ಹೊಸ ವರ್ಷವಾಗಿದೆ. ಅದೇ ರೀತಿ ಭೂಮಿಯನ್ನು ಉಳುಮೆ ಮಾಡಿ ಮುಂಗಾರುಮಳೆ ಆಗುತ್ತಿದ್ದಂತೆ ಕೃಷಿಯ ಭೂಮಿಯನ್ನು ಮಾಡುತ್ತಾ ಹರ್ಷದಿಂದ ಕಾರಹುಣ್ಣಿಮೆಯ ಸಂಭ್ರಮದಿಂದ ಮಾಡುತ್ತಾರೆ ಪ್ರತಿಯೊಬ್ಬರು ರೈತರು ಅಲ್ಲಲ್ಲಿ ಗ್ರಾಮೀಣ ಭಾಗದಲ್ಲಿ ನೀರಸ ಈ ಬಾರಿಯ ಕಾರಹುಣ್ಣಿಮೆ ಎತ್ತು ಗಾಡಿಗಳನ್ನು ಓಡಿಸುತ್ತಾ ಊರಲ್ಲಿ ಮೆರವಣಿಗೆ ಮಾಡಿ ದೇವರಿಗೆ ತೆಂಗಿನಕಾಯಿ ಸಂಪ್ರದಾಯವಿದು. ರೈತರು ತಮ್ಮ ತಮ್ಮ ಎತ್ತುಗಳಿಗೆ ಹೋರಿಗಳಿಗೆ ಶೃಂಗಾರ ಮಾಡಿ ತಾವುಗಳು ಸಂತೋಷವನ್ನು ಸಂಭ್ರಮಿಸುತ್ತಾರೆ. ಆದರೆ ಹರುಷದಿಂದ ಮಾಡಬೇಕಾದ ರೈತರ ಹಬ್ಬ ಕಾರಹುಣ್ಣಿಮೆಗೆ ಸ್ವಲ್ಪ ಕಡಿವಾಣ  ಮದ್ಯವು ಅಲ್ಲಲ್ಲಿ ರೈತರು ತಮ್ಮ ಸಾಂಪ್ರದಾಯಿಕ ಹಬ್ಬವನ್ನು ಆಚರಿಸಿದ್ದಾರೆ. ಈ ಶುಭ ಸಂದರ್ಭದಲ್ಲಿ ಮುಂದಿನ ದಿನಗಳಲ್ಲಿ ಉತ್ತಮ ಮಳೆ, ಬೆಳೆ ಸಮೃದ್ಧವಾಗಿ ರೈತರು ಬೆಳೆಗಳನ್ನು ಹೆಚ್ಚುಹಚ್ಚಾಗಿ ಬೆಳೆದು ರೈತರ ಸಂಕಷ್ಟಗಳು ದೂರಾಗಿ ಹರುಷದಿಂದ ಬದುಕು ನಡೆಸುವಂತಾಗಲಿ ಎಂದು ಬಿಜಾಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಮನಗೂಳಿ ಪಟ್ಟಣ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀ ರಮೇಶ್ ಮಾಡಬಾಳ ಶುಭ ಹಾರೈಸಿದ್ದಾರೆ..

ವರದಿಮಲ್ಲಿಕಾರ್ಜುನ ಬುರ್ಲಿ

Leave a Reply

Your email address will not be published. Required fields are marked *