ಕುಷ್ಟಗಿ ತಾಲೂಕಿನಲ್ಲಿ ಬಾಲ್ಯ ವಿವಾಹ ತಡೆದ ತಾವರಗೇರಾ ಖಾಕಿ ಪಡೆ..

Spread the love

ಕುಷ್ಟಗಿ ತಾಲೂಕಿನಲ್ಲಿ ಬಾಲ್ಯ ವಿವಾಹ ತಡೆದ ತಾವರಗೇರಾ ಖಾಕಿ ಪಡೆ..

ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲ್ಲೂಕಿನ ತಾವರಗೇರ ಹೋಬಳಿ ವ್ಯಾಪ್ತಿಯಲ್ಲಿ ಬರುವ ಕಿಲಾರಹಟ್ಟಿ ಪಂ ವ್ಯಾಪ್ತಿಯಲ್ಲಿ ರಾಮಾಜಿ ನಾಯ್ಕ ತಾಂಡದ ಅಪ್ರಾಪ್ತೆ ವಯಸ್ಸಿನ ಬಾಲಕಿಗೆ ವಿವಾಹ ಮಾಡಿಕೊಡುವ ಬಗ್ಗೆ ಮಾಹಿತಿ ಪಡೆದ ತಾವರಗೇರ ಪೋಲಿಸ್ ಇಲಾಖೆ ಹಾಗೂ. ತಾಲೂಕು ಶಿಶು ಅಭಿವೃದ್ಧಿ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಬಾಲ್ಯ ವಿವಾಹವನ್ನು ತಡೆಹಿಡಿದಿದ್ದಾರೆ ಭಾನುವಾರ ರಾತ್ರಿ ಮಾಹಿತಿ ಪಡೆದ ತಾವರಗೇರ ಠಾಣೆಯ ಪ್ರಭಾರ ಪಿ ಎಸ್ ಐ  ಮಲ್ಲಪ್ಪ ವಜ್ರದ ಹಾಗೂ ಸಿಬ್ಬಂದಿ ಹಾಗೂ ಶಿಶು ಅಭಿವೃದ್ಧಿ ಯೋಜನೆಯ ಮೆಲ್ವಿಚಾರಕರು ಸ್ಥಳಕ್ಕೆ ತೆರಳಿ ಬಾಲ್ಯ ವಿವಾಹ. ತಡೆಹಿಡಿದಿದ್ದಾರೆ. ನಂತರ ಸೋಮವಾರದಂದು ತಾವರಗೇರ ಠಾಣೆಗೆ ಆಗಮಿಸಿದಾಗ  ಪಿ ಎಸ್ ಐ ಮಲ್ಲಪ್ಪ ವಜ್ರದ ಪಾಲಕರಿಗೆ ಮಾಹಿತಿ ನೀಡಿ ಬಾಲ್ಯ ವಿವಾಹ ಮಾಡುವುದು ಕಾನೂನು ಬಾಹಿರವಾಗಿದ್ದು  ಇದನ್ನು ಮೀರಿ ನೆಡೆದರೆ ಪಾಲಕರೆ ಹೋಣೆಗಾರರು ಆಗುತ್ತಾರೆ ಎಂದು ತಿಳಿಸಿದ ತಕ್ಷಣ  ಪಾಲಕರು ಇದಕ್ಕೆ ಒಪ್ಪಿದ ನಂತರ ಬಾಲ್ಯ ವಿವಾಹ ಮಾಡುವದಿಲ್ಲ ಎಂದು ಮುಚ್ಚಳಿಕೆ ಬರೆದು ಕೊಟ್ಟಿದ್ದಾರೆ.

ವರದಿ – ಅಮಾಜಪ್ಪ ಹೆಚ್.ಜುಮಲಾಪೂರ

Leave a Reply

Your email address will not be published. Required fields are marked *