ನನ್ನನ್ನು ತಲೆ ತಗ್ಗಿಸಿ ಶತತ ಓದು, ನಿನ್ನನ್ನು ತಲೆ ಎತ್ತಿ ನಿಲ್ಲುವಂತೆ ಮಾಡುತ್ತೆ  ಸುಪ್ರೀತ್ ಪಾಟೀಲ್

Spread the love

ನನ್ನನ್ನು ತಲೆ ತಗ್ಗಿಸಿ ಶತತ ಓದು, ನಿನ್ನನ್ನು ತಲೆ ಎತ್ತಿ ನಿಲ್ಲುವಂತೆ ಮಾಡುತ್ತೆ  ಸುಪ್ರೀತ್ ಪಾಟೀಲ್

ನಾಡು ನುಡಿ ಹಳಿದಂತೆ ನನ್ನನ್ನು ತಲೆ ತಗ್ಗಿಸಿ ಶತತವಾಗಿ ಓದಿನ ಕಡೆ ಗಮನ ಹರಿಸು ನಿನ್ನನ್ನು ನಾಲ್ಕು ಜನರ ಮದ್ಯ ತಲೆ ಎತ್ತಿ ಮಾತಾನಾಡುವಂತೆ ಮಾಡುತ್ತೆ ಅಂದರೆ ವಿದ್ಯಾರ್ಥಿಗಳು ಪದವಿ ಹಂತದ ಅಭ್ಯಾಸದಂತೆ ಪಠ್ಯಕ್ರಮದ ಕೆಲವೇ ಅಧ್ಯಾಯಗಳಿಗೆ ಮಾತ್ರ ಸೀಮಿತವಾಗದೆ ಪರಿಕಲ್ಪನೆ ಪೂರ್ಣ ಅರ್ಥವಾಗುವವರೆಗೂ ನಿರಂತರ ಅಭ್ಯಾಸ ನಡೆಸಿದರೆ ಯಶಸ್ಸಿನ ದಾರಿ ಸುಗಮವಾಗುತ್ತದೆ ಎಂದು ಮುನಿರಾಬಾದ್ ಪೊಲೀಸ್ ಠಾಣೆಯ ಪಿಎಸ್ಐ ಸುಪ್ರೀತ್ ಪಾಟೀಲ್ ಹೇಳಿದರು. ತಾಲೂಕಿನ ಹೊಸ ಬಂಡಿಹರ್ಲಾಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆಂತರಿಕ ಗುಣಮಟ್ಟ ಮತ್ತು ಭರವಸಾ ಕೋಶ ಹಮ್ಮಿಕೊಂಡಿದ್ದ ಸ್ಪರ್ಧಾತ್ಮಕ ಪರೀಕ್ಷೆ ಯಶಸ್ಸು ಎಂಬ ಐದು ದಿನಗಳ ಉಚಿತ ಆನ್ ಲೈನ್ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿನ ಯಶಸ್ಸಿಗೆ ನಿರಂತರ ಅಭ್ಯಾಸ ಬಿಟ್ಟರೆ ಬೇರೆ ಆಯ್ಕೆ ಇಲ್ಲ. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಪಾಲ್ಗೊಳ್ಳುವವರ ಅನುಪಾತ ದಿನದಿಂದ ದಿನಕ್ಕೆ ಏರುಗತಿಯಲ್ಲಿ ನಡೆದಿದ್ದು ನಿರಂತರ ಓದಿನ ಅಭ್ಯಾಸವಿಟ್ಟುಕೊಂಡವರು ಮಾತ್ರ ಪರೀಕ್ಷೆಯಲ್ಲಿ ಯಶಸ್ವಿಯಾಗಲು ಸಾಧ್ಯವಾಗುತ್ತದೆ ಇಂದಿನ ದಿನಗಳಲ್ಲಿ ಎಲ್ಲಾ ಹುದ್ದೆಗಳ ಆಯ್ಕೆಗೆ ಸಂಬಂಧಿಸಿದಂತೆ ಸಾಕಷ್ಟು ಸಂಪನ್ಮೂಲಗಳು ಸಿಗುತ್ತವೆ ಉತ್ತಮ ಪುಸ್ತಕಗಳು ಮಾರುಕಟ್ಟೆಯಲ್ಲಿ ದೊರೆಯುತ್ತವೆ ಓದುವವರ ಸಾಂಗತ್ಯ ಉತ್ತಮ ಅಭ್ಯಾಸದೊಂದಿಗೆ ಕನಸನ್ನು ನನಸು ಮಾಡಿಕೊಳ್ಳಿ ನಕಾರಾತ್ಮಕ ಚಿಂತನೆಯತ್ತ ಮನಸ್ಸು ವಾಲದೇ ಸಕಾರಾತ್ಮಕ ಚಿಂತನೆಯನ್ನು ಜೀವನದಲ್ಲಿ ರೂಡಿಸಿಕೊಳ್ಳಿ ಎಂದರು. ಪ್ರಾಚಾರ್ಯ ಡಾ.ನಿಂಗಪ್ಪ ಕಂಬಳಿ ಮಾತನಾಡಿ, ಮೊದಲು ದ್ವಂದ್ವಗಳನ್ನು ನಿವಾರಿಸಿಕೊಂಡು ಸ್ಪಷ್ಟ ಗುರಿಯನ್ನು ನಿರ್ಧರಿಸಿಕೊಳ್ಳಿ. ಪರೀಕ್ಷೆಗೆ ಬೇಕಾಗಿರುವ ಸಂಪನ್ಮೂಲಗಳ ಸಂಗ್ರಹ, ಪರಿಣಿತರಿಂದ ಮಾರ್ಗದರ್ಶನ ಪಡೆಯಿರಿ ಸ್ಪರ್ಧೆಗೆ ಮೇಲು-ಕೀಳು ಬಡವ-ಬಲ್ಲಿದ ಎಂಬ ಭೇದಭಾವ ಇರುವುದಿಲ್ಲ ಪರಿಶ್ರಮಿಗಳು ಮಾತ್ರ ಯಶಸ್ಸನ್ನು ಕಾಣಲು ಸಾಧ್ಯ. ಆದ್ದರಿಂದ ನೀವು ಕಾಲಹರಣ ಮಾಡದೆ ಐದು ದಿನಗಳ ಕಾಲ ಸಾಧಕರಿಂದ ಪಡೆದ ಅನುಭವ ಉಪನ್ಯಾಸಕರಿಂದ ಪಡೆದ ವಿಷಯಜ್ಞಾನ ನಿಮ್ಮ ಓದಿಗೆ ಪೂರಕವಾಗಬಲ್ಲದು ಕಾರ್ಯಾಗಾರದಲ್ಲಿ ಪಡೆದ ಎಲ್ಲಾ ಅಂಶಗಳನ್ನು ನಿರಂತರ ಓದಿನಲ್ಲಿ ಅಳವಡಿಸಿಕೊಂಡು ಯಶಸ್ವಿಯಾಗಿ ಎಂದರು. ಸಹಾಯಕ ಪ್ರಾಧ್ಯಾಪಕರಾದ ಸಂತೋಷ ಕಾಡಪ್ಪನವರ, ವೀರೇಂದ್ರ ಪಾಟೀಲ್, ರಾಮಣ್ಣ ಉಪ್ಪಾರ, ಕೃಷ್ಣಮೂರ್ತಿ ಬೇಳೂರು, ಜಗದೀಶ ಹೊಸಳ್ಳಿ, ಅನ್ನಪೂರ್ಣ ಪಂಥರ, ರಾಜು, ಅನುರಾಧ, ಯಂಕೋಬ, ತಾಯಪ್ಪ, ಉಪಸ್ಥಿತರಿದ್ದರು .

ವರದಿ – ಸಂಪಾದಕೀಯ

Leave a Reply

Your email address will not be published. Required fields are marked *