ತಾವರಗೇರಾ ಸವಿತಾ ಸಮಾಜದವರಿಗೆ ಹಾಗೂ ಪತ್ರಕರ್ತರಿಗೆ ವಿತರಕರಿಗೂ ಕಿಟ್ ನಿಡಿ ಮಾನವಿಯತೆ ಮೇರೆದ ಬಿ.ಜೆ.ಪಿ.ಜಿಲ್ಲಾಧ್ಯಕ್ಷ ಹಾಗೂ ಮಾಜಿ ಶಾಸಕ ಡಿ ಎಚ್ ಪಾಟಿಲ್

Spread the love

ತಾವರಗೇರಾ ಸವಿತಾ ಸಮಾಜದವರಿಗೆ ಹಾಗೂ ಪತ್ರಕರ್ತರಿಗೆ ವಿತರಕರಿಗೂ ಕಿಟ್ ನಿಡಿ ಮಾನವಿಯತೆ ಮೇರೆದ ಬಿ.ಜೆ.ಪಿ.ಜಿಲ್ಲಾಧ್ಯಕ್ಷ ಹಾಗೂ ಮಾಜಿ ಶಾಸಕ ಡಿ ಎಚ್ ಪಾಟಿಲ್

ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲ್ಲೂಕಿನ ತಾವರಗೇರಾ ಪಟ್ಟಣದ ಅಂಬೇಡ್ಕರ ಸರ್ಕಲ್ ಹತ್ತಿರಾ ಸವೀತಾ ಸಮಾಜದ ಭಾಂದವರಿಗೆ ಹಾಗೂ ಪತ್ರಿಕೆ ವಿತರಕರಿಗೆ ಜೊತೆಗೆ ತಾವರಗೇರಾ ಭಾಗದ ಪತ್ರಕರ್ತರಿಗೆ ಶ್ರೀ ದೋಡ್ಡನಗೌಡ ಪಾಟೀಲ್ ಇವರ ನೇತೃತ್ವದಿಂದ ಆಹಾರದ ಕಿಟ್ ವಿತರಿಸಿದರು.

ತಾವರಗೇರಾದ ಕಡು ಬಡವರು ಆದ ಸವಿತಾ ಸಮಾಜದ ಯುವಕರು ಹಾಗೂ  ಮಹಿಳೆಯರಿಗೆ ಸುಮಾರು ಮೂವತ್ತೈದು ಆಹಾರ ಕಿಟ್ ನಿಡುವ ಮುಖಾಂತರ ಆ ಬಡ ಕುಟುಂಬಗಳಿಗೆ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ. ಹಾಗೆ ತಾವರಗೇರಾ ಭಾಗದ ಪ್ರತಿಯೊಬ್ಬ ಪತ್ರಕರ್ತರಿಗೂ ಹಾಗೂ ವಿತರಕರಿಗೂ ಆಹಾರ ಕಿಟ್ ನಿಡಿ  ಪತ್ರಕರ್ತರಿಗೆ  ಧೈರ್ಯ ತುಂಬುವ ಕೆಲಸ ಮಾಡಿದರು, ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಯುವ ಮುಖಂಡರು ಆದ ಶ್ರೀ ಚಂದ್ರಶೇಖರ್ ನಾಲತವಾಡರವರು  ಪತ್ರಕರ್ತರು ನಿಡುವ ಸೇವೆ ಅನನ್ಯವಾದದ್ದು ಎಂಥಾ ಕಠಿಣ ಸಂದರ್ಭದಲ್ಲೂ ಕೂಡ ತಮ್ಮ ಜೀವನವನ್ನು ಲೆಕ್ಕಿಸದೇ ಸಮಾಜದ ಒಳಿತಿಗಾಗಿ ಕೆಲಸ ಮಾಡುತ್ತಾರೆ. ಪತ್ರಕರ್ತರು ಹಗಲಿರುಳು ಎನ್ನದೇ ಹಳ್ಳಿಯಿಂದ ಇಡಿದು ದಿಲ್ಲಿಯವರೆಗೂ ಪ್ರತಿ ಮೂಲೆ ಮೂಲೆಯಿಂದ ಸುದ್ದಿ ಬಿತ್ತಾರ ಮಾಡುವ ಪತ್ರಕರ್ತರಿಗೆ ಸರ್ಕಾರವು ಒಂದು ವಿಶೇಷ ಯೋಜನೆ ಬಿಡುಗಡೆ ಮಾಡಬೇಕು, ಜೊತೆಗೆ ಸರ್ಕಾರಕ್ಕೆ ನಮ್ಮ ಪಕ್ಷದವತಿಂದ ಮನವಿ ಸಲ್ಲಿಸುತ್ತೇವೆ ಎಂದು ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡಿದರು.

ಈ ಕೋರೋನಾ ಮಹಾಮಾರಿ ರೋಗದ ಮೋದಲನೇಯ ಅಲೇಗೆ ಹಾಗೂ ಎರಡನೇಯ ಅಲೇಗೆ ಕಡ/ಬಡವರು, ನಿರ್ಗತೀಕರ ಜೀವನ ಕಷ್ಠಕರವಾಗಿದ್ದನ್ನು ಗಮನಿಸಿ ಈಗಾಗಲೇ ಪ್ರತಿ ಹಳ್ಳಿ ಹಳ್ಳಿಗಳಿಗೆ ಬೇಟಿ ನೀಡಿ ಕಡು/ಬಡವರು, ನಿರ್ಗತೀಕರನ್ನು ಗುರುತಿಸಿ ಆ ಕುಟುಂಬಗಳಿಗೂ ಆಹಾರದ ಕಿಟ್ ಗಳನ್ನು ವಿತರಿಸಿದ್ದೆವೆ ಎಂದರು. ಇಂದು ತಾವರಗೇರಾ ಪಟ್ಟಣದಲ್ಲಿ ಸುಮಾರು 55 ಕಿಟ್ ಗಳನ್ನು ವಿತರಿಸಲಾಗಿದೆ.

ಈ ಸಂದರ್ಭದಲ್ಲಿ ಮಂಜುನಾಥ ಜೂಲಕುಂಟಿ, ಸಾಗರ ಬೇರಿ, ಚನ್ನಪ್ಪ ಸಜ್ಜನ್. ಶ್ಯಾಮೂರ್ತಿ ಹಂಚಿ, ರಾಘವೇಂದ್ರ ನಾಯಕ, ಇನ್ನಿತರ ಮುಖಂಡರು ಪಾಲುಗೊಂಡಿದ್ದರು. ಈ ಸಂದರ್ಭದಲ್ಲಿ ಹಿರಿಯ ಪತ್ರಕರ್ತರಾದ ಎನ್.ಶ್ಯಾಮೀದ, ಶರಣುಬಸವ ನವಲಹಳ್ಳಿ, ಭೀಮನಗೌಡ ಮಂಡಲಮರಿ, ಎಮ್.ಡಿ.ರಫೀಕ್, ಶರಣುಬಸವ ಕುಂಬಾರ, ಸುಭಾಷ ರಡ್ಡಿ, ಚಂದ್ರು ಕುಂಬಾರ, ಆರ್.ಬಿ.ಅಲಿಆದಿಲ್, ಅಮಾಜಪ್ಪ ಹೆಚ್. ಜುಮಲಾಪೂರ, ಇತರರು ಉಪಸ್ಥಿತರಿದ್ದರು.

ವರದಿ – ಅಮಾಜಪ್ಪ ಹೆಚ್. ಜುಮಲಾಪೂರ

Leave a Reply

Your email address will not be published. Required fields are marked *