ಕರೋನ ರೋಗದ ಬಗ್ಗೆ ಮಗನ ನಿರ್ಲಕ್ಷ್ಯತನ. ಹಾರಿ ಹೋಯಿತು ತಂದೆ ಮಗನ ಪ್ರಾಣ.  ಜುಮಲಾಪುರ ಯುವಕರಿಂದ ಕರೋನ ರೋಗದ ಕಿರು ಚಿತ್ರ.

Spread the love

ಕರೋನ ರೋಗದ ಬಗ್ಗೆ ಮಗನ ನಿರ್ಲಕ್ಷ್ಯತನ. ಹಾರಿ ಹೋಯಿತು ತಂದೆ ಮಗನ ಪ್ರಾಣ.  ಜುಮಲಾಪುರ ಯುವಕರಿಂದ ಕರೋನ ರೋಗದ ಕಿರು ಚಿತ್ರ.

ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲ್ಲೂಕಿನ ಜುಮಲಾಪುರ ಗ್ರಾಮದ ಯುವಕರ ತಂಡವು ಕರೋನ ಮಹಾಮಾರಿ ರೋಗದ ಬಗ್ಗೆ ಲಾಕಡೌನ ಸಂಧರ್ಭದಲ್ಲಿ. ಈಗಾಗಲೇ ಇಡಿ ಜಗತ್ತೆ ಮಹಾಮಾರಿಗೆ ಹೇದರಿ ತತ್ತರಿಸಿ ಹೋಗುತ್ತಿದೆ, ದಿನೆ ದಿನೆ ಸಾವು / ನೋವು ನರಕ, ಇದನ್ನೆಲ್ಲ ಗಮನಿಸಿದ ಜುಮಲಾಪೂರ ಯುವಕರು ಸಾರ್ವಜನಿಕರಿಗೆ  ಜಾಗೃತಿ ಮೂಡಿಸುವ ಸಲುವಾಗಿ ರೋಗದ ನಿರ್ಲಕ್ಷ್ಯದ ಬಗ್ಗೆ ಕಿರು ಚಿತ್ರ ಮಾಡಿದ್ದಾರೆ. ಚಿತ್ರ ನೋಡುವ ಸಾರ್ವಜನಿಕರು ಎಲ್ಲರ ಮನ ಒಂದು ಕ್ಷಣ ತಲ್ಲಣಿಸುವಂತಿದೆ. ಈ ಕಿರು ಚಿತ್ರ ದೊಡ್ಡಬಸವ ಆರ್ ಹಿರೇಮಠ ಜುಮಲಾಪುರ ಗ್ರಾಮದ ಯುವ ನಿರ್ದೇಶಕನಿಂದ ಮೂಡಿ ಬಂದಿದ್ದು. ಈ ಚಿತ್ರಕ್ಕೆ ಎಲ್ಲಿಲ್ಲದ ಮೆಚ್ಚುಗೆ ಮೂಡಿ ಬರುತ್ತಿವೆ. ಈ ಚಿತ್ರದಲ್ಲಿ ಕರೋನ ರೋಗದ ಬಗ್ಗೆ ಮಗನ ಉಡಾಫೆ ಮಾತುಗಳು ಹಾಗೂ ಮಗನ ನಿರ್ಲಕ್ಷ್ಯತನ ಹಾಗೂ ಅವನ ಕೆಲವು ಗೆಳೆಯರಿಂದ ನಿರ್ಲಕ್ಷ್ಯತನ ಕೆಲವು ಗೆಳೆಯರಿಂದ ರೋಗದ ಬಗ್ಗೆ ಜಾಗೃತಿ ಒಂದು ಕಡೆಯಾದರೆ ಮನೆಯಲ್ಲಿರುವ ವಯೋವೃದ್ಧ ತಂದೆ ಮಗನಿಗೆ ಪ್ರತಿ ಕ್ಷಣಕ್ಕೂ ನಿನು ಕರೋನ ರೋಗದ ಬಗ್ಗೆ ನಿರ್ಲಕ್ಷ್ಯ ಮಾಡಬೇಡ ಜಾಗೃತಿ ಆಗಿರು ಎಲ್ಲೆಂದರಲ್ಲಿ ತಿರುಗಾಡಬೇಡ, ನಿನ್ನನ್ನು ನಂಬಿ ನನ್ನ ಮೊಮ್ಮಗ ನಾನು ಇದ್ದಿವಿ ಎನ್ನುವ ತಂದೆಯ ನೋವಿನ ಮನದಾಳದ ಮಾತು ಒಂದು ಕಡೆ, ಇತ್ತ ಮಗ ಇದೆಲ್ಲಾಸುಳ್ಳು ಸುದ್ದಿ ನನಗೆ ಏನು ಆಗುವುದಿಲ್ಲ ಆ ರೋಗವನ್ನು ತಡೆಯುವ ಶಕ್ತಿ ನನ್ನಲ್ಲಿದೆ, ಈ ವಾಹಿನಿಯು ಪ್ರಚಾರಕ್ಕೋಸ್ಕರ ಮಾಡ್ತಾಯಿವೆ. ನೀನು ತಲೆ ಕೆಡಿಸಿಕೊಳ್ಳಬೇಡ ಎನ್ನುವ ಮಗ. ಇದಾದ ಕೆಲವೇ ದಿನಗಳಲ್ಲಿ ಮಗನಿಗೆ ಸೊಂಕು ತಗಲಿ, ಮಗನಿಂದ ಮನೆಯಲ್ಲಿರುವ ವಯೋವೃದ್ಧ ತಂದೆಗೆ ಸೊಂಕು ತಗಲಿ, ಮನೆಯಲ್ಲಿ ಇರುವ ಆಡಿ ಬೆಳೆಯುವ ಕಂದಮ್ಮಗಳಿಗೆ ಸೊಂಕು ತಗಲಿ, ತದನಂತರ ಈ ಮಹಾಮಾರಿ ಖಾಯಿಲೆಯಿಂದ ತಂದೆ ಹಾಗೂ ತನ್ನ ಮಗನನ್ನು ಕೊಂದುಹಾಕುತ್ತದೆ. ಈ ದೃಶ್ಯ ನೋಡಿದರೆ ಪ್ರತಿಯೊಬ್ಬರ ಕಣ್ಣಲ್ಲಿ ಕಂಬನಿ ದಾರೆ ಹರಿಯುತ್ತದೆ.  ತದನಂತರದಲ್ಲಿ  (ಮಗನ ಮಾತು) ನನ್ನ ತಂದೆ ಕರೋನ ರೋಗದ ಬಗ್ಗೆ ಹೆಳುತ್ತಿದ್ದ ಜಾಗೃತಿ ಮಾತನ್ನು ಕೆಳಿದ್ದರೆ ನನ್ನ ತಂದೆ ಮಗನನ್ನು ಉಳಿಸಿ ಕೊಳ್ಳಬಹುದಿತ್ತು ಎನ್ನುವ ದೃಶ್ಯಗಳು,  ಅಧ್ಭುತ ವಾಗಿ ಮೂಡಿಬಂದಿವೆ ಎಂದು ಸಾರ್ವಜನಿಕ ವಲಯದಲ್ಲಿ ಕೆಳಿಬರುತ್ತಿದೆ. ಇದಕ್ಕೆಲ್ಲ ಸಹಕಾರ ನಿಡಿದ ಮುದೆನೂರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ ನಿಲಪ್ಪ ಕಟ್ಟಿಮನಿ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ವರ್ಗ ಹಾಗೂ ಜುಮಲಾಪುರ ಮುದೆನೂರ ಗ್ರಾಮದ ಸಾರ್ವಜನಿಕರು. ಪ್ರತಿಯೊಬ್ಬರು  ಈ ಕಿರು ಚಿತ್ರ ನೋಡಿ, ಹರಸಿ, ಹಾರೈಸಿ  https://youtu.be/sEpbGPBnSUs

ವರದಿ – ಅಮಾಜಪ್ಪ ಹೆಚ್.ಜುಮಲಾಪೂರ

Leave a Reply

Your email address will not be published. Required fields are marked *