ಗಂಗಾವತಿ ನಗರದಲ್ಲಿ ಇಂದು 14 ಲಕ್ಷ ರೂ. ಮೌಲ್ಯದ ಅಕ್ರಮ ಬಿತ್ತನೆ ಬೀಜ ದಾಸ್ತಾನು ವಶಪಡಿಸಿಕೊಂಡ ಅಧಿಕಾರಿಗಳು.

Spread the love

ಗಂಗಾವತಿ ನಗರದಲ್ಲಿ ಇಂದು 14 ಲಕ್ಷ ರೂ. ಮೌಲ್ಯದ ಅಕ್ರಮ ಬಿತ್ತನೆ ಬೀಜ ದಾಸ್ತಾನು ವಶಪಡಿಸಿಕೊಂಡ ಅಧಿಕಾರಿಗಳು.

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಗಂಗಾವತಿ ನಗರದಲ್ಲಿ ಬಿತ್ತನೆ ಬೀಜಗಳನ್ನು ಅಕ್ರಮವಾಗಿ ದಾಸ್ತಾನು ಇಟ್ಟಿರುವ ಬಗ್ಗೆ ಮಾಹಿತಿ ಪಡೆದ ಅಧಿಕಾರಿಗಳು ದಾಳಿ ನಡೆಸಿ 14 ಲಕ್ಷ ರೂ. ಮೌಲ್ಯದ ಬೀಜಗಳನ್ನು ವಶಪಡಿಸಿಕೊಂಡಿರುವ ಘಟನೆ ನಡೆದಿದೆ. ಹದಿನಾಲ್ಕು ಲಕ್ಷ ರೂ.ಗೂ ಅಧಿಕ ಮೌಲ್ಯದ ಬಿತ್ತನೆ ಬೀಜಗಳನ್ನು ಅಕ್ರಮವಾಗಿ ದಾಸ್ತಾನು ಇಟ್ಟಿರುವ ಬಗ್ಗೆ ಖಚಿತ ಮಾಹಿತಿ ಪಡೆದುಕೊಂಡ ಕೃಷಿ ಇಲಾಖೆಯ ಅಧಿಕಾರಿಗಳು ದಾಳಿ ಮಾಡಿ ವಶಕ್ಕೆ ಪಡೆದ ಘಟನೆ ನಗರದಲ್ಲಿ ನಡೆದಿದೆ. ಕೃಷಿ ಇಲಾಖೆಯ ವಿಚಕ್ಷಣ ವಿಭಾಗದ ಅಧಿಕಾರಿಗಳಾದ ಕುಮಾರಸ್ವಾಮಿ, ನಿಂಗಪ್ಪ ಹಾಗೂ ಸಹಾಯಕ‌ ಕೃಷಿ ಅಧಿಕಾರಿ ಸಂತೋಷ್ ಪಟ್ಟದಕಲ್ ನೇತೃತ್ವದಲ್ಲಿ, ಇಲ್ಲಿನ ಖಾಸಗಿ ಗೋದಾಮಿನ ಮೇಲೆ ದಾಳಿ ಮಾಡಿದ ಅಧಿಕಾರಿಗಳು ಅಕ್ರಮ ದಾಸ್ತಾನು ಪತ್ತೆ ಹಚ್ಚಿದ್ದಾರೆ. ಮುದ್ಗಲ್ ಮೂಲದ ಮಲ್ಲಪ್ಪ ಮೇಟಿ ಎಂಬುವವರು ನಗರದ ರೈಸ್ ಮಿಲ್ ಒಂದರ ಗೋದಾಮಿನಲ್ಲಿ 54 ಚೀಲದಷ್ಟು ಬಿತ್ತನೆ ಬೀಜಗಳನ್ನು ಸಂಗ್ರಹಿಸಿಟ್ಟಿದ್ದರು. ಈ ಬಗ್ಗೆ ಅಧಿಕಾರಿಗಳು ಮಾಹಿತಿ ಕೇಳಿದರೆ ಅನುಮತಿ ಇದೆ ಎಂದು ಹೇಳಿದ ಮೇಟಿ ಸಕಾಲಕ್ಕೆ ಪೂರಕ‌ ದಾಖಲೆ ಒದಗಿಸಿಲ್ಲ ಎನ್ನಲಾಗಿದೆ. ಬೀಜ ಮಾರಾಟಕ್ಕೆ ಮುದ್ಗಲ್​ನಲ್ಲಿ ಪರವಾನಗಿ ಪಡೆದಿದ್ದಾರೆ. ಆದರೆ ದಾಸ್ತಾನು ಮಾಡಲು ಸ್ಥಳೀಯ ಕೃಷಿ ಲಾಖೆಯಿಂದ ಅನುಮತಿ ಪಡೆಯಬೇಕಿತ್ತು. ಆದರೆ ಯಾವುದೇ ಮಾಹಿತಿ ನೀಡದೇ ಅಕ್ರಮವಾಗಿ ಸಂಗ್ರಹಿಸಿಡಲಾಗಿತ್ತು ಎಂದು ಕೃಷಿ ಅಧಿಕಾರಿಗಳು ತಿಳಿಸಿದ್ದಾರೆ. ಇದೀಗ ಅಕ್ರಮ‌ ದಾಸ್ತಾನು ವಶಕ್ಕೆ ಪಡೆದಿರುವ ಅಧಿಕಾರಿಗಳು, ಅಕ್ರಮವಾಗಿ ಸಂಗ್ರಹಿಸಿಟ್ಟಿರುವ ಬಿತ್ತನೆ ಬೀಜಗಳು ಅಸಲಿಯೋ, ನಕಲಿಯೋ ಎಂಬುವುದರ ಬಗ್ಗೆ ಸ್ಯಾಂಪಲ್ ಪಡೆದು ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ. ನಾಲ್ಕು ಚೀಲ ಜೋಳ, ನಾಲ್ಕು ಚೀಲ ಮೆಕ್ಕೆಜೋಳ ಹಾಗೂ 46 ಚೀಲ ಸಜ್ಜೆಯನ್ನು ವಶಕ್ಕೆ ಪಡೆಯಲಾಗಿದೆ.

ವರದಿ – ಅಮಾಜಪ್ಪ ಹೆಚ್.ಜುಮಲಾಪೂರ

Leave a Reply

Your email address will not be published. Required fields are marked *