ತಾವರಗೇರಾ ಪಟ್ಟಣ ಹಾಗೂ ಸುತ್ತ/ಮುತ್ತಲಿನ ಗ್ರಾಮಗಳಲ್ಲಿ ಆಕ್ರಮ ಮಧ್ಯ ಮಾರಾಟ ಜೋರು. ನಿಗದಿ ಬೇಲೆ ಗಿಂತ ಮೂರು ಪಟ್ಟು ಹೆಚ್ಚಳ.

Spread the love

ತಾವರಗೇರಾ ಪಟ್ಟಣ ಹಾಗೂ ಸುತ್ತ/ಮುತ್ತಲಿನ ಗ್ರಾಮಗಳಲ್ಲಿ ಆಕ್ರಮ ಮಧ್ಯ ಮಾರಾಟ ಜೋರು. ನಿಗದಿ ಬೇಲೆ ಗಿಂತ ಮೂರು ಪಟ್ಟು ಹೆಚ್ಚಳ.

ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ತಾವರಗೇರಾ ಪಟ್ಟಣ ಹಾಗೂ ಸುತ್ತ/ಮುತ್ತಲಿನ ಗ್ರಾಮಗಳಲ್ಲಿ ಅಕ್ರಮ ಮಧ್ಯ ಮಾರಾಟ ಹೆಗ್ಗಿಲ್ಲದೆ ನಡೆಯುತ್ತಿದೆ. ಮಧ್ಯ ಪ್ರೀಯರು (ಕುಡಿಯುವ) ಜನರು ಮಧ್ಯ ಮಾರಾಟದವರು ನಿಗದಿ ಬೆಲೆಗಿಂತ ಮೂರು ಪಟ್ಟು ವಸೂಲಿ ಮಾಡುತ್ತಿದ್ದಾರೆ ಎಂದು W.P.I. ಪಕ್ಷದ ತಾವರಗೇರಾ ಹೋಬಳಿ ಘಟಕದವತಿಯಿಂದ ಕುಷ್ಟಗಿ ಮಾನ್ಯ ತಹಶೀಲ್ದಾರ ಎಂ.ಸಿದ್ದೇಶ ಇವರಿಗೆ ಮನವಿ ಪತ್ರ ನೀಡಿದ್ದಾರೆ. ಕೊರೊನಾದ ಮೋದಲನೆ ಅಲೆ ಮತ್ತು ಎರಡನೆಯ ಅಲೆಗೆ ಜನರು ತತ್ತರಿಸಿ ಹೋಗಿದ್ದಾರೆ. ಎಷ್ಟೊ ಕುಟುಂಬಗಳು ಬೀದಿ ಪಾಲಾಗಿದ್ದಾರೆ. ಸರ್ಕಾರ ಈ ಕೊರೊನಾವನ್ನು ಹತೋಟಿಗೆ ತರುವುದಕ್ಕೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ಸರ್ಕಾರವು ವಾರದ ಮುಂದೆ ವಾರದಲ್ಲಿ ಲಾಕ್ ಡೌನ್ ಘೋಷಣೆ ಮಾಡುತ್ತಿದೆ. ಜನರ ಸಂಕಷ್ಟಕ್ಕೆ ಸರ್ಕಾರ ಹಾಗೂ ಧಾನಿಗಳು ಮುಂದಾಗಿದ್ದಾರೆ, ಇನ್ನೂ ಕೆಲವರಿಗೆ ತುತ್ತಿನ ಅನ್ನಕ್ಕಾಗಿ ಫರದಾಡುವಂತ ಪರಿಸ್ಥಿತಿ ಉಂಟಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಜನರು ಬದುಕುತ್ತಿದ್ದರು. ಕೆಲ ಅಕ್ರಮ ಮಧ್ಯ ಮಾರಾಟಗಾರರು ಅಂಗಡಿ,ಹೋಟಲ್,ಧಾಭಾ ಮತ್ತು ಮನೆಗಳಲ್ಲಿ ರಾಜಾರೋಷವಾಗಿ ಮಧ್ಯ ಮಾರಾಟದ ದಂಧೆ ನಡೆಸುತ್ತಿದ್ದಾರೆ. ಅದು ಅಭಕಾರಿಯವರು ನೀಗದಿ ಪಡಿಸಿದ ಬೆಲೆಗಿಂತ ಎರಡು ಪಟ್ಟು/ಮೂರು ಪಟ್ಟು ಹೆಚ್ಚಿನ ಬೆಲೆಗೆ ಹಣ ಪಡೆಯುತ್ತಿದ್ದಾರೆ. ಈ ಮಹಾಮಾರಿ ಕೊರೊನಾದ ವಿರುದ್ದ ಕೆಲ ಕಡು/ಬಡವರು, ನೀರ್ಗತಿಕರ ಕುಟುಂಬಗಳು ಬಿದಿ ಪಾಲಾಗಿದ್ದು ಹೆಚ್ಚು ಹೆಚ್ಚು,  ಮಧ್ಯ ಪ್ರೀಯರು ಈ ಬಡ ಕುಟುಂಬದಲ್ಲಿರುವವರೆ ಹೆಚ್ಚು, ಈ ಕುಡಿತದ ಅಮಲಿಗೆ ಮನೆಯಲ್ಲಿರುವ ಸಾಮಾನುಗಳನ್ನು ತಂದು ಮಾರಿ ಕುಡಿಯುವ ಪರಿಸ್ಥಿತಿ ಉಂಟಾಗಿದೆ. ಆದ್ದರಿಂದ ಕಡು/ಬಡವರು, ನಿರ್ಗತೀಕರ ಜೀವನ ಹೇಳಲಾಗದ ತೀರ ಕಷ್ಟಕರ ಜೀವನವಾಗಿದೆ. ಇದರ ಗುರಿಯನ್ನು ಇಟ್ಟುಕೊಂಡು W.P.I. ಪಕ್ಷದ ತಾವರಗೇರಾ ಹೋಬಳಿ ಘಟಕದವತಿಯಿಂದ ಕುಷ್ಟಗಿ ಮಾನ್ಯ ತಹಶೀಲ್ದಾರ ಎಂ.ಸಿದ್ದೇಶ ರವರಿಗೆ ಮನವಿ ಪತ್ರ ನೀಡಿ. ತಾವರಗೇರಾ ಪಟ್ಟಣ ಹಾಗೂ ಸುತ್ತ/ಮುತ್ತಲಿನ ಗ್ರಾಮಗಳಲ್ಲಿ ನಡೆಯುವ ಅಕ್ರಮ ಮಧ್ಯ ಮಾರಾಟದ ದಂಧೆಗೆ ಕಡಿವಾಣ ಹಾಕಿ. ಇದರಿಂದ ಯುವಕರು ಚಟಕ್ಕೆ ಬಿದ್ದು ಬಲಿಯಾಗುತ್ತಿದ್ದಾರೆ. ಈ ವಿಷಯವನ್ನು ಗಂಭೀರವಾಗಿ ಪರಿಶೀಲಿಸಿ ಅಕ್ರಮ ಮಧ್ಯ ಮಾರಾಟ ಮಾಡುವವರ ವಿರುದ್ದ ಸೂಕ್ತ ಕ್ರಮ ತಗೆದುಕೊಂಡು, ಮಧ್ಯ ಮುಕ್ತ ಊರುಗಳನ್ನಾಗಿ ಮಾಡಿ, ಈ ಅಕ್ರಮ ಮಧ್ಯ ಮಾರಾಟ ತಾವರಗೇರಾ ಪಟ್ಟಣದಲ್ಲಿ ಹಾಗೂ ಹಳ್ಳಿಗಳಲ್ಲಿ ಹೀಗೆ ಮುಂದುವರೆದರೆ, ಮುಂದಿನ ದಿನಗಳಲ್ಲಿ ಮಹಿಳೆಯರನ್ನು ಕರೆದುಕೊಂಡು ನಮ್ಮ W.P.I. ಪಕ್ಷ ತಾವರಗೇರಾ ಹೋಬಳಿ ಘಟಕದವತಿಯಿಂದ ತಮ್ಮ ಕಾರ್ಯಲಯದ ಮುಂದೆ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದೆಂದು ಅಗ್ರಹಿಸಿದರು. ಈ ಸಂದರ್ಭದಲ್ಲಿ ನಜೀರ ಮೂಲಿಮನಿ ಕರ್ನಾಟಕ ರೈತ ಹಸೀರು ಸೇನೆ. ಸಂಘದ ಜಿಲ್ಲಾ ಅಧ್ಯಕ್ಷರು, W.P.I. ಪಕ್ಷದ ಮಹ್ಹಮದ ಅಲ್ತಾಪ್ ರವರು, W.P.I. ಪಕ್ಷ ರಾಜಾನಾಯಕ ರಾಜ್ಯ ಕಾರ್ಯಕಾರಿ ಮಂಡಳಿ ಸದಸ್ಯರು, ಹಾಗೂ W.P.I. ಪಕ್ಷದ ತಾವರಗೇರಾ ಹೋಬಳಿ ಘಟಕದ ಅಧ್ಯಕ್ಷರಾದ ಯಮನೂರಪ್ಪ ಬಿಳೆಗುಡ್ಡ ಹಾಗೂ ಕಾರ್ಯದರ್ಶೀಗಳಾದ ಶರಣಪ್ಪ ಕಲಾಲ ಮತ್ತು ಇನ್ನೋರ್ವ ಸದಸ್ಯರಾದ ಯಲ್ಲಪ್ಪ ಕಲಾಲ ಇತರರು ಪಾಲುಗೊಂಡಿದ್ದರು. ಒಟ್ಟಿನಲ್ಲಿ ಅಭಕಾರಿ ಇಲಾಖೆಯವರು ಯಾವ ರೀತಿಯಲ್ಲಿ ಕ್ರಮ ತಗೆದುಕೊಳ್ಳುತ್ತಾರೆ ಎಂಬುವುದು ಕಾದು ನೋಡಬೇಕಾಗಿದೆ.

ವರದಿ – ಅಮಾಜಪ್ಪ ಹೆಚ್.ಜುಮಾಲಾಪೂರ

Leave a Reply

Your email address will not be published. Required fields are marked *