ಕಷ್ಟದ ಸಂದರ್ಭದಲ್ಲಿ  ಬಡವರ ಬಾಳಿಗೆ ಬೇಳಕಾದ ” ಕರುನಾಡ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್  ಸಂಸ್ಥೆ.

Spread the love

ಕಷ್ಟದ ಸಂದರ್ಭದಲ್ಲಿ  ಬಡವರ ಬಾಳಿಗೆ ಬೇಳಕಾದಕರುನಾಡ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್  ಸಂಸ್ಥೆ.

ಸ್ನೇಹ  ತಾಯ್ತನ, ಸ್ನೇಹ  ನಿಸ್ವಾರ್ಥ , ಸ್ನೇಹ  ನಿಷ್ಠೆ , ಹಾಗೂ   ಶಾಶ್ವತ  ಸಂಬಂಧದ  ಬೆಸುಗೆ  , ಬಾಲ್ಯದಿಂದಲೂ  ಸ್ನೇಹಿತರಾದ ನರೇಂದ್ರ  ಹಾಗೂ  ಚಂದನ್  ಜೀ. ಗೌಡ  ಅವರ  ಈ ಸ್ನೇಹ  20 ವರುಷಗಳ  ತಾಯ್ತನದ  ಅಪ್ಪುಗೆ…. ನಿಸ್ವಾರ್ಥವಿಲ್ಲದ  ಸ್ನೇಹಿತರ  ಮನಸುಗಳು  ಜೊತೆ ಸೇರಿ, ಪ್ರಾರಂಭಿಸಿದ ಟ್ರಾನ್ಸ್ ಪೋರ್ಟ್ ಬಿಸ್ನೆಸ್ನ ಈ   ಸಂಸ್ಥೆಯೇ ” ಕರುನಾಡು ಸರ್ವೀಸಸ್ ಪ್ರೈವೇಟ್ ಲಿಮಿಟೆಡ್ ”  …ಮೊದಲಿಗೆ  “ಕರುನಾಡು  ಕ್ಯಾಬ್ಸ್ ” ಎಂಬ ಹೆಸರಿನಲ್ಲಿ  ಪ್ರಾರಂಭವಾದ ಈ ಸಂಸ್ಥೆಯು   ಇದೀಗ  “ಕರುನಾಡು ಸರ್ವೀಸಸ್   ಪ್ರೈವೇಟ್ ಲಿಮಿಟೆಡ್.. ”   ಎಂಬ ನಾಮಾಂಕಿತದಿಂದ  ಪ್ರಸಿದ್ಧಿ  ಪಡೆದಿದೆ…  2009  ರಲ್ಲಿ  ಪ್ರಾರಂಭವಾದ  ಈ  ಸಂಸ್ಥೆಯು, ಈ ವರೆಗೂ  ಹಲವಾರು  ವಾಹನ ಸುಮಾರು  2000 ಕ್ಕೂ  ಹೆಚ್ಚು   ಚಾಲಕರ ಬದುಕಿಗೆ  ಬೆಳಕು… ಹೆಸರಾಂತ, MNC ಕಂಪನಿಗಳು  ಹಾಗೂ  ಹಲವಾರು  ಪ್ರತಿಷ್ಠಿತ  ಕಾರ್ಖಾನೆಗಳಿಗೆ   ವಾಹನ ಸೌಲಭ್ಯ ವ್ಯವಸ್ಥೆ  , ಪ್ರವಾಸಿಗರು  ಹಾಗೂ  ಬೇರೆ  ಬೇರೆ  ರೀತಿಯ ಕಾರ್ಯಕ್ರಮಗಳಿಗೆ  ವಾಹನದ  ವ್ಯವಸ್ಥೆಯನ್ನು  ಪೂರೈಸಲಾಗುತ್ತದೆ..  ಅದರಂತೆಯೇ  ಸಂಸ್ಥೆಯ  ಈ ಸ್ನೇಹಪರ  ಚಿಂತನೆಯ  ನೆರಳಲ್ಲಿಯೇ  ಎಷ್ಟೋ  ನಿಷ್ಠಾವಂತ  ಚಾಲಕರನ್ನು  ಈ ಸಂಸ್ಥೆಯು  ಇಂದಿಗೂ  ನೆನೆಯುತ್ತದೆ…. ನರೇಂದ್ರ  ಅವರು  ಮೂಲತಃ  ಬೆಂಗಳೂರಿನ  ಜೆ.ಪಿ ನಗರ  ,   ಚಂದನ್  ಜೀ , ಗೌಡ  ಅವರು ಬೆಂಗಳೂರಿನ  ಜಯನಗರ….   ಸಂಸ್ಥೆಯು  ಈ ವರೆಗೂ  ಹಲವಾರು   ಸಾಮಾಜಿಕ  ಕಳಕಳಿಯ  ಉದ್ದೇಶದೊಂದಿಗೆ ,  ಎಲೆಮರಿಕಾಯಿಯಂತೆ  ಎಷ್ಟೋ  ಸಮಾಜ  ಸೇವೆಯನ್ನು   ಮಾಡುತ್ತಾ  ಬಂದಿದೆ… ಅದರಂತೆಯೇ ಈ ಬಾರಿ  ಕರೋನಾ  ನಿವಾರಣಾ  ಕಾರ್ಯಕ್ರಮದಲ್ಲಿ  ತಾವೂ  ಕೂಡ  ಸಂಸ್ಥೆಯ  ಮುಖಾಂತರ  ಜನಸೇವೆ  ಮಾಡುವ  ನಿಟ್ಟಿನಲ್ಲಿ  (ಕರುನಾಡು ಕ್ಯಾಬ್ಸ್)  ” ಕರುನಾಡು ಸರ್ವೀಸಸ್  ಪ್ರೈವೇಟ್ ಲಿಮಿಟೆಡ್ ” ಮಾಲೀಕರು  ಹಾಗೂ 80 ಕ್ಕೂ ಹೆಚ್ಚಿನ   ಸಿಬ್ಬಂದಿಗಳು  ಸೇರಿ,  ಸಮಾಜ  ಸೇವೆಯಲ್ಲಿ  ತಮ್ಮ ನಿಸ್ವಾರ್ಥ  ಸೇವೆಗೆ  ಮುಂದಾಗಿದ್ದಾರೆ.   ಕರೋನಾ ನಿವಾರಣಾ ಜಾಗೃತಿ ಮೂಡಿಸುವ ಈ ಕಾಲದಲ್ಲಿ  ಸಂಸ್ಥೆಯ ಮುಖ್ಯ  ವಾಹನ ಚಾಲಕರ ಸಮಸ್ಯೆಗಳನ್ನು, ಅವರ  ಸ್ಥಿತಿಗತಿಯನ್ನು ಮನಗಂಡು  ಖುದ್ದಾಗಿ, ಈ  ಸಂಸ್ಥೆಯ  ಸಿಬ್ಬಂದಿಗಳು   ನೀಡಿದಂತಹ  ಆಲೋಚನೆಯ  ಮೇರೇಗೆ  ಬಡವರಿಗೆ,  ಬೀದಿ ಬದಿಯ ವ್ಯಾಪಾರಿಗಳಿಗೆ, ಹಾಗೂ  ಮುಖ್ಯವಾಗಿ  ವಾಹನ  ಚಾಲಕರಿಗೆ  ಈ ಸಂಸ್ಥೆಯು, ದಿನನಿತ್ಯದ ಊಟ  ಹಾಗೂ  ವೈಯುಕ್ತಿಕ ಸಮಸ್ಯೆಯ ಸಲುವಾಗಿ  ಸಹಾಯ ಬೇಡಿದ  ವ್ಯಕ್ತಿಗಳಿಗೆ  ಸಂಬಂಧಿಸಿದಂತಹ ಮುಖ್ಯ  ಜವಾಬ್ದಾರಿಯನ್ನು  ಈ ಸಂಸ್ಥೆಯ  ಮಾಲೀಕರು  ಆದ ಚಂದನ್  ಜೀ  ಗೌಡ  ಹಾಗೂ  ನರೇಂದ್ರ  ಅವರು  ಹಾಗೂ   ಕರುನಾಡ  ಸಂಸ್ಥೆಯ  ಸಿಬ್ಬಂದಿಗಳು  ಪರೋಕ್ಷವಾಗಿ ನೆರವಾಗಿದ್ದಾರೆ…ಕಳೆದ ವರ್ಷದ  ಲಾಕ್ ಡೌನ್  ಸಮಯದಲ್ಲಿ ( ಕರೋನಾ  ಒಂದನೇ ಅಲೆ) ಈ ಸಂಸ್ಥೆಯು  ದಿನನಿತ್ಯ ಸುಮಾರು  300.400 ಜನರಿಗೆ  ಪ್ರತಿ ದಿನದ ಊಟ  ಹಾಗೂ  ನೀರಿನ  ಪೂರೈಕೆಯ  ಜವಾಬ್ದಾರಿಯನ್ನು  ಹೊತ್ತು  ಲಾಕ್ ಡೌನ್ ಸಮಯದಲ್ಲಿ  ಹಲವಾರು ಕುಟುಂಬಕ್ಕೆ  ನೆರವಾಗಿತ್ತು. ಆದರೆ  2021 ರ ಕರೋನಾ  ಎರಡನೇ  ಅಲೆಯ  ಈ ಸಂದರ್ಭದಲ್ಲಿ  ಜೆ.ಪಿ ನಗರದ  ಸುತ್ತಮುತ್ತ 7 ನೇ ಹಂತ ಮತ್ತು 8 ನೇ ಹಂತ ಹಾಗೂ   ಬೆಳ್ಳಂದೂರು , ಎಲೆಕ್ಟ್ರಾನಿಕ್ ಸಿಟಿ, ವೈಟ್ ಫೀಲ್ಡ್ , ಜಯನಗರ ಬನಶಂಕರಿಯ  ಸುತ್ತಮುತ್ತ  ಏರಿಯಾಗಳಲ್ಲಿ  ನಿರ್ಗತಿಕರು, ಆಟೋ  ಚಾಲಕರು… ಬೀದಿ  ವ್ಯಾಪಾರಿಗಳು ಮತ್ತು  ಸ್ಲಂ ನ  ಹಲವಾರು  ಜಾಗಗಳಲ್ಲಿ  ಇರುವ ಸುಮಾರು  500 ರಿಂದ 600 ಮಂದಿ,   ಶ್ರಮಿಕರಿಗೆ  ದಿನಕೂಲಿ  ಕಾರ್ಮಿಕರಿಗೆ  ಊಟದ  ವ್ಯವಸ್ಥೆಯನ್ನು ಪೂರೈಸಲಾಗುತ್ತದೆ. .. ಇದಲ್ಲದೆ  ಕರೋನಾ  ಎರಡನೇ ಅಲೆಯ  ನಿವಾರಣಾ  ಜಾಗೃತಿ ಯ  ಕಾರ್ಯಕ್ರಮದಲ್ಲಿ  ತಮ್ಮ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ   ಹಾಸ್ಪಿಟಲ್ ” ನ  ನರ್ಸ್ ಹಾಗೂ ಕರೋನಾ  ವಾರಿಯರ್ಸ್  (front line workers ) ಗೆ ,ಉಚಿತವಾಗಿ 24 / 6 ದಿನದ   ವಾಹನದ  ವ್ಯವಸ್ಥೆಯ ಜವಾಬ್ದಾರಿಯನ್ನು   ಈ ಸಂಸ್ಥೆಯ ಮಾಲೀಕರೇ  ವಹಿಸಿಕೊಂಡಿದ್ದಾರೆ. ಪ್ರತಿ ದಿನದ ಅನ್ನ ದಾಸೋಹದ  ಈ  ಪ್ರೀತಿಯ  ಸೇವೆಯಲ್ಲಿ  ಸ್ನೇಹ ಪರದಿ  ಮೆರೆದ ಈ ಸ್ನೇಹಿತರ  ಮತ್ತು ಸುಮಾರು  80 ಮಂದಿ  ಚಾಲಕರ  ಜನರ  ನಿಸ್ವಾರ್ಥ  ಸೇವೆಯಿದೆ…. ಪ್ರತಿದಿನ ತಾವೇ  ಖುದ್ದಾಗಿ ಸುಮಾರು  ಮೂವತ್ತು  ಜನರು ಚಾಲಕರು  ಸೇರಿ  ಈ ಸೇವೆಯಲ್ಲಿ  ತೊಡಗಿಸಿಕೊಂಡಿದ್ದು  , ಆರೋಗ್ಯದ ಸ್ಥಳಕ್ಕೆ  ಆಗಾಗ  ಭೇಟಿನೀಡಿ ಊಟದ  ಪರಿಶೀಲನೆಯನ್ನು  ಕೂಡ  ಮಾಡಲಾಗುತ್ತದೆ…    ಒಟ್ಟಿನಲ್ಲಿ  ಸ್ನೇಹಪರ  ಚಿಂತನೆಯ  ಈ ತಾಯ್ತನದ  ಸೇವೆಯಲ್ಲಿ  ಮೆರೆದ  ಈ  ಸ್ನೇಹಿತರ  ನಿಸ್ವಾರ್ಥ  ಸೇವೆ  ನಿಜಕ್ಕೂ  ಶ್ಲಾಘನೀಯ… ಮತ್ತು  ಈ ಸಿಬ್ಬಂದಿಗಳು  ಮಾಡುವ ಈ ಪ್ರೀತಿಪೂರ್ವಕ  ಸಹಾಯಕ್ಕೆ ”  ಕರುನಾಡು  ಸರ್ವೀಸಸ್ ಪ್ರೈವೇಟ್ ಲಿಮಿಟೆಡ್ ” ನ  ಸಹಾಯ ಹಸ್ತದ  ಚಿಂತನೆ  ನಿಜಕ್ಕೂ  ಹೆಮ್ಮೆಯ  ಸಂಗತಿ…. ಹೀಗೆ  ಚಿರಂತನವಾಗಿ ಸ್ನೇಹಿತರ  ಈ ಸೇವೆಗೆ  ಯಶಸ್ವಿಯಾಗಲಿ….

ವರದಿ – ಅಮಾಜಪ್ಪ ಹೆಚ್. ಜುಮಾಲಾಪೂರ

Leave a Reply

Your email address will not be published. Required fields are marked *