ಖಾಕಿ ಹಿಂದಿನ ಮಾನವೀಯ ಮುಖ : ಲಾಕ್ ಡೌನ್ ನಲ್ಲಿ ಬಡ ಕುಟುಂಬಗಳಿಗೆ ಆಸರೆಯಾಗಿ ನಿಂತ ರಾಯಚೂರು ಜಿಲ್ಲಾ ಎಸ್ಪಿ ವೇದಮೂರ್ತಿಯವರು

Spread the love

ಖಾಕಿ ಹಿಂದಿನ ಮಾನವೀಯ ಮುಖ : ಲಾಕ್ ಡೌನ್ ನಲ್ಲಿ ಬಡ ಕುಟುಂಬಗಳಿಗೆ ಆಸರೆಯಾಗಿ ನಿಂತ ರಾಯಚೂರು ಜಿಲ್ಲಾ ಎಸ್ಪಿ ವೇದಮೂರ್ತಿಯವರು

ಕೋವಿಡ್ ಸಮಯದಲ್ಲಿ ನೂರಕ್ಕೂ ಹೆಚ್ಚು ಕುಟುಂಬಗಳಿಗೆ ಆಹಾರ ಕಿಟ್ ನೀಡುವ ಮೂಲಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ವೇದಮೂರ್ತಿ ಅವರು ಖಾಕಿ ಹಿಂದಿನ ತಾಯಿ ಹೃದಯವನ್ನು ತೆರೆದಿಟ್ಟಿದ್ದಾರೆ. ರಾಯಚೂರು ಜಿಲ್ಲೆಯ ಪೊಲೀಸ್ ವರಿಷ್ಠ ಸಿ.ಬಿ. ವೇದಮೂರ್ತಿ ಅವರು ಯಾದಗಿರಿ ಜಿಲ್ಲಾ ಎಸ್ ಪಿ ಆಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ.  ರಬ್ಬರ್ ಕೆಲಸ ಮಾಡುತ್ತಿರುವ ಬಡ ಕುಟುಂಬದ ಬುಡ ಜಂಗಮರಿಗೆ ವೇದಮೂರ್ತಿ ಅವರು, ಕೋವಿಡ್ ಸಮಯದಲ್ಲಿ ಯಾರು ಹೊರಗಡೆ ಬರಬೇಡಿ ಎಂದು ಅವರ ಜೀವನಕ್ಕೆ ಆಹಾರ ಕಿಟ್ ನೀಡುವುದರ ಮೂಲಕ ಮಾನವೀಯತೆ ತೋರಿದ್ದಾರೆ. ಇದು ರಾಜ್ಯಕ್ಕೆ ಮಾದರಿ ಎಂದರೆ ತಪ್ಪಾಗಲಿಕ್ಕಿಲ್ಲ. ಅವರು ರಾಯಚೂರು ಜಿಲ್ಲೆಯಲ್ಲೂ ಒಳ್ಳೆಯ ಹೆಸರು ಸಂಪಾದಿಸಿದ್ದಾರೆ. ಕೋವಿಡ್ ಸಮಯದ ಸಂಕಷ್ಟದಲ್ಲಿ ಪೊಲೀಸ್ ಅಧಿಕಾರಿ ಆಸರೆಯಾಗಿದ್ದು, ಪುಣ್ಯದ ಕೆಲಸವನ್ನು ಜಿಲ್ಲಾ ಎಸ್ಪಿ ಸಿ ಬಿ ವೇದಮೂರ್ತಿ ಮಾಡಿದ್ದಾರೆ ಎಂದು ಬುಡ ಜಂಗಮದ ಮುಖಂಡರು ಕೊಂಡಾಡುತ್ತಾರೆ. ಒಟ್ಟಿನಲ್ಲಿ ಈ ಪೊಲೀಸ್ ಇಲಾಖೆ ಸರ್ಕಾರದ ಆದೇಶದಕ್ಕಿಂತ ನೂರು ಪಟ್ಟು ಕಾರ್ಯ ನಿರ್ವಹಿಸುತ್ತಿದೆ. ಸರ್ಕಾರವು ಪೊಲೀಸ್ ಇಲಾಖೆಗೆ ಸಕಲ ಸೌಲತ್ತಿನೊಂದಿಗೆ ಗೌರವಿಸಲಿಯೆಂದು ನಮ್ಮ ತಾವರಗೇರಾ ನ್ಯೂಸ್ ಪತ್ರಿಕೆ ಬಳಗ ಹಾಗೂ ತಾವರಗೇರಾ ನ್ಯೂಸ್ ವೆಬ್ ಪೋರ್ಟಲ್ ಬಳಗದವತಿಯಿಂದ ಆಶಯ.

ವರದಿ – ಸಂಪಾದಕೀಯ

Leave a Reply

Your email address will not be published. Required fields are marked *