ತಾವರಗೇರಾ ಪಟ್ಟಣದಲ್ಲಿ ಕಡು/ಬಡ ಹಾಗೂ ನಿರ್ಗತಿಕರಿಗೆ ಆಹಾರದ ಕಿಟ್ ನೀಡಿದ ಜನಪ್ರಿಯ ಶಾಸಕರಾದ ಶ್ರೀ ಮಾನ್ಯ ಅಮರೆಗೌಡ ಪಾಟೀಲ ಬಯ್ಯಾಪುರ.

Spread the love

ತಾವರಗೇರಾ ಪಟ್ಟಣದಲ್ಲಿ ಬಡ/ನಿರ್ಗತಿಕರಿಗೆ ಆಹಾರದ ಕಿಟ್ ನೀಡಿದ ಜನಪ್ರಿಯ ಶಾಸಕರಾದ ಶ್ರೀ ಮಾನ್ಯ ಅಮರೆಗೌಡ ಪಾಟೀಲ ಬಯ್ಯಾಪುರ.

ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲ್ಲೂಕಿನ ತಾವರಗೇರಾ ಪಟ್ಟಣದಲ್ಲಿ ಶ್ರೀ ಪಂಪಾ ಪೇಟ್ರೋಲಿಯಂ (ಬಂಕ್) ನಲ್ಲಿ ಇಂದು ಕೋರೋನಾ ರೋಗದ ವಿರುದ್ಧ  ತಾವರಗೇರಾ ಪಟ್ಟಣದ ಕಡು/ಬಡವರಿಗೆ, ನಿರ್ಗತೀಕರಿಗೆ ಸುಮಾರು 400 ಆಹಾರ ಕೀಟ್ ವಿತರಣೆಗೆ ಮುಂದಾದ ಜನಪ್ರೀಯಾ ಶಾಸಕರಾದ ಶ್ರೀ ಅಮಾರೇಗೌಡ ಬಯ್ಯಾಪೂರ ಇವರ ನೇತೃತ್ವದಲ್ಲಿ ಇಂದು ಶ್ರೀ ಪಂಪಾ ಪೇಟ್ರೋಲಿಯಂ (ಬಂಕ್) ನಲ್ಲಿ ಇಂದು ಆಹಾರದ ಕೀಟ್ ವಿತರಣೆಯ ಸಂದರ್ಭದಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಪಂಚಾಯತಿಯ ಮಾಜಿ ಅಧ್ಯಕ್ಷರಾದ ವಿಕ್ರಮ್ ರಾಯಕರ ರವರು ಈ ಕೋರೋನಾ ಮಹಾಮಾರಿ ರೋಗದ ಮೋದಲನೇಯ ಅಲೇ ಹಾಗೂ ಎರಡನೇಯ ಅಲೇಗೆ ಕಡ/ಬಡವರು, ನಿರ್ಗತೀಕರ ಜೀವನ ಕಷ್ಠಕರವಾಗಿದ್ದು, ಈ ಮಾಹಾಮಾರಿ ಕೊರೋನಾ ರೋಗದ ಹಾವಳಿ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಹರಡುತ್ತಿದೆ. ಆದಕಾರಣ ಇದನ್ನು ತಡೆಗಟ್ಟಲು ಸರಕಾರದ ಮಟ್ಟದಲ್ಲಿ ಅನೇಕ ಕಾರ್ಯಕ್ರಮಗಳು ಸೂಸುತ್ರವಾಗಿ ನಡೆಯುತ್ತಿವೆ. ಆದರೂ ಸಹ ಇದನ್ನು ತಹಬದಿಗೆ ತರುವ ಪ್ರಯತ್ನ ಕಷ್ಟಕರವಾಗುತ್ತಿದೆ. ಆದ್ದರಿಂದ ಸಾರ್ವಜನಿಕರು ಹೆಚ್ಚೆತ್ತು ಕೊಂಡು ಪ್ರತಿಯೊಬ್ಬರು ಮಾಸ್ಕ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಕೊಳ್ಳಬೇಕು, ಯುವಕರು ಅನಾವಶ್ಯಕವಾಗಿ ರಸ್ತೆಗೆ ಇಳಿಯಬೇಡಿ, ನಮ್ಮೇಲ್ಲರ ರಕ್ಷಣೆಗಾಗಿ ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ, ಪಟ್ಟಣ ಪಂಚಾಯತಿಯವರು, ನಾಡ ಕಚೇರಿಯವರು ಮತ್ತು  ಗೃಹ ರಕ್ಷಕ ಧಳದವರು ಜೊತೆಗೆ ಜನರ ಮದ್ಯ ಇದ್ದು ವರದಿ ಬಿಸ್ತಾರ ಮಾಡುವ ವರದಿಗಾರರು ಹಗಲಿರುಳು ಎನ್ನದೇ ಶ್ರಮಿಸುತ್ತಿದ್ದಾರೆ ಇವರ ಜೊತೆಗೂಡಿ ನಾವು/ನಿವೇಲ್ಲರು ಕೈ ಜೋಡಿಸಿ ಈ ಕೊರೊನಾದ ವಿರುದ್ದ ಹೋರಾಟ ಮಾಡಿ ಗೆಲ್ಲಬೇಕು ಎಂದರು ಜೊತೆಗೆ ಪಂಟಣ ಪಂಚಾಯತಿಯ ಮುಖ್ಯಾಧಿಕಾರಿಗಳಾದ ಶಂಕರ್ ಕಾಳೆಯವರು ಮಾತನಾಡಿ ಯಾರು ಈ ರೋಗ ಬಂದಿದೆ ಎಂದು ಆತಂಕ ಪಟ್ಟು  ದೃತಿಗೆಡದೆ ಧೈರ್ಯದಿಂದ ಸರ್ಕಾರದ ಆರೋಗ್ಯ ಇಲಾಖೆಯ ನಿಯಮದಂತೆ ಎಲ್ಲರೂ ಪಾಲನೆ ಮಾಡಬೇಕು ಎಂದು ಜೊತೆಗೆ ಅಮರೇಶ ಗಾಂಜಿಯವರು ಸಾರ್ವಜನಿಕರಿಗೆ ಪ್ರತಿಯೊಬ್ಬರು vaccine ಹಾಕಿಸಿಕೊಳ್ಳಿ ಜೊತೆಗೆ ನಿಮ್ಮವರನ್ನು vaccine ತೆಗೆದುಕೊಳ್ಳುವಂತೆ ಜನರಿಗೆ ಪ್ರೇರೇಪಿಸುವ ಕೆಲಸ ಮಾಡುವಂತೆ ಕಾರ್ಯಕರ್ತರಿಗೆ ತಿಳಿಸಿದರು. ಹೀಗಾದಾಗ ಮಾತ್ರ ಕೊರೋನಾ ಜಾಗೃತಿ ಅಭಿಯಾನ ಸೂಸುತ್ರವಾಗಿ ಸಾಗುವುದರಲ್ಲಿ ಸಂಶಯವಿರುವುದಿಲ್ಲ ಎಂದರು. ತದನಂತರ ಶ್ರೀ ಬಸವನಗೌಡ ಮಾಲಿ ಪಾಟೀಲ್ ಉದ್ಯೂಮಿ ಹಾಗೂ ಕಾಂಗ್ರೆಸ್ ಮುಖಂಡರ ಹುಟ್ಟು ಹಬ್ಬದ ಅಂಗವಾಗಿ ಆಟೋ ಚಾಲಕರಿಗೆ ಆಹಾರ ಕಿಟ್ ವಿತರಣೆ ಮಾಡಿದರು.  ಶ್ರೀ ಬಸವನಗೌಡ ಮಾಲಿ ಪಾಟೀಲ್ ಉದ್ಯೂಮಿ ಅವರು ಮಾತನಾಡಿ  ಈ ರೋಗವು ಭಯಾನಕವಾಗಿದೆ ಎಂದು ಯಾರು ಸಹ ಭಯ ಪಡದೇ ನೀಮ್ಮ ಆತ್ಮ ವಿಶ್ವಾಸ ಕಳೇದುಕೊಳ್ಳಬೇಡಿ. ಅತಿ ಸೂಕ್ಷ್ಮವಾಗಿ ಜಾಗೃತರಾಗಿ  ಪ್ರತಿಯೊಬ್ಬರು ಮಾಸ್ಕ ಧರಿಸಿ, ಸಾಮಾಜಿಕ ಅಂತರ ಕಾಪಾಡಿಕೊಂಡು ಜೀವನ ನೆಡಸಬೇಕಾಗಿದೆ  ಹಾಗಾಗಿ ಪ್ರತಿಯೊಬ್ಬರು ಜಾಗೃತರಾಗಿರಿ ಎಂದರು. ಈ ಸಂಧರ್ಭದಲ್ಲಿ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಶಂಕರ್ ಕಾಳೆಯವರು ಹಾಗೂ ಪ.ಪಂ.ಯ ಮಾಜಿ ಅಧ್ಯಕ್ಷರಾದ ವಿಕ್ರಾಮ್ ರಾಯಕರ ರವರು ಮತ್ತು ಆರೋಗ್ಯ ಅಧಿಕಾರಿಯಾದ ಪ್ರಾಣೇಶ ಬಳ್ಳಾರಿಯವರು.ಮಾಜಿ ತಾ.ಪಂ.ಸದಸ್ಯರಾದ ದುರಗೇಶ ನಾರಿನಾಳ. ನಾಗರಾಜ ನಂದಾಪೂರ. ಎಂ.ಡಿ.ಬಾಬುರವರು. ಅಮರೇಶ ಗಾಂಜಿ, ರಾಮಣ್ಣ ಭೋವಿ ಹಾಗೂ ಊರಿನ ಗಣ್ಯರು ಪಾಲುಗೊಂಡಿದ್ದರು. ಒಟ್ಟಿನಲ್ಲಿ ಈ ಬಡ/ಹಾಗೂ ನೀರ್ಗತಿಕ ಕುಟುಂಬದವರಾದ ಅಟೋ ಚಾಲಕರು. ಕ್ಷೌರಿಕರು. ಗೃಹ ರಕ್ಷಕ ಧಳದವರು. ಮುನ್ಸಿಪಾರ್ಟಿ ಪೌರ ಕಾರ್ಮಿಕರು. ಜೊತೆಗೆ ಕಡು/ಬಡವರಿಗೆ ಸುಮಾರು 400 ಆಹಾರ ಕೀಟ್ ವಿತರಣೆ ಮಾಡುವ ಮೂಲಕ ಕೊಪ್ಪಳ ಜಿಲ್ಲೆಯೆ ಮೆಚ್ಚುವಂತೆ ಈ ಕೊರೊನಾ ಸಂದರ್ಭದಲ್ಲಿ ಕ್ಷೇತ್ರದ ಜನತೆಗಾಗಿ ಶ್ರಮಿಸುತ್ತಿರುವ ದಕ್ಷ, ಪ್ರಾಮಾಣಿಕ ಹಾಗೂ ಅಭಿವೃದ್ಧಿಗೆ ಪೂರಕವಾದ ಆಡಳಿತ ನಡೆಸುತ್ತಿರುವ ಹೆಮ್ಮೆಯ ಶ್ರೀ ಅಮಾರೇಗೌಡ ಎಲ್.ಪಾಟೀಲ್ ಶಾಸಕರು ಕುಷ್ಠಗಿ ಇವರ ಈ ಜನರ ಸೇವೆ ಸದಾ ಹೀಗೆ ಮುಂದುವರಿಯಲೆಂದು ತಾವರಗೇರಾ ನ್ಯೂಸ್ ಪತ್ರಿಕೆ ಹಾಗೂ ವೆಬ್ ಬಳಗದವತಿಯಿಂದ ಆರೈಸುತ್ತಿದ್ದೆವೆ.

  ವರದಿ – ಮಂಜುನಾಥ ಎಸ್.ಕೆ.

Leave a Reply

Your email address will not be published. Required fields are marked *