ಹಳ್ಳಿಯಿಂದ ದಿನಸಿ ಖರೀದಿಗೆ ಬಂದ ಕೆಲವು ಸಾರ್ವಜನಿಕರಿಗೆ ಬಿಸಿ ಮುಟ್ಟಿಸಿದ ತಾವರಗೇರಾ ಠಾಣೆಯ ಎ ಎಸ್ ಐ ಮಲ್ಲಪ್ಪ ವಜ್ರದ

Spread the love

ಹಳ್ಳಿಯಿಂದ ದಿನಸಿ ಖರೀದಿಗೆ ಬಂದ ಕೆಲವು ಸಾರ್ವಜನಿಕರಿಗೆ ಬಿಸಿ ಮುಟ್ಟಿಸಿದ ತಾವರಗೇರಾ ಠಾಣೆಯ ಎ ಎಸ್ ಐ ಮಲ್ಲಪ್ಪ ವಜ್ರದ

ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ತಾವರಗೇರಾ ಪಟ್ಟಣದ ಪೊಲೀಸ್ ಠಾಣೆಯ ಜವಬ್ದಾರಿಯುತ ಅಧಿಕಾರಿಗಳಲ್ಲಿ ಇವರು ಒಬ್ಬ ಪ್ರಾಮಾಣಿಕ ಅಧಿಕಾರಿ ಅಂದರೆ ತಪ್ಪಾಗಲಾರದು, ಧಕ್ಷ ಹಾಗೂ ನಿಷ್ಠೆಯಿಂದ ಕಾರ್ಯನಿರ್ವಹಿಸಿ, ತಾವರಗೇರಾ ಪಟ್ಟಣದ ಸಾರ್ವಜನಿಕರಿಗೂ ಹಾಗೂ ಸುತ್ತ / ಮುತ್ತಲಿನ ಗ್ರಾಮಗಳ ಜನತೆಯ ಮನದಲ್ಲಿ ಅಚ್ಚಳಿಯದೆ ಉಳಿದ ಅಧಿಕಾರಿ ಇವರೇ ಮಲ್ಲಪ್ಪ ವಜ್ರದ್. ಹಲವು ವರ್ಷಗಳಿಂದ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತ ಬಂದಿದ್ದು. ಈ ಮಹಾಮಾರಿ ಕೊರೊನಾದ ಸಂದರ್ಭದಲ್ಲಿ ತಮ್ಮ ಕುಟುಂಬವನ್ನೆ ಲೆಕ್ಕಿಸದೆ ಹಗಲಿರುಳು ಎನ್ನದೇ ಶ್ರಮಿಸುವ ವ್ಯಕ್ತಿ ಇವರು.

ತಾವರಗೇರಾ ಪಟ್ಟಣಕ್ಕೆ ಬೆಳಗಿನ ಜಾವ್  ಹಳ್ಳಿ/ಹಳ್ಳಿಗಳಿಂದ ದಿನಸಿ ಖರೀದಿಗೆ ಅವಕಾಶ ಇದೆ ಎಂದು ಬಂದ ಸಾರ್ವಜನಿಕರಿಗೆ ಈ ಕೊರೊನಾದ ವಿರುದ್ದ ಎಚ್ಚರಿಕೆಯಿಂದ ಇರಬೇಕು. ಇಲ್ಲವಾದಲ್ಲಿ ಕಠೀಣ ಕ್ರಮ ತಗೇದುಕೊಳ್ಳಲಾಗುವುದೆಂದು ಬಿಸಿ ಮುಟ್ಟಿಸಿದ ಎ ಎಸ್ ಐ ಮಲ್ಲಪ್ಪ ವಜ್ರದರವರು. ಅನಾವಶ್ಯಕವಾಗಿ ಬೈಕಲ್ಲಿ ಅಲೆದಾಡುವವರಿಗೆ ಬಿಸಿ ಮುಟ್ಟಿಸುವುದರ ಜೊತೆಗೆ ದಂಢ ವಿಧಿಸಿ ಕಳುಹಿಸಿದರು. ಮಾಸ್ಕ್ ಇಲ್ಲದೆ ರಸ್ತೆಗಿಳಿದವರಿಗೆ ಹಾಗೂ ವಾಹನ ಸವಾರರಿಗೆ ದಂಡ ಹಾಕುವ ಮೂಲಕ ಜಾಗೃತಿ ಮೂಡಿದರು. ಬೈಕ್ ಸವಾರರು ಮಾಸ್ಕ್ ಇಲ್ಲದೆ ಬರುವವರನ್ನು ತಡೆದು ದಂಡ ವಿಧಿಸಿ, ರಶೀದಿ ನೀಡಿ ಹಣ ಪಡೆಯುತ್ತಿದ್ದರು. ಕೆಲವರು ಮಾಸ್ಕ್‌ ಅನ್ನು ಬೇಜವಬ್ದಾರಿಯಿಂದ ಬೈಕ್‌ನೊಳಗೆ ಇಟ್ಟ ಕಾರಣ ಪೊಲೀಸರಿಗೆ ದಂಡ ಕಟ್ಟಿದರು.  ಒಟ್ಟಿನಲ್ಲಿ ಇಂದು ದಿನಸಿ ವಸ್ತುಗಳಿಗೆ ಕೆಲ ಸಮಯ ಅವಕಾಶವಿದೆ ಎಂದು ತಾವರಗೇರಾ ಪಟ್ಟಣಕ್ಕೆ ಬಂದ ಜನತೆಗೆ ಶಾಕ್ ಆಯಿತು. ಸರ್ಕಾರ ನೀಡಿರುವ ಆದೇಶಕ್ಕೆ ನಾವೆಲ್ಲ ತೆಲೆ ಭಾಗಲೆ ಬೇಕು. ಹಾಗಾಗಿ ಪ್ರತಿಯೊಬ್ಬರು ಸರ್ಕಾರದ ನಿಯಮವನ್ನು ಪಾಲಿಸಬೇಕು ಎಂದರು.  ಪಟ್ಟಣದ ಬಸವೇಶ್ವರ ಸರ್ಕಲ್ ನಲ್ಲಿ ಸೇವೆ ಸಲ್ಲಿಸುತ್ತಿದ್ದ ಎ ಎಸ್ ಐ ಮಲ್ಲಪ್ಪ ವಜ್ರದ. ಹಾಗೂ ಪೊಲಿಸ್ ಇಲಾಖೆಯ ಸಿಬ್ಬಂದಿಗಳು ಜೊತೆಗೆ ಪಟ್ಟಣ ಪಂಚಾಯತಿಯ ಆರೋಗ್ಯ ಅಧಿಕಾರಿಯಾದ ಪ್ರಾಣೇಶಿ ಬಳ್ಳಾರಿ ಹಾಗೂ ಗೃಹ ರಕ್ಷಕಧಳದವರು. ಒಟ್ಟಿನಲ್ಲಿ ಈ ಎಲ್ಲಾ ಅಧಿಕಾರಿಗಳ ಸೇವೆಯು ಇವರು ಬೆಳಗಿನ ಜಾವ್ ದಿಂದ ಇಡಿದು ರಾತ್ರಿಯವರೆಗೂ ಸೇವೆಸಲ್ಲಿಸುವ  ಈ ಅಧಿಕಾರಿಗಳಿಗೊಂದು ಸಲಾಂ, ನಮ್ಮ ತಾವರಗೇರಾ ನ್ಯೂಸ್ ಪತ್ರಿಕೆ ಬಳಗ ಹಾಗೂ ತಾವರಗೇರಾ ನ್ಯೂಸ್ ವೆಬ್ ಬಳಗದವತಿಯಿಂದ ಅಭಿನಂದಿಸುತ್ತೇವೆ. ತಾವರಗೇರಾ ಠಾಣೆಯ ಎ.ಎಸ್.ಐ. ಆದ ಶ್ರೀ ಮಲ್ಲಪ್ಪ ವಜ್ರದ ಇವರ ಬಗ್ಗೆ ತಾವರಗೇರಾ ನ್ಯೂಸ್ ವೆಬ್ ನಲ್ಲಿ ಇನ್ನೂ ಕೆಲವೇ ದಿನಗಳಲ್ಲಿ ವಿಶೇಷ ವರದಿ ಮೂಡಿ ಬರುತ್ತಿದೆ.

  ವರದಿ – ಜಂಟಿಯಾಗಿ  

 ಸಂಪಾದಕೀಯ          ಹಾಗೂ         ಉಪ-ಸಂಪಾದಕೀಯ

Leave a Reply

Your email address will not be published. Required fields are marked *