ಜನರ ಸಂಕಷ್ಟಕ್ಕೆ ಸೋನು ಸೂದ್​ ನೆರವು: ಹುಬ್ಬಳ್ಳಿಯಲ್ಲಿ ಆಕ್ಸಿಜನ್ ಸೆಂಟರ್ ಓಪನ್​.

Spread the love

ಜನರ ಸಂಕಷ್ಟಕ್ಕೆ ಸೋನು ಸೂದ್ನೆರವು: ಹುಬ್ಬಳ್ಳಿಯಲ್ಲಿ ಆಕ್ಸಿಜನ್ ಸೆಂಟರ್ ಓಪನ್​.

ಹುಬ್ಬಳ್ಳಿ:ಇವರು ತೆರೆ ಮೇಲೆ ವಿಲನ್.. ನಿಜ ಜೀವನದಲ್ಲಿ ಪಕ್ಕಾ ರಿಯಲ್ ಹೀರೋ.. ಅವರು ಬೇರೆ ಯಾರೂ ಅಲ್ಲ. ಬಾಲಿವುಡ್ ಆಯಕ್ಟರ್ ಸೋನು ಸೂದ್. ಇವರ ಅಂತಃಕರಣವನ್ನ ವಿಶ್ವಸಂಸ್ಥೆಯೇ ಮನಮೆಚ್ಚಿ ಶ್ಲಾಘಿಸಿದೆ. ಕೋಟ್ಯಂತರ ಭಾರತೀಯರು ಹಾರೈಸಿದ್ದಾರೆ. ಮಾನವ ಸಂಕುಲ ಸಂಕಟಕ್ಕೆ ಬಿದ್ದಾಗ ನೆರವಿಗೆ ಧಾವಿಸಿ, ಕೈಹಿಡಿದಿದ್ದಾರೆ. ಎಷ್ಟೋ ಜೀವಗಳನ್ನ ಉಳಿಸಿದ್ದಾರೆ. ಇದೀಗ ಹುಬ್ಬಳ್ಳಿಯಲ್ಲೂ ಆಕ್ಸಿಜನ್ ಸೆಂಟರ್ ನಿರ್ಮಿಸಿದ್ದಾರೆ. ರಾಜ್ಯ ರೈಲ್ವೆ ಎಡಿಜಿಪಿ ಭಾಸ್ಕರ್ ರಾವ್ ಆಸಕ್ತಿ ಹಿನ್ನಲೆಯಲ್ಲಿ ಸೋನು ಉತ್ತರ ಕರ್ನಾಟಕದ ಜನರಿಗೆ ಪ್ರಾಣವಾಯು ಒದಗಿಸೋಕೆ ಮುಂದಾಗಿದ್ದಾರೆ. ಅದಕ್ಕಾಗಿ ಹುಬ್ಬಳ್ಳಿ ರೈಲ್ವೆ ಪೊಲೀಸ್ ಠಾಣೆ ಆವರಣದಲ್ಲಿ ಆಕ್ಸಿಜನ್ ಸೆಂಟರ್ ಓಪನ್ ಮಾಡಿದ್ದಾರೆ. ಬೆಂಗಳೂರಿನ ಸ್ವ್ಯಾಗ್ ಸಂಸ್ಥೆಯ ಸಹಯೋಗದೊಂದಿಗೆ ಈ ಸೆಂಟರ್ ಓಪನ್ ಆಗಿದ್ದು, ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳ ಜನರಿಗೆ ಇದರ ನೆರವು ಸಿಗಲಿದೆ. ಆಕ್ಸಿಜನ್ ಅವಶ್ಯಕತೆ ಇದ್ದವರು ಒಂದು ಪೋನ್ ಕಾಲ್ ಮಾಡಿದ್ರೆ ಸಾಕು ತಕ್ಷಣ ಒದಗಿಸೋ ಕೆಲಸ ರೈಲ್ವೆ ಪೊಲೀಸರು ಹಾಗೂ ಸಂಸ್ಥೆ ಮಾಡಲಿದೆ. ಮೊದಲ ಹಂತವಾಗಿ 25 ಜಂಬೋ ಸಿಲಿಂಡರ್ ನೀಡಿರೋ ಸೋನು ಸೂದ್, ಬೇಡಿಕೆಗೆ ತಕ್ಕಂತೆ ಪ್ರಾಣವಾಯು ಪೂರೈಸಲು ಸಿದ್ಧವಾಗಿದ್ದಾರೆ. ಯಾರೂ ಕೂಡ ಆಕ್ಸಿಜನ್ ಇಲ್ಲದೆ ಪ್ರಾಣ ಕಳೆದುಕೊಳ್ಳಬಾರದು ಎನ್ನುವ ಉದ್ದೇಶ ಸೋನು ಸೂದ್ ಚಾರಿಟಿ ಫೌಂಡೇಶನ್‌ನದ್ದು. ರೈಲ್ವೆ ಪೊಲೀಸರು ಈ ಪೌಂಡೇಶನ್‌ಗೆ ಸಾಥ್ ನೀಡಿದ್ದಾರೆ. ಯಾರಿಗೆ ಆಕ್ಸಿಜನ್ ಅವಶ್ಯಕತೆ ಇದೆಯೋ ಅಂತವರು ಇಲ್ಲಿಗೆ ಬರಬಹುದು. ಅಥವಾ ಚಾರಿಟಿ ನೀಡಿರೋ ಹೆಲ್ಪ್‌ಲೈನ್‌ಗೆ ಕಾಲ್ ಮಾಡಿದ್ರೂ ಸಾಕು ಪೊಲೀಸರ ನೆರವನೊಂದಿಗೆ ಸಪ್ಲೈ ಮಾಡಲಾಗುತ್ತದೆ. ಕೋವಿಡ್ ಬಂದಾಗ ಜನರಿಗೆ ನಿಜ ದೇವರಂತೆ ಎದುರಿಗೆ ಬರುವ ಸೋನು ಜನರ ಕಷ್ಟಕ್ಕೆ ಸ್ಪಂದಿಸುವ ಮೊದಲ ವ್ಯಕ್ತಿಯಾಗಿದ್ದಾರೆ. ಸರ್ಕಾರ ಮಾಡದ ಹಲವಾರು ಕಾರ್ಯಗಳನ್ನ ವೈಯಕ್ತಿಕವಾಗಿ ಮಾಡುವ ಮೂಲಕ ಜನರ ಕಷ್ಟಕ್ಕೆ ಸ್ಪಂದಿಸುತ್ತಿರೋದು ನಿಜಕ್ಕೂ ಗ್ರೇಟ್.

ವರದಿ – ಮಂಜುನಾಥ ಎಸ್,ಕೆ.

Leave a Reply

Your email address will not be published. Required fields are marked *