ಮಂಗಳಮುಖಿ ರಾಜಮ್ಮಗೆ ಕೆಎಸ್ಪಿಸಿಎ ಸದಸ್ಯ ಮೋಹನ್ ಕುಮಾರ್ ದಾನಪ್ಪರಿಂದ ಸನ್ಮಾನ!
ಕಂಪ್ಲಿ: 12, ಬಳ್ಳಾರಿ ಜಿಲ್ಲೆಯ ಕಂಪ್ಲಿ ತಾಲೂಕಿನ ಸುಗ್ಗೇನಹಳ್ಳಿ ಗ್ರಾಮದ ನಿವಾಸಿ ಮಂಗಳ ಮುಖಿ ಪಿ.ರಾಜಮ್ಮರವರು ಭೀಕ್ಷೆ ಬೇಡಿದ ಉಳಿತಾಯದ ಹಣದಲ್ಲಿ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಸಮವಸ್ತ್ರ, ಟಿ-ಶರ್ಟ್, ಪ್ಯಾಂಟ್, ಬಟ್ಟೆಗಳನ್ನು ಕೊಡುಗೆಯಾಗಿ ನೀಡಿದ ಪರೋಪಕಾರಿ ಕಾರ್ಯವನ್ನು ಗುರುತಿಸಿ ಕರ್ನಾಟಕ ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರ ಸದಸ್ಯರಾದ ಮೋಹನ್ ಕುಮಾರ್ ದಾನಪ್ಪನವರು ಸನ್ಮಾನಿಸಿ ಅಭಿನಂದಿಸಿದ್ದಾರೆ ಅಭಿನಂದನಾ ಪತ್ರದಲ್ಲಿ ಪಿ. ರಾಜಮ್ಮನವರೇ, ಬಳ್ಳಾರಿ ಜಿಲ್ಲೆಯ ಕಂಪ್ಲಿ ತಾಲೂಕಿನ ಸುಗ್ಗೇನಹಳ್ಳಿ ಗ್ರಾಮದ ನಿವಾಸಿಯಾದ ತಾವು ಲಿಂಗತ್ವ ಅಲ್ಪಸಂಖ್ಯಾತರಾಗಿದ್ದು (ಮಂಗಳ ಮುಖಿ) ಜೀವನ ಸಾಗಿಸಲು ಭೀಕ್ಷಾಟನೆಯಲ್ಲಿ ತೊಡಗಿದ್ದು ಭೀಕ್ಷೆ ಬೇಡಿದ ಉಳಿತಾಯದ ಹಣದಲ್ಲಿ ಸಾಮಾಜಿಕ ಕಾರ್ಯ ಮಾಡುವ ಉದ್ದೇಶದಿಂದ ಪ್ರಸ್ತುತ ಸಾಲಿನಲ್ಲಿ ಬಳ್ಳಾರಿ ಜಿಲ್ಲೆಯ ಸುಗ್ಗೇನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಶಾರದಾ ನಗರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗಳ ಓಟ್ಟು 150 ಮಕ್ಕಳಿಗೆ 60 ಸಾವಿರ ರೂಪಾಯಿ ಮೌಲ್ಯದ ಸಮವಸ್ತ್ರ, ಟಿ-ಶರ್ಟ್, ಪ್ಯಾಂಟ್‌ಗಳನ್ನು ಮತ್ತು 2023ನೇ ಸಾಲಿನಲ್ಲಿ ಸದರಿ ಸುಗ್ಗೇನಹಳ್ಳಿ ಗ್ರಾಮದ ಸರ್ಕಾರಿ ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೆ 20 ಸಾವಿರ ರೂಪಾಯಿಗಳ ಮೌಲ್ಯದ ಬಟ್ಟೆಗಳನ್ನು ಕೊಡುಗೆಯಾಗಿ ನೀಡಿ ತಮ್ಮ ಹೃದಯ ಶ್ರೀಮಂತಿಕೆಯನ್ನು ಮೇರೆದಿರುತ್ತೀರಿ,
ಪ್ರಸ್ತುತದ ದಿನಮಾನಗಳಲ್ಲಿ ತಮ್ಮ ತಮ್ಮ ವೈಯಕ್ತಿಕ ಹಿತಾಸಕ್ತಿಗೆ ಬದುಕುತ್ತಿರುವ ಜನಗಳ ಮಧ್ಯೆ ಲಿಂಗತ್ವ ಅಲ್ಪಸಂಖ್ಯಾತರಾದ ತಾವು ತಮ್ಮ ಬಾಲ್ಯದ ಜೀವನದಲ್ಲಿದ್ದ ಬಡತನದ ಕಾರಣದಿಂದ ಶಾಲೆಗೆ ಹೋಗಿ ವಿದ್ಯೆ ಕಲಿಯಲು ಆಸಾಧ್ಯವಾಯಿತು ಎಂಬುವ ಕಾರಣದಿಂದ ಸರ್ಕಾರಿ ಶಾಲೆಯಲ್ಲಿ ಓದುವ ಮಕ್ಕಳಾದರೂ ಉತ್ತಮ ವಿದ್ಯಾಭ್ಯಾಸ ಮಾಡಬೇಕು, ಅಂದ ಚಂದವಾಗಿ ಕಾಣಬೇಕೆನ್ನುವ ಹಿತಾದೃಷ್ಟಿಯಿಂದ ತಮ್ಮ ಭೀಕ್ಷಾಟನೆಯಿಂದ ಬಂದ ಹಣದಲ್ಲಿ ಒಂದಿಷ್ಟೂ ಹಣವನ್ನು ಉಳಿತಾಯ ಮಾಡಿ ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವು ನೀಡುತ್ತಿರುವ ತಮ್ಮ ಪರೋಪಕಾರಿ ಕಾರ್ಯವು ತೃತೀಯ ಲಿಂಗಿಗಳನ್ನು ಅಸಹ್ಯವಾಗಿ ನೋಡುತ್ತಿದ್ದ ವರ್ಗವನ್ನೆ ನಾಚಿಸುವಂಥ ಕಾರ್ಯ ನೇರೆವೆರಿಸಿ ತಮ್ಮ ಮಂಗಳಮುಖಿ ಸಮುದಾಯ ಸೇರಿದಂತೆ ರಾಜ್ಯಕ್ಕೆ ಮಾದರಿಯಾಗಿರುವುದು ಶ್ಲಾಘನೀಯ, ತಮ್ಮಂತ ವಿಶಿಷ್ಟ ವ್ಯಕ್ತಿ ನನ್ನ ಮೂಲ ಬಳ್ಳಾರಿ ಜಿಲ್ಲೆಯ ಕಂಪ್ಲಿ ತಾಲೂಕಿನವರೆಂದು ಹೇಳಲು ಗರ್ವಪಡುತ್ತೇನೆ.
ಈ ಸಂದರ್ಭದಲ್ಲಿ ಸರ್ಕಾರಿ ಶಾಲೆ ಮತ್ತು ಮಕ್ಕಳ ಮೇಲಿರುವ ತಮ್ಮ ಪ್ರೀತಿ, ತಮ್ಮ ಸೇವಾ ಮನೋಭಾವನೆ, ಪರೋಪಕಾರಿ ಗುಣವನ್ನು ಮತ್ತು ಸಮಾಜಮುಖಿ ಕಾರ್ಯಗಳನ್ನು ಅಭಿನಂದಿಸುತ್ತಾ ತಮಗೆ ಆಯುಷ್ಯ, ಆರೋಗ್ಯ ವೃದ್ಧಿಯಾಗಲೆಂದು ಮೋಹನ್ ಕುಮಾರ್ ದಾನಪ್ಪನವರು ಹಾರೈಸಿದ್ದಾರೆ,