ಹೋರಾಟದ ಪರಿಣಾಮದಿಂದ ಕಟ್ಟಡ ಕಾರ್ಮಿಕರ ಮಂಡಳಿ ರಚನೆಯಾಗಿದೆ – ಬಸವರಾಜ್ ಶೀಲವಂತರ್.
ಕೊಪ್ಪಳ : ಕಟ್ಟಡ ಕಾರ್ಮಿಕರ ಸಂಘಟನೆಗಳ ಹೋರಾಟದ ಪರಿಣಾಮದಿಂದಾಗಿ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ರಚನೆಯಾಗಿದೆ ಎಂದು ಪ್ರಗತಿಪರ ಸಂಘಟನೆಗಳ ಒಕ್ಕೂಟದ ಸಂಚಾಲಕ ಬಸವರಾಜ್ ಶೀಲುವಂತ ಹೇಳಿದರು. ನಗರದ ಮರ್ದಾನ್ – ಎ – ಗೈಬ್ ದರ್ಗಾದ ಆವರಣದಲ್ಲಿ ನಡೆದ ಕೊಪ್ಪಳ ತಾಲೂಕಾ ಕಟ್ಟಡ ನಿರ್ಮಾಣ ಕಾರ್ಮಿಕರ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಭಾಗವಹಿಸಿದ್ದ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಸಂಚಾಲಕ ಬಸವರಾಜ್ ಶೀಲವಂತರ್ ಮುಂದುವರೆದು ಮಾತನಾಡಿ ಕಟ್ಟಡ ಕಾರ್ಮಿಕರ ಒಳಿತಿಗಾಗಿ ಮೀಸಲಿರಿಸಿದ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯ ಹಣವನ್ನು ಈಗಿನ ಕಾರ್ಮಿಕ ಸಚಿವ ಸಂತೋಷ್ ಎಸ್.ಲಾಡ್ ಅವರು ವಿವಿಧ ಕಿಟ್ ಗಳನ್ನು ಹಂಚುವ ನೆಪದಲ್ಲಿ ಟೆಂಡರ್ ಕರೆದು ಸಾವಿರಾರು ಕೋಟಿ ರೂಪಾಯಿಗಳನ್ನು ಲೂಟಿ ಮಾಡುತ್ತಿದ್ದಾರೆ.ಸಚಿವರ ಕಾರ್ಮಿಕ ವಿರೋಧಿ ನೀತಿಗಳನ್ನು ವಿರೋಧಿಸಿ ಸಂಘಟನೆಯು ಹೋರಾಟವನ್ನು ರೂಸಿಸಬೇಕು ಜೋತೆಗೆ ಕಲ್ಯಾಣ ಮಂಡಳಿಯ ಹಣವು ಕಟ್ಟಡ ಕಾರ್ಮಿಕರು.ಅವರ ಮಕ್ಕಳು ಮತ್ತು ಮಹಿಳೆಯರ ಒಳಿತಿಗಾಗಿ ಬಳಕೆಯಾಗುವಂತೆ ಎಚ್ಚರ ವಹಿಸಬೇಕಾಗಿದೆ.ಕೇಂದ್ರ ಹಾಗೂ ರಾಜ್ಯ ಸರ್ಕಾರ ಇವು ಬಹುರಾಷ್ಟ್ರೀಯ ಕಂಪನಿಗಳ ಪರವಾಗಿ ಕಾರ್ಯಕ್ರಮಗಳನ್ನು ರೂಪಿಸುತ್ತಿರುವುದರಿಂದ ಕಟ್ಟಡ ಕಾರ್ಮಿಕರ ಜೀವನ ಸುಧಾರಿಸಲು ಸಾಧ್ಯವಿಲ್ಲ.ಇದಕ್ಕೆ ಸಂಘಟಿತ ಐಕ್ಯ ಚಳುವಳಿಯನ್ನು ನಡೆಸುವುದು ಅನಿವಾರ್ಯವಾಗಿದೆ ಎಂದು ಹೇಳಿದರು.ಜನಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಎಸ್.ಎ.ಗಫಾರ್ ಮಾತನಾಡಿ ಯಾರೂ ಬೇಡಿಕೆ ಇಡದೇ ಇದ್ದರೂ ಸಹ ಈ ಹಿಂದಿನ ರಾಜ್ಯದ ಬಿಜೆಪಿ ಸರ್ಕಾರದಲ್ಲಿ ಕಟ್ಟಡ ಕಾರ್ಮಿಕರ ಆಯಾ ವೃತ್ತಿಗಳ ಉಪಕರಣಗಳ ಕಿಟ್ ಗಳನ್ನು ಹಂಚಿದ್ದನ್ನು ನಂತರ ಬಂದ ಕಾಂಗ್ರೆಸ್ ಸರ್ಕಾರದ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರನ್ನು ಕಿಟ್ ಗಳ ಹೆಸರಿನಲ್ಲಿ ನಡೆಯುವ ಭ್ರಷ್ಟಾಚಾರ ಕುರಿತು ಕಟ್ಟಡ ಕಾರ್ಮಿಕರ ಸಂಘಟನೆಯ ಮುಖಂಡರು ಮನವರಿಕೆ ಮಾಡಿದ್ದಾರೆ.ಆದರೂ ವಿವಿಧ ಕಿಟ್ ಗಳನ್ನು ಹಂಚುವುದನ್ನು ಮುಂದುವರಿಸಿರುವುದನ್ನು ನೋಡಿದರೆ ವ್ಯಾಪಕ ಭ್ರಷ್ಟಾಚಾರಕ್ಕೆ ಕುಮ್ಮಕ್ಕು ನೀಡಿದಂತಿದೆ.ನಗರದ ಕಟ್ಟಡ ಕಾರ್ಮಿಕರು ಸಾವಿರ ಸಾವಿರ ಸಂಖ್ಯೆಯಲ್ಲಿ ಬೀದಿ ಬೀದಿಗಳಿಂದ ರಸ್ತೆಗೆ ಇಳಿದು ಹೋರಾಟ ಮಾಡಿದರೆ ಮಂಡಳಿಯ ಹಣ ಉಳಿಸಲು ಮತ್ತು ಕಟ್ಟಡ ಕಾರ್ಮಿಕರು ಸೌಲಭ್ಯ ಪಡೆಯಲು ಸಾಧ್ಯ ಎಂದು ನುಡಿದರು.ಸಂಘದ ಪ್ರಧಾನ ಕಾರ್ಯದರ್ಶಿ ಹಝರತ್ ಅಲಿ ಮುಜಾವರ ಮಾತನಾಡಿ ನಮ್ಮ ಸಂಘಟನೆ ಕ್ರಮೇಣವಾಗಿ ನಿಷ್ಕ್ರಿಯಗೊಳ್ಳುತ್ತ ಸ್ಥಗಿತಗೊಂಡಿತ್ತು. ಕಟ್ಟಡ ಕಾರ್ಮಿಕರಿಗೆ ಕೇಳೋರಿಲ್ಲದಂತಾಗಿತ್ತು. ನಮ್ಮಲ್ಲಿ ತಿಳುವಳಿಕೆ ಇಲ್ಲದ್ದಕ್ಕೆ ಸಂಘಟನೆ ಆಗುತ್ತಿಲ್ಲ.ಸರಿಯಾದ ಮಾರ್ಗದರ್ಶನ ಇಲ್ಲ. ಇನ್ನೂ ಮುಂದೆ ಕೆಲವಷ್ಟು ಜನ ಪುನಃ ಸಂಘಟನೆ ಕಟ್ಟಲು ನಿಂತಿದ್ದಾರೆ.ನಾವೆಲ್ಲರೂ ಸೇರಿ ಕಟ್ಟಡ ಕಾರ್ಮಿಕರಿಗಾಗಿ ಹೋರಾಟ ಮಾಡಿ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಪಡೆಯೋಣ. ಕಟ್ಟಡ ಕಾರ್ಮಿಕರು ದೇಶದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ ಎಂದು ಹೇಳಿದರು. ಕೊಪ್ಪಳ ತಾಲೂಕಾ ಕಟ್ಟಡ ನಿರ್ಮಾಣ ಕಾರ್ಮಿಕರ ಸಂಘದ ನೂತನ ಅಧ್ಯಕ್ಷ ಶಾಬುದ್ದೀನ್ ಜವಳಗೇರಾ ಅಧ್ಯಕ್ಷತೆ ವಹಿಸಿ ಮಾತನಾಡಿ ಎಲ್ಲಾ ಕಟ್ಟಡ ಕಾರ್ಮಿಕರು ಮುಂದಿನ ದಿನಗಳಲ್ಲಿ ಸಹಕಾರ ನೀಡಿ ಎಲ್ಲರೂ ಕೂಡಿ ಒಳ್ಳೆ ಕೆಲಸ ಮಾಡೋಣ ಎಂದು ಹೇಳಿದರು. ವೇದಿಕೆ ಮೇಲೆ ಸಂಘದ ಉಪಾಧ್ಯಕ್ಷ ರಾಮಣ್ಣ ಬಾಣಕಾರ್ ಮೇಸ್ತ್ರಿ.ಖಜಾಂಚಿ ಸಿದ್ದಲಿಂಗಪ್ಪ ಪಲ್ಲೆದ್ ಮೇಸ್ತ್ರಿ.ಹಿರಿಯ ಸಲಹೆಗಾರ ಪಾಶಾ ಮುದಗಲ್ ಮೇಸ್ತ್ರಿ.ಹುಸೇನಪ್ಪ ಗುಡಿ ಮೇಸ್ತ್ರಿ. ಖಾಜಾಸಾಬ್ ಗೌರಿ ಅಂಗಳ ಮೇಸ್ತ್ರಿ. ಮುನ್ನ ಮೇಸ್ತ್ರಿ. ಹುಲಗಪ್ಪ ಸುಣಗಾರ ಮೇಸ್ತ್ರಿ. ಮುಸ್ತಫ ಹೂಗಾರ್ ಮೇಸ್ತ್ರಿ. ಮಾಬು ಮೇಸ್ತ್ರಿ. ಇಸ್ಮಾಯಿಲ್ ಕಂತರ್ ಮೇಸ್ತ್ರಿ. ಮಂಜುನಾಥ್ ಹಾದಿಮನಿ ಮೇಸ್ತ್ರಿ. ಮುಸ್ತಫ ಗೌರಿ ಅಂಗಳ ಮೇಸ್ತ್ರಿ. ಜಿಲಾನ್ ಸಾಬ್ ಕರ್ಕಿಹಳ್ಳಿ ಮೇಸ್ತ್ರಿ. ಇಸ್ಮಾಯಿಲ್ ಕೋಲ್ಕಾರ್ ಮೇಸ್ತ್ರಿ. ದೇವೇಂದ್ರಪ್ಪ ಹಾದಿಮನಿ ಮೇಸ್ತ್ರಿ. ಆಲಂ ಬಾಗಲಕೋಟ್ ಮೇಸ್ತ್ರಿ. ಮರ್ದಾನ್ ಆಲೂರು ಮೇಸ್ತ್ರಿ. ಮಹೆಬೂಬ್ ಬಾಳೆಹಣ್ಣು ಮೇಸ್ತ್ರಿ. ಹುಲಗಪ್ಪ ಕಲ್ಲನವರ್ ಮೇಸ್ತ್ರಿ. ಶಿವಪ್ಪ ದನಗಾರ ಮೇಸ್ತ್ರಿ.ಜಾಫರ್ ವರದಿ ಮೇಸ್ತ್ರಿ. ಬಸಣ್ಣ ಮಿಟ್ಟಿಕೇರಿ ಮೇಸ್ತ್ರಿ.ಹನುಮಂತಪ್ಪ ಬನ್ನಿಕೊಪ್ಪ ಮೇಸ್ತ್ರಿ. ಹನುಮಂತಪ್ಪ ನಾಯಿ ಕುನ್ನಿ ಮೇಸ್ತ್ರಿ. ಮರ್ದಾನ್ ವಲಿ ಗುಳೇಕಾರ್ ಮೇಸ್ತ್ರಿ. ಮೌಲಿ ಕೋಲ್ಕಾರ್ ಮೇಸ್ತ್ರಿ.ಪೀರಾ ಸಾಬ್ ಗುಳೇಕಾರ್ ಮೇಸ್ತ್ರಿ.ಗವಿಸಿದ್ದಪ್ಪ ಯಾಲಕ್ಕಿ ಮೇಸ್ತ್ರಿ.ದೇವಪ್ಪ ಚಿಗರಿ ಮೇಸ್ತ್ರಿ.ಲಕ್ಷ್ಮಣ್ ಎಮ್ಮಿ ಮೇಸ್ತ್ರಿ. ಯಂಕಪ್ಪ ಬೆಂಕಿ ನಗರ ಮೇಸ್ತ್ರಿ.ರಮೇಶ್ ಕನ್ಯಾಳ ಮೇಸ್ತ್ರಿ. ತಿಪ್ಪಣ್ಣ ಬಿಸರಳ್ಳಿ ಮೇಸ್ತ್ರಿ. ಇರ್ಫಾನ್ ಶಿರಹಟ್ಟಿ ಮೇಸ್ತ್ರಿ. ಈರಪ್ಪ ಹಾದಿಮನಿ ಮೇಸ್ತ್ರಿ. ನಿಂಗಪ್ಪ ಸುಣಗಾರ ಮೇಸ್ತ್ರಿ. ಮಹೆಬೂಬ್ ಚಾರ್ಲಿ ಮೇಸ್ತ್ರಿ. ಮಹೆಬೂಬ್ ಅತ್ತಾರ್ ಮೇಸ್ತ್ರಿ. ಕೊಳಚೆ ನಿರ್ಮೂಲನಾ ವೇದಿಕೆಯ ಸಂಚಾಲಕ ಗಾಳೆಪ್ಪ ಮುಂಗೋಲಿ. ರೈಲ್ವೆ ಜನಪರ ಹೋರಾಟ ಸಮಿತಿ ಪ್ರಧಾನ ಕಾರ್ಯದರ್ಶಿ ಮಖಬೂಲ್ ರಾಯಚೂರು. ಕಿನ್ನಾಳ ಗ್ರಾಮದ ಕಟ್ಟಡ ಕಾರ್ಮಿಕರ ಸಂಘದ ರಮೇಶ ಘೋರ್ಪಡೆ. ಮಹಾದೇವಪ್ಪ ಮುಂತಾದವರು ಉಪಸ್ಥಿತರಿದ್ದರು. ಸಂಘದ ಪ್ರಧಾನ ಕಾರ್ಯದರ್ಶಿ ಹಝರತ್ ಅಲಿ ಮುಜಾವರ ಸ್ವಾಗತಿಸಿ. ನಿರೂಪಿಸಿದರು.ಕೊನೆಯಲ್ಲಿ ಬಹದ್ದೂರ್ ಬಂಡಿ ಗ್ರಾಮದ ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ಮಹೆಬೂಬ್ ಮಣ್ಣೂರ ವಂದಿಸಿದರು.