ನೀನು..
ನೀನು ಒಂಥರಾ ಋತುಮಾನ
ನಿನಗಿಲ್ಲ ಒಂದಿಷ್ಟು ಬಿಗುಮಾನ
ನಿನ್ನದೇ ನೆನಪು ನನಗೆ ಅನುದಿನ
ನಿನಗಾಗಿಯೇ ಮುಡಿಪು ಈ ಜೀವನ.
ನಿನ್ನ ಪ್ರೀತಿಯೇ ಮಳೆಗಾಲ
ನಿನ್ನ ಕೋಪವೇ ಬೇಸಿಗೆಗಾಲ
ನಿನ್ನ ಸನಿಹವೇ ಚಳಿಗಾಲ
ನಿನಗಾಗಿಯೇ ಕಾಯುವೆ ಅನುಗಾಲ.
ನೀ ಬಂದೆ ನನ್ನ ಬರಡಾದ ಬಾಳಿಗೆ
ನೀ ತಂದೆ ಸುಖ ಸಂತಸದ ಘಳಿಗೆ
ನೀ ತುಂಬಿದೆ ನನ್ನ ಬಾಳಲ್ಲಿ ಪ್ರೀತಿ
ನೀನಾದೆ ನನ್ನ ಬಾಳಿಗೆ ಜ್ಯೋತಿ.
ನೀನೇ ನನ್ನೆಲ್ಲಾ ಭಾವನೆಗಳ ಕೈಗನ್ನಡಿ
ನೀನೇ ತಾನೇ ನನ್ನ ಬಾಳ ಮುನ್ನುಡಿ
ನೀನೇ ಆಗಿರುವೆ ನನ್ನಯ ಜೀವನಾಡಿ
ನಮ್ಮದು ಆ ದೇವರೇ ಬೆಸೆದ ಜೋಡಿ.
ನೀನು ನನಗಾಗಿ ಹುಟ್ಟಿ ಬಂದಿರುವೆ
ನೀನು ನನ್ನ ಕೈಹಿಡಿದು ಸಾಗಿರುವೆ
ನೀನು ಶಿವನ ಜೀವನವ ಬೆಳಗಿರುವೆ
ನೀನು ಶಿವನ ಜೀವ ಜೀವನವಾಗಿರುವೆ.
ಶಿವಮೂರ್ತಿ.ಹೆಚ್. ಕನ್ನಡ ಶಿಕ್ಷಕರು
ಶ್ರೀ ತರಳಬಾಳು ಸೆಂಟ್ರಲ್ ಸ್ಕೂಲ್
ಅನುಭವಮಂಟಪ, ದಾವಣಗೆರೆ.
ದೂ.ಸಂ.9591417815