ಸಂಯುಕ್ತ ಹೋರಾಟ- ಕರ್ನಾಟಕ ಕರ್ನಾಟಕ ರೈತ ಸಂಘ (AIUKS) ವೀರ ಹೋರಾಟಗಾರ ರೈತರಿಗೆ ಜಯವಾಗಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಚನ್ನರಾಯ ಪಟ್ಟಣ ಹೋಬಳಿಯ 13 ಗ್ರಾಮಗಳ ವೀರ ಹೋರಾಟಗಾರ ರೈತರಿಗೆ ಜಯವಾಗಿದೆ. ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನವರ ನೇತೃತ್ವದಲ್ಲಿ ನಡೆದ ರೈತ ಮುಖಂಡರ ಸಭೆಯಲ್ಲಿ, 1777 ಎಕರೆ ಭೂಮಿಯನ್ನು ಭೂ ಸ್ವಾಧೀನದಿಂದ ಕೈ ಬಿಡುವ ತೀರ್ಮಾನವಾಯಿತು. ಭೂ ಸ್ವಾಧೀನ ವಿರೋಧಿ ಹೋರಾಟ ಸಮಿತಿಯ ನೇತೃತ್ವದಲ್ಲಿ1998 ದಿನಗಳಿಂದ ನಡೆದ ಅನಿರ್ದಿಷ್ಟಾವಧಿ ಹೋರಾಟಕ್ಕೆ ಕೊನೆಗೂ ಫಲ ದೊರಕಿತು. ಈ ಜಯ, 13 ಗ್ರಾಮಗಳ ರೈತರ ಜಯವಷ್ಟೆ ಅಲ್ಲ ದೇಶದ, ರಾಜ್ಯದ ಜನರ ಜಯವಾಗಿದೆ. ಪ್ರಜಾಸತ್ತಾತ್ಮಕ ಮತ್ತು ನ್ಯಾಯಯುತವಾದ ಹೋರಾಟದ ಜಯವನ್ನು, ಕರ್ನಾಟಕ ರೈತ ಸಂಘ (AIUKS) ಹಾಗೂ ಸಂಯುಕ್ತ ಹೋರಾಟ-ಕರ್ನಾಟಕ ಹೃತ್ಪೂರ್ವಕವಾಗಿ ಅಭಿನಂದಿಸುತ್ತದೆ. ಮುಖ್ಯಮಂತ್ರಿ ಸಿದ್ದರಾಮಯ್ಯವರು ಕೊಟ್ಟ ಮಾತಿನಂತೆ ನಡೆದುಕೊಂಡಿರುವುದರಿಂದ, ಅವರಿಗೂ ಕೃತಜ್ಞತೆಗಳನ್ನು ಸಲ್ಲಿಸುತ್ತದೆ. ಈ ವಿಜಯವು, ಬಹುರಾಷ್ಟ್ರೀಯ ಕಂಪನಿಗಳು, ಕಾರ್ಪೊರೇಟೀಕರಣದ ವಿರುದ್ಧ ದೇಶಾದ್ಯಂತ ನಡೆಯುತ್ತಿರುವ ಹೋರಾಟಗಳಿಗೆ ಸ್ಫೂರ್ತಿಯಾಗಿದೆ. ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಆಡಳಿತದಿಂದ ರೈತರು, ಕಾರ್ಮಿಕರು ಮತ್ತು ಇತರ ವರ್ಗದ ಜನರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.ದೇವನಹಳ್ಳಿ ಚನ್ನರಾಯಪಟ್ಟಣ ರೈತರ ಹೋರಾಟ, ದೇಶದ ನೊಂದ ಜನರಿಗೆ ಮಾದರಿಯಾಗಲಿ ಎಂದು ಆಶಿಸುತ್ತೇವೆ. ರೈತರ ಈ ಹೋರಾಟಕ್ಕೆ ರಾಜ್ಯದ ಅನೇಕ ರೈತ, ದಲಿತ, ಕಾರ್ಮಿಕ ಸಂಘಟನೆಗಳು ಮತ್ತು ಚಿತ್ರ ನಟರು ಬರಹಗಾರರು, ಎಲ್ಲಾ ವರ್ಗದ ಜನರು ಬೆಂಬಲಿಸಿದರು. ಈ ಹೋರಾಟದ ಯಶಸ್ವಿಗೆ ಕಾರಣವಾದ ಎಲ್ಲರಿಗೂ ಅಭಿನಂದಿಸುತ್ತೇವೆ. ಕೆ. ರಂಗಯ್ಯ ರಾಷ್ಟ್ರೀಯ ಸಂಚಾಲಕರು AIUKS (ಅಖಿಲ ಭಾರತ ಸಂಘಟನಾ ಸಮಿತಿ) ಡಿ.ಹೆಚ್.ಪೂಜಾರ ರಾಜ್ಯಾಧ್ಯಕ್ಷರು. D s.ನಿರ್ವಾಣಪ್ಪ ರಾಜ್ಯ ಕಾರ್ಯದರ್ಶಿ ಕರ್ನಾಟಕ ರೈತ ಸಂಘ (AIUKS)