“ಜೈ ಹಿಂದ್ ಭಾರ್ಗವ” ಗೆ ಭರದಿಂದ ಚಿತ್ರೀಕರಣ.
ಬೆಂಗಳೂರು : ಮಾಯಮ್ಮ ಸಿನಿ ಕ್ರಿಯೇಶನ್ಸ್ ಬೆಂಗಳೂರು ಅರ್ಪಿಸುವ “ಜೈ ಹಿಂದ್ ಭಾರ್ಗವ” ಕನ್ನಡ ಚಲನಚಿತ್ರ ಕಳೆದೊಂದು ವಾರದಿಂದ ಸದ್ದಿಲ್ಲದೆ ಭರದಿಂದ ಚಿತ್ರೀಕರಣ ನಡೆಸಿದೆ ಚಿತ್ರತಂಡ.
ಭಾರತದ ಜಮ್ಮು-ಕಾಶ್ಮೀರದ ಪಹಲ್ಗಾಮ್ ದಾಳಿ ಮತ್ತು ಆಪರೇಶನ್ ಸಿಂಧೂರದ ಕಥಾ ವಸ್ತು ಹೊಂದಿದ್ದು, ಸತತ ಚಿತ್ರೀಕರಣ ನಡೆಸಿದ್ದೇವೆ. ಚಿತ್ರದಲ್ಲಿ ಹಾಡುಗಳಿಲ್ಲ, ಬೆಂಗಳೂರು,ಚಿಕ್ಕಬಳ್ಳಾಪೂರ, ಮೈಸೂರು, ಡೊಡ್ಡಬಳ್ಳಾಪೂರ,ಘಾಟಿ ಸುಬ್ರಮಣ್ಯ ಮೊದಲಾದ ಕಡೆ ಚಿತ್ರೀಕರಣ ನಡೆಸಲಿದೆ ಎಂದು ನಿರ್ದೇಶಕ ಎನ್.ಟಿ.ಜಯರಾಮ್ ತಿಳಿಸಿದ್ದಾರೆ. ಈ ಚಿತ್ರದ ತಾರಾಗಣದಲ್ಲಿ ಮಾಸ್ಟರ್ ಚಿನ್ಮಯ್, ಮಾಸ್ಟರ್ ನಿಶ್ಚಲ್, ಕುಮಾರಿ ಪೂರ್ವಿಕ, ಚಲನಚಿತ್ರ ನಿರ್ದೇಶಕರಾದ ವಸಂತ್‌ಕುಮಾರ್, ರೋಹಿಣಿ ಮೈಸೂರ್, ಯಶೋದಮ್ಮ ,ಮನು ,ರವಿ , ಸುಪ್ರೀತ್ , ಮಂಜುರ್, ಗೀತಾನಂದಕುಮಾರ್ ಹಾಗೂ ವಿಶೇಷ ಸೈನ್ಯಾಧಿಕಾರಿ ಪಾತ್ರದಲ್ಲಿ ಚಲನಚಿತ್ರ ನಟ-ನಿರ್ದೇಶಕರಾದ ಹರಿಹರನ್.ಬಿ.ಪಿ ಅವರು ನಟಿಸುತ್ತಿದ್ದಾರೆ. ಛಾಯಾಗ್ರಹಣ ಭುವನ್ ರೆಡ್ಡಿ ,ವರ್ಣಾಲಂಕಾರ ಕಾಂತರಾಜು, ಸಂಕಲನ ಮುತ್ತುರಾಜ್ ಟಿ , ಸಂಗೀತ ಶಿವಸತ್ಯ , ಪತ್ರಿಕಾ ಸಂಪರ್ಕ ಕಾರ್ತಿಕ್, ಡಾ.ಪ್ರಭು ಗಂಜಿಹಾಳ, ಡಾ.ವೀರೇಶ ಹಂಡಿಗಿ , ನಿರ್ಮಾಣ ನಿರ್ವಹಣೆ ಜವಾಬ್ದಾರಿ ಬೆಳ್ಳೂ ರಾಜು , ಸಹ ನಿರ್ದೇಶನ ಎಸ್ ಶ್ರೀನಿವಾಸ್ ಅವರದಿದೆ. ಈ ಚಿತ್ರಕ್ಕೆ ಕಥೆ-ಚಿತ್ರಕಥೆ-ಸಂಭಾಷಣೆಯನ್ನು ಬರೆದು ಎನ್.ಟಿ. ಜಯರಾಮ್ ರೆಡ್ಡಿ ನಿರ್ದೇಶನದ ಜವಾಬ್ದಾರಿಯನ್ನೂ ಹೊತ್ತಿದ್ದಾರೆ. ನಿರ್ಮಾಪಕರು ಕುಮಾರಿ ತನ್ಮಯ್ ಎನ್ ಆಗಿದ್ದಾರೆ. ಒಂದೇ ಹಂತದಲ್ಲಿ ಚಿತ್ರೀಕರಣ ನಡೆಸಿ ನವಂಬರ್‌ನಲ್ಲಿ ಚಿತ್ರ ಬಿಡುಗಡೆ ಮಾಡುವ ಆಲೋಚನೆ ಚಿತ್ರತಂಡದ್ದಾಗಿದೆ.
** ಡಾ.ಪ್ರಭು ಗಂಜಿಹಾಳ ಮೊ:೯೪೪೮೭೭೫೩೪೬