ರಕ್ತದಾನ ಶ್ರೇಷ್ಠದಾನ-ರೋ.ಡಾ. ಎನ್.ಬಿ.ಪಾಟೀಲ.

Spread the love

ರಕ್ತದಾನ ಶ್ರೇಷ್ಠದಾನ-ರೋ.ಡಾ. ಎನ್.ಬಿ.ಪಾಟೀಲ.


ಗದಗ: ಎಲ್ಲ ದಾನಗಳಲ್ಲಿ ಇವತ್ತು ರಕ್ತದಾನ ಕೂಡ ಶ್ರೇಷ್ಠವಾಗಿದೆ. ನೀವು ನೀಡುವ ರಕ್ತ ಹಲವಾರು ಜೀವಗಳನ್ನು ಉಳಿಸಲು ಕಾರಣವಾಗುತ್ತದೆ. ಸ್ವ ಪ್ರೇರಣೆಯಿಂದ ಮುಂದೆ ಬಂದು ರಕ್ತದಾನ ಮಾಡಬೇಕು ಎಂದು ರೋ.ಪಿಡಿಜಿ ಡಾ.ಎನ್.ಬಿ.ಪಾಟೀಲ ಹೇಳಿದರು.
ಅವರು ರೋಟರಿ ಗದಗ ಸೆಂಟ್ರಲ್ ವತಿಯಿಂದ ೨೦೨೫-೨೬ ನೇ ಸಾಲಿನ ನೂತನ ಪದಾಧಿಕಾರಿಗಳಿಗೆ ಸೇವಾದೀಕ್ಷೆ ಸಮಾರಂಭದ ಅಂಗವಾಗಿ ಬಸವೇಶ್ವರ ರಕ್ತಕೇಂದ್ರದ ಸಹಕಾರದೊಂದಿಗೆ ಸೇವಾಲಾಲ ನಗರದ ರೋಟರಿ ಭವನದಲ್ಲಿ ನಡೆದ ರಕ್ತದಾನ ಶಿಬಿರದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು. ಮನುಷ್ಯ ದೇಹದಲ್ಲಿ ಕೆಲವನ್ನು ಕೃತಕವಾಗಿ ಅಳವಡಿಸಬಹುದು .ಆದರೆ ರಕ್ತಕ್ಕೆ ಪರ‍್ಯಾಯವಿಲ್ಲ. ಕೃತಕ ರಕ್ತ ಇಲ್ಲದ ಕಾರಣ ನೀವು ನೀಡುವ ರಕ್ತ ಅತ್ಯಮೂಲ್ಯ. ರೋಟರಿ ಗದಗ ಸೆಂಟ್ರಲ್ ಪ್ರಸಕ್ತ ಸಾಲಿನ ಆರಂಭದಲ್ಲೇ ಉತ್ತಮ ಕಾರ್ಯ ಕೈಗೊಂಡಿದೆ .ಇನ್ನೂ ಹೆಚ್ಚಿನ ರೀತಿಯಲ್ಲಿ ಸಾರ್ವಜನಿಕರಿಗೆ ಉಪಯುಕ್ತವಾಗುವ ಇಂಥ ಕಾರ್ಯಗಳನ್ನು ಹಮ್ಮಿಕೊಳ್ಳಲಿ ಎಂದರು. ರಕ್ತದಾನ ಶಿಬಿರದಲ್ಲಿ ೧೭ ಜನ ರಕ್ತದಾನ ಮಾಡಿದರೆ, ೨೫ ಜನರ ರಕ್ತದ ಗುಂಪು ಪರೀಕ್ಷೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ರಕ್ತದಾನಿಗಳಿಗೆ ಪ್ರಶಸ್ತಿ ಪತ್ರ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ರೋಟರಿ ಗದಗ ಸೆಂಟ್ರಲ್ ನ ಅಧ್ಯಕ್ಷ ಚೇತನ ಅಂಗಡಿ, ಕಾರ್ಯದರ್ಶಿ ರಾಜು ಉಮನಾಬಾದಿ, ಖಜಾಂಚಿ ಡಾ.ಪ್ರಭು ಗಂಜಿಹಾಳ, ರೋ.ಇಂ.ಮೋಹನ ಹುಲಕೋಟಿ, ಅಸಿಸ್ಟಂಟ್ ಗರ‍್ನರ್ ವಿ.ಕೆ.ಗುರುಮಠ, ಮಾಜಿ ಅಸಿಸ್ಟಂಟ್ ಗರ‍್ನರ್ ಮಲ್ಲಿಕಾರ್ಜುನ ಐಲಿ, ರಾಜು ಕುರಡಗಿ , ಶರಣಬಸಪ್ಪ ಗುಡಿಮನಿ, ಡಾ.ಸಿ.ಬಿ.ಹಿರೇಗೌಡರ ,ಶಶಿಧರ ದಿಂಡೂರ, ಎಂ.ಸಿ.ಬೇಲೇರಿ, ಎಂ.ಎಂ.ಬಡ್ನಿ ,ಪ್ರಕಾಶ ಉಗಲಾಟದ, ಮಲ್ಲಿಕಾರ್ಜುನ ಚಂದಪ್ಪನವರ, ಎಸ್.ಆಯ್.ಅಣ್ಣಿಗೇರಿ, ವಿಜಯಕುಮಾರ ಹಿರೇಮಠ, ಆರ್.ಬಿ.ದಾನಪ್ಪಗೌಡರ, ಸಂತೋಷ ತೋಟಗಂಟಿ, , ಚಂದ್ರಗೌಡ ಹಿರೇಗೌಡರ, ಶ್ರೀಕಾಂತ ಲಕ್ಕುಂಡಿ, ಈಶಣ್ಣ ಗದ್ದಿಕೇರಿ, ಬಿ.ಬಿ.ಸಂಕನಗೌಡರ, ರಾಜು ಕಂಟಿಗೊಣ್ಣವರ, ಸಿ.ಜಿ.ಹಿರೇಗೌಡರ, ಪರಶುರಾಮ ನಾಯ್ಕರ್, ವಿನಯ ವಿ ಅಂಗಡಿ, ಬಸವೇಶ್ವರ ರಕ್ತಕೇಂದ್ರದ ರೋ.ಅನಿಲಕುಮಾರ ಹಂದ್ರಾಳ,ಸಿಬ್ಬಂದಿಗಳಾದ ಶಿವಕುಮಾರ ಕೊರಡೂರ, ಸರೋಜ ಪತ್ತಾರ ಮೊದಲಾದವರು ಪಾಲ್ಗೊಂಡಿದ್ದರು.
** -ಡಾ.ಪ್ರಭು ಗಂಜಿಹಾಳ ಮೊ-9448775346

Leave a Reply

Your email address will not be published. Required fields are marked *