ಕೊಪ್ಪಳ : ಅಖಿಲ ಭಾರತ ಮುಸ್ಲಿಮ್ ವೈಯಕ್ತಿಕ ಕಾನೂನು ಮಂಡಳಿ ಕರೆ ಹಿನ್ನೆಲೆ ನಗರದಲ್ಲಿ ಶುಕ್ರವಾರದ ವಿಶೇಷ ಪ್ರಾರ್ಥನೆ ಬಳಿಕ ಮಸೀದಿಗಳ ಮುಂದೆ ಮಾನವ ಸರಪಳಿ ಮಾಡಿ ಮೌನ ಪ್ರತಿಭಟನೆ ವ್ಯಕ್ತಪಡಿಸಿದರು.
ಕುಷ್ಟಗಿ ರಸ್ತೆಯಲ್ಲಿರುವ ಖೂಬಾ ಮಸೀದಿಯ ಮುಂದೆ ಮಾನವ ಸರಪಳಿ ಮಾಡಿ ಮೌನ ಪ್ರತಿಭಟನೆ ಮಾಡಿದ ಬಳಿಕ ಜನಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಎಸ್.ಎ.ಗಫಾರ್ ಮಾತನಾಡಿ ಯಾರೂ ಬೇಡಿಕೆ ಇಡದೆ ಇದ್ದಂತಹ ವಕ್ಫ್ ಮಂಡಳಿಯ ನಿಯಮಗಳನ್ನು ಬದಲಾಯಿಸಲಾಗಿದೆ. ಸರ್ಕಾರ ಯಾರ ಪಿತೂರಿಗೆ ಈ ನಿಯಮಗಳು ಬದಲಾಯಿಸಿ ಇಸ್ಲಾಂ ಧರ್ಮಕ್ಕೆ ತದ್ವಿರುದ್ಧವಾಗಿ ತಿದ್ದುಪಡಿ ಕಾಯ್ದೆ ಜಾರಿಗೆ ತಂದಿರುವುದಲ್ಲದೆ. ಧರ್ಮ ನಿರಪೇಕ್ಷ.ಸಮಾಜವಾದಿ. ಜಾತ್ಯತೀತ ಎಂಬ ಪದವನ್ನು ಸಂವಿಧಾನದ ಪೀಠಿಕೆಯಿಂದ ತೆಗೆಯುವ ಹೇಳಿಕೆಗಳನ್ನು ನೋಡಿದರೆ ಸಂವಿಧಾನವನ್ನು ವಿರೋಪ ಗೊಳಿಸುವ ಪಿತೂರಿ ನಡೆಸಲಾಗುತ್ತಿದೆ. ಸವಿಧಾನವನ್ನು ನಿಷ್ಪ್ರಯೋಜಕ ಗೊಳಿಸುವ ಎಲ್ಲಾ ಕುತಂತ್ರಗಳು ನಡೆಯುತ್ತಿದೆ. ಸಂವಿಧಾನ ಉಳಿಸಿಕೊಳ್ಳುವ ಮತ್ತು ಹಳೆಯ ವಕ್ಫ್ ಮಂಡಳಿಯ ಕಾಯ್ದೆಗಳನ್ನು ಯಥಾ ಸ್ಥಿತಿಯಲ್ಲಿ ಮುಂದುವರಿಸಲು ಒತ್ತಾಯಸಿದರು.
ಖೂಬಾ ಮಸೀದಿಯ ಪೇಶ್ ಇಮಾಮ್ ಹಾಫಿಝ್ ಮೊಹಮ್ಮದ್ ಮುಜಾಹಿದ್ ಖಾಝಿ ರಝಾ. ಖೂಬಾ ಮಸೀದಿ ಕಮಿಟಿ ಅಧ್ಯಕ್ಷ ಹಾಜಿ ಇಬ್ರಾಹಿಂ ಸಾಬ್. ಉಪಾಧ್ಯಕ್ಷ ಖಾಜಾವಲಿ ಬಿಸ್ತಿ.ಮಾಜಿ ಸೈನಿಕ ರಫತುಲ್ಲಾ ಚೌದ್ರಿ. ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಖಾಜಾ ಹುಸೇನ್ ನಿಯಾಝಿ. ಸುನ್ನೀ ಸ್ಟೂಡೆಂಟ್ಸ್ ಫೆಡರೇಷನ್ ಮುಖಂಡ ಸೈಯ್ಯದ್ ಸಲಿಮುದ್ದೀನ್ ಅಲ್ವಿ. ವಲಿ ಅಹ್ಮದ್ ಸಿದ್ದೀಕಿ. ಸೈಯ್ಯದ್ ಅಫ್ಝಲ್ ಪಾಷಾ. ನೂರುದ್ದೀನ್ ಖಾಝಿ ಕವಲೂರ.ಮಹೆಬೂಬ್ ಸಾಬ್. ಅಹ್ಮದ್ ಮುದಗಲ್ ಮೇಸ್ತ್ರಿ. ಬೆಲ್ದಾರ್ ಕಾಲೋನಿ.ಕಾಳಿದಾಸ ನಗರ.ಬಿ.ಟಿ. ಪಾಟೀಲ್ ನಗರದ ಅನೇಕರು ಉಪಸ್ಥಿತರಿದ್ದರು.
ನಗರದ ದಿಡ್ಡಿಕೆರಿ ಮಸೀದಿಯ ಮುಂಭಾಗದಲ್ಲಿ ಮಾನವ ಸರಪಳಿ ರಚಿಸಿ ಮೌನ ಪ್ರತಿಭಟನೆ ನಡೆಸಿ ಬಳಿಕ ಮಸೀದಿಯ ಪೇಶ್ ಇಮಾಮ್ ಮೊಹಮ್ಮದ್ ಮೊಹಿಯುದ್ದೀನ್ ಬಡೆಘರ ವಕೀಲರು ಮಾತನಾಡಿ ವಕ್ಫ್ ಮಂಡಳಿ ಮುಸ್ಲಿಮರ ಆಸ್ತಿ ಆದನ್ನು ಯಾವ ಕಾರಣಕ್ಕೂ ಬಿಟ್ಟುಕೊಡುವುದಿಲ್ಲ.
ಮುಸಲ್ಮಾನರ ಹಕ್ಕನ್ನು ಕಸಿದುಕೊಳ್ಳಲು ಸರ್ಕಾರ ನಡೆಸಿರುವ ಹುನ್ನಾರವನ್ನು ಖಡ ಖಂಡಿತವಾಗಿ ವಿರೋಧಿಸುತ್ತೇವೆ. ಎಚ್ಚರಗೊಂಡು ವಕ್ಫ್ ಕಾಯ್ದೆಯನ್ನು ಸರ್ಕಾರ ವಾಪಸ ಪಡೆದುಕೊಂಡು ಎಲ್ಲರೂ ನೆಮ್ಮದಿಯಾಗಿ ಬದುಕಲು ಅವಕಾಶ ಮಾಡಿಕೊಡಬೇಕು.ರಾಜ್ಯ ಸರ್ಕಾರ ತನ್ನ ನಿಲುವನ್ನು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ದಿಡ್ಡಿಕೆರಿ ಮಸೀದಿ ಕಮಿಟಿಯ ಅಧ್ಯಕ್ಷ ಖಲೀಲ್ ಆಹ್ಮದ್ ದಾಗದಾರ್. ಖಜಾಂಚಿ ರಜಾಕ್ ಸಾಬ್ ಶಿಕಲಗಾರ. ಜಾಫರ್ ಕುರಿ. ಮೈನುದ್ದೀನ್ ಕುದರಿ. ತೌಸೀಫ್ ನಿಶಾನಿ. ನಗರಸಭಾ ಸದಸ್ಯ ಅಜೀಮ್ ಅತ್ತಾರ್.ಬುಡ್ನೆ ಸಾಬ್ ಅತ್ತಾರ್. ಮಹೆಬೂಬ್ ಸೋಂಪುರ. ಯೂಸುಫ್ ಗಾದಿಗನೂರ್. ನಯೀಮ್ ದಾಗದಾರ್ ಮುಂತಾದವರು ಉಪಸ್ಥಿತರಿದ್ದರು.
ನಗರದ ನಿರ್ಮಿತಿ ಕೇಂದ್ರ. ಕುವೆಂಪು ನಗರ. ರೈಲ್ವೆ ನಿಲ್ದಾಣದ ಬಳಿ. ಫಿರ್ದೋಸ್ ನಗರ ಯುಸೋಫಿಯಾ ಮಸೀದಿ ಸೇರಿದಂತೆ ವಿವಿಧ ಕಡೆಗಳಲ್ಲಿ ಶುಕ್ರವಾರದ ಪ್ರಾರ್ಥನೆಯ ನಂತರ ಮಾನವ ಸರಪಳಿ ಮಾಡಿ ಮೌನವಾಗಿ ಪ್ರತಿರೋಧ ವ್ಯಕ್ತಪಡಿಸಿ ಮುಸ್ಲಿಮರಿಂದ ವಕ್ಫ್ ತಿದ್ದುಪಡಿ ಕಾಯ್ದೆ ತಕ್ಷಣ ರದ್ದು ಮಾಡಿ ಮೊದಲಿನ ಕಾಯ್ದೆ ಜಾರಿಗೆ ಆಗ್ರಹಿಸಿದರು.