ಪಟ್ಟಣದ ಸ್ಥಳಿಯ ಮುಖಂಡರು ಹಾಗೂ ಗ್ರಾ.ಪಂ ಮಾಜಿ ಅಧ್ಯಕ್ಷರಾದ ಶ್ರೀ ವೀರಭದ್ರಪ್ಪ ನಾಲತ್ವಾಡ ಅವರ ಪುತ್ರನ ಮದುವೆ నిమిತ್ಯ ಸಾಮೂಹಿಕ ವಿವಾಹ ಕಾರ್ಯಕ್ರಮ ಯಶಸ್ವಿ..

Spread the love

ಪೂಜ್ಯ ಡಾ|| ಮುರುಘರಾಜೇಂದ್ರ ಮಹಾಸ್ವಾಮಿಗಳು ಮುಗಳಕೋಡ-ಜಿಡಗಾ ಮಠ ಪೂಜ್ಯ ಜಯ ಮೃತ್ಯುಂಜಯ ಮಹಾಸ್ವಾಮಿಗಳು ಪಂಚಮಸಾಲಿ ಪೀಠ ಕೂಡಲಸಂಗಮ ಪೂಜ್ಯ ಕಲ್ಲಯ್ಯ ಮಹಾಸ್ವಾಮಿಗಳು ವೀರೇಶ್ವರ ಪುಣ್ಯಾಶ್ರಮ ಗದಗ್ ಹಾಗೂ ಅನೇಕ ಸಾಧು, ಸಂತರ ನೇತೃತ್ವದಲ್ಲಿ ಶ್ರೀ ಗುರುಕೃಪಾ ಎಂಟರ್ಪ್ರೈಸಸ್ ಹಾಗೂ ಸಾಯಿನಾಥ ಟ್ರೇಡರ್ಸ್ ಇವರ ವತಿಯಿಂದ ನಡೆದ ಸಾಮೂಹಿಕ ವಿವಾಹ ಕಾರ್ಯಕ್ರಮ ಹಾಗೂ ಅರುಣ್ ಕುಮಾರ್ ವೀರಭದ್ರಪ್ಪ ನಾಲತವಾಡ ಇವರ ವಿವಾಹ ಮಹೋತ್ಸವ ಬಹಳ ಅದ್ದೂರಿಯಾಗಿ ನಡೆದಿದ್ದು ಎಲ್ಲಾ ಗಣ್ಯಾತಿ ಗಣ್ಣೇರು ಭಾಗವಹಿಸಿ ಹರಿಸಿ ಹಾರೈಸಿದರು.

ತಾವರಗೇರಾ: ‘ಮಳೆಯಾಶ್ರಿತ ಬೆಳೆಯನ್ನು ನಂಬಿ ಜೀವನ ನಡೆಸುವ ಗ್ರಾಮೀಣ ಪ್ರದೇಶದಲ್ಲಿ ಕುಟುಂಬಗಳಿಗೆ ಆರ್ಥಿಕ ಹೊರೆ ಇಳಿಸುವ ಉದ್ದೇಶದಿಂದ ನಡೆಸುತ್ತಿರುವ ಸಾಮೂಹಿಕ ವಿವಾಹ ಕಾರ್ಯ ಶ್ಲಾಘನೀಯ’ ಎಂದು ಕುಷ್ಟಗಿ ಶಾಸಕ ದೊಡ್ಡನಗೌಡ ಪಾಟೀಲ ಹೇಳಿದರು. ಪಟ್ಟಣದ ದಿವಂಗತ ಗುಂಡಪ್ಪ ನಾಲತ್ವಾಡ ಸ್ಮರಣಾರ್ಥ ಇಲ್ಲಿನ ಎಪಿಎಂಸಿ ಆವರಣದಲ್ಲಿ ಗುರುವಾರ ಏರ್ಪಡಿಸಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮಾತನಾಡಿದರು. ಅವರು ‘ಸ್ಥಳೀಯ ಮುಖಂಡ ವೀರಭದ್ರಪ್ಪ ನಾಲತ್ವಾಡ ಅವರ ಪುತ್ರನ ಮದುವೆ నిమిత్త ಸಾಮೂಹಿಕ ವಿವಾಹ ಕಾರ್ಯಕ್ರಮ ಆಯೋಜಿಸಿರುವುದು ಉತ್ತಮ ಕಾರ್ಯ. ಮನೆಗೆ ಬಂದ ಸೊಸೆಯನ್ನು ಮಗಳಂತೆ ಭಾವಿಸಿ ಜೀವನ ಸಾಗಿಸಬೇಕು. ನೂತನ ದಂಪತಿ ಪರಸ್ಪರ ಅನೋನ್ಯವಾಗಿ ಜೀವನ ಸಾಗಿಸಬೇಕು’ ಎಂದು ಸಲಹೆ ನೀಡಿದರು. ತಾವರಗೇರಾ ಪಟ್ಟಣದ ಎಪಿಎಂಸಿ ಆವರಣದಲ್ಲಿ ಗುರುವಾರಗುಂಡಪ್ಪ ನಾಲತ್ವಾಡ ಸ್ಮರಣಾರ್ಥವಾಗಿ ನಡೆದ ಸಾಮೂಹಿಕ ವಿವಾಹದಲ್ಲಿ 40 ಜೋಡಿ ವಧು ವರರು ದಾಂಪತ್ಯ ಜೀವನಕ್ಕೆ ಕಾಲಿಟ್ಟರು ಕಾರ್ಯಕ್ರಮದಲ್ಲಿ 40 ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ವೀರಭದ್ರೇಶ್ವರ ಕಲ್ಯಾಣ ಮಂಟಪದ ಆವರಣದಲ್ಲಿ ವಧು ವರರಿಗೆ ಸೂಕ್ತ ಸೌಲಭ್ಯ ಮತ್ತು ಊಟದ ವ್ಯವಸ್ಥೆ ಮಾಡಲಾಗಿತ್ತು. ಕೂಡಲಸಂಗಮ ಪಂಚಮಸಾಲಿ ಪೀಠದ ಜಯಬಸವ ಮೃತ್ಯುಂಜಯ ಸ್ವಾಮೀಜಿ, ಅಂಕಲಿ ಫಕೀರಯ್ಯ ಸ್ವಾಮೀಜಿ, ರೌಡಕುಂದ ಮಠದ ಸ್ವಾಮೀಜಿ ಆಶೀರ್ವಚನ ನೀಡಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ, ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಮರೇಗೌಡ ಪಾಟೀಲ ಬಯ್ಯಾಪೂರ, ಮಾಜಿ ಶಾಸಕ ವೀರಪ್ಪ ಕೆಸರಹಟ್ಟಿ, ಬಿಜೆಪಿ ಅಭ್ಯರ್ಥಿ ಡಾ.ಬಸವರಾಜ ಕ್ಯಾವಟರ್, ಪ್ರಮುಖರಾದ ದೇವೆಂದ್ರಪ್ಪ ಬಳೂಟಗಿ, ವೀರಭದ್ರಪ್ಪ ನಾಲತ್ವಾಡ, ಜನಪ್ರತಿನಿಧಿಗಳು, ಹಿರಿಯರು ಈ ವಿಶೇಷ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ವರದಿ-ಉಪಳೇಶ ವಿ ನಾರಿನಾಳ.

Leave a Reply

Your email address will not be published. Required fields are marked *