ಜಿಲ್ಲೆಯದ್ಯಾಂತ  ಇಂದು ನಾಲ್ಕನೇ ದಿನಕ್ಕೆ ಸಂಪೂರ್ಣ ಲಾಕ್ ಡೌನ್  ಬಂದ್ ಬಂದ್ ಬಂದ್.

Spread the love

ಜಿಲ್ಲೆಯದ್ಯಾಂತ  ಇಂದು ನಾಲ್ಕನೇ ದಿನಕ್ಕೆ ಸಂಪೂರ್ಣ ಲಾಕ್ ಡೌನ್  ಬಂದ್ ಬಂದ್ ಬಂದ್.

 

ಕರ್ನಾಟಕ ರಾಜ್ಯಾದಂತ ಸರ್ಕಾರ ಹೋರಡಿಸಿರುವ ಲಾಕಡೌನ್ ಆದೇಶದಂತೆ ಇಂದು ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ತಾವರಗೇರಾ ಪಟ್ಟಣವು ಇಂದು  ನಾಲ್ಕನೇ ದಿನಕ್ಕೆ ಕಾಲಿಟ್ಟಿದ್ದು. ಇಂದು ಬೆಳಗಿನ ಜಾವ್ 5 ಗಂಟೆಯಿಂದ ಕಿರಾಣಿ ಅಂಗಡಿಯವರು ಹಾಗೂ ಬಟ್ಟೆ ಅಂಗಡಿಯವರು ಕದ್ದು/ಮುಚ್ಚಿ ವ್ಯವಹಾರ ಮಾಡುತ್ತಿರುವುದು ಕಂಡು ಬಂತ್ತು, ಸರ್ಕಾರ ಏನೆಲ್ಲಾ ಜನರ ಅಳಿವು / ಉಳಿವಿಗಾಗಿ ಪ್ರಯತ್ನ ಪಟ್ಟರು ಒಂದು ಕಡೆ ವ್ಯರ್ಥ, ಯಾಕೆಂದರೆ ಸರ್ಕಾರವು ತೆಗೆದುಕೊಂಡ ನಿರ್ಣಯ ನಮ್ಮೆಲ್ಲರ ಒಳಿತುಗಾಗಿ ಅನ್ನುವ ಪ್ರಜ್ಞೆಯನ್ನು ಕಳೆದುಕೊಂಡಿದ್ದೆವೆ. ಹಾಗಾಗಿ ಬೆಳಗಾದರೆ ಸಾಕು ರಸ್ತೆಗೆ ಇಳಿಯೋಣ ಅಂತ್ ವಿಚಾರ ಮಾಡುತ್ತೇವೆ. ಪ್ರತಿದಿನ ಈ ಲಾಕ್ ಡೌನ್ ನಿಮಿತ್ಯವಾಗಿ ಪೊಲೀಸರು ಅಥವಾ ಗೃಹ ರಕ್ಷಕದಳದವರು ರಸ್ತೆಗೆ ಇಳಿದು ಎಚ್ಚರಿಸಬೇಕು ಅಂದರೆ ಹೇಗೆ ಹೇಳಿ. ನಮ್ಮ ರಕ್ಷಣೇಗೆ ನಿಂತವರು ಬೇರೆ ಯಾರು ಅಲ್ಲ. ಅವರು ನಮ್ಮ ಅಣ್ಣ/ತಮ್ಮಂದಿರು, ಅಕ್ಕ/ತಂಗಿಯಯವರು, ಇವರೆಲ್ಲ ನಮ್ಮ ಬೆನ್ನಿಗೆ ಬಿದ್ದು ರಕ್ಕಷಣೆ ಮಾಡುತ್ತಿದ್ದಾರೆ, ತಮ್ಮ ಜೀವನ, ತಮ್ಮ ಕುಟುಂಬದ ಜೀವನದ ಹಂಗು ತೋರೆದು ನಮ್ಮ/ನಿಮ್ಮೆಲ್ಲರ ಬೆನ್ನಿಗ ಬಿದ್ದಿದ್ದಾರೆ. ಇದನ್ನಾದರ ಮಾನವರಾದವರು ನಾವುಗಳು ಅರ್ಥಯೈಸಿಕೊಳ್ಳಬೇಕು. ಈ ಲಾಕ್ ಡೌನ್ ಬೆಳಗಿ 06 ಘಂಟೆಯಿಂದ ಪೊಲೀಸ್ ಪಡೆ ಹಾಗೂ ಗೃಹ ರಕ್ಷಕ ಧಳದವರು ರಸ್ತೆಗೆ ಇಳಿದರು. ಬೇಕಾಬಿಟ್ಟಿಯಾಗಿ ತಿರುಗಾಡುವವರನ್ನು ಪೋಲೀಸರು ದಂಡ ಹಾಕುವ ಮೂಲಕ ೆಚ್ರಿಕೆಯ ಗಂಟೆ ನೀಡಿದರು. ತಾವರಗೇರಾ ಪಟ್ಟಣದ ಪ್ರಮುಖ ರಸ್ತೆಗಳು ಬಸ್ ನಿಲ್ದಾಣ, ಡಾ..ಅಂಬೇಡ್ಕರ್ ನಗರ, ಶ್ರೀ ಬಸವೇಶ್ವರ ನಗರ, ಶ್ರೀ ಶ್ಯಾಮೀದಲಿ ಸರ್ಕಲ್, ಹಾಗೂ ಗಾಂಧಿ ಚೌಕ್, ಐ.ಬಿ. ಸರ್ಕಲ್, ಡಾ.ರಾಜಕುಮಾರ (ಮಾರ್ಕೇಟ್) ರಸ್ತೆ, ಈ ಮೊದಲಾದ ಜನಜಂಗುಳ್ಳಿಯ ನಗರ ಹಾಗೂ ಸರ್ಕಲ್ ನಲ್ಲಿ ರಣ ರಣ (ಬೀಕೊ) ಎನ್ನುವ ದೃಶ್ಯ ಕಂಡು ಬಂತ್ತು, ನಿನ್ನೆ ಮಳೆ/ಗಾಳಿ ಬಂದಾಗು ಸಹ ಪೊಲೀಸರು ಹಾಗೂ ಗೃಹ ರಕ್ಷಕ ಧಳದವರು ನಿಷ್ಠೆಯಿಂದ ಕಾರ್ಯ ಮಾಡುತ್ತಿರುವ ದೃಶ್ಯ ಕಂಡು ಬಂತ್ತು, ನಿಜಕ್ಕೂ ಹೆಮ್ಮೇಯಿಂದ ಹೇಳಬೇಕು ಪೊಲೀಸ್ ಇಲಾಖೆ ಹಾಗೂ ಗೃಹ ರಕ್ಷಕ ಧಳದ ಕಾರ್ಯ ಶ್ಲಾಘನೀಯವಾದದ್ದು, ತಮ್ಮ ಜೀವದ ಹಂಗ್ಗು ತೋರೆದು ಸಾರ್ವಜನೀಕರ ಹೀತಕ್ಕಾಗಿ/ ತಮ್ಮ ಕುಟುಂಬದ ಸಾವಿರಾರು ಕನಸ್ಸುಗಳನ್ನು ಬದಿಗಿಟ್ಟು ಈ ಕರೋನದ ವಿರುದ್ದ ನಮ್ಮ/ನಿಮ್ಮೆಲ್ಲರಗಾಗಿ ಸೇವೆ ಸಲ್ಲಿಸುವವರು ಅಂದರೆ ಅದು ಈ ಇಲಾಖೆಯಿಂದ ಮಾತ್ರ ಸಾಧ್ಯ. ಒಟ್ಗನಲ್ಲಿ ತಾವರಗೇರಾ ಪಟ್ಟಣದ ಪ್ರಮುಖ ನಗರ ಹಾಗೂ ಸರ್ಕಲ್ ನಲ್ಲಿ ಬಿಗು ಬಂದೋಬಸ್ತುವಿನ ವಾತವರಣ ಕಂಡು ಬಂತ್ತು. ದಿನದಿಂದ ದಿನಕ್ಕೆ ಕೋರೋನದ ವಿರುದ್ದ ಹೋರಾಟ ಮಾಡಿ ಸಾವಿನ ಮೇಲೆ ಸಾವುಗಳು ಸಂಭವಿಸುವ ದೃಶ್ಯಗಳು ಕಣ್ಣಿಗೆ ಕಾಣುತ್ತಿದ್ದರು ನಾವುಗಳು ಎಚ್ಚೆತ್ತುಕೊಳ್ಳದೆ ಬೇಕಾಬಿಟ್ಟಿಯಾಗಿ ಅಲೆದಾಡುತ್ತಿರುವುದನ್ನು ಬಿಟ್ಟು ಎಚ್ಚೆತ್ತುಕೊಳ್ಳಬೇಕಾಗಿದೆ. ನಮ್ಮ ನಿಮ್ಮೆಲ್ಲರ ಆರೋಗ್ಯಕ್ಕಾಗಿ ಸರ್ಕಾರ ಕೈಗೊಂಡ ನಿರ್ಣಾಯಕ್ಕೆ ನಾವುಗಳು ಕೈ ಜೋಡಿಸಬೇಕಾಗಿದೆ.

  ವರದಿ – ಅಮಾಜಪ್ಪ ಹೆಚ್.ಜುಮಲಾಪೂರ

 

 

 

Leave a Reply

Your email address will not be published. Required fields are marked *