ಸಿಂಧನೂರು ತಹಶೀಲ್ದಾರರು ಮುಖಾಂತರ ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ನೀಡಿದ ಸಿಪಿಐ ಎಂಎಲ್ ರೆಡ್ ಸ್ಟಾರ್ ಪಕ್ಷ.

Spread the love

ಸಿಂಧನೂರು ತಹಶೀಲ್ದಾರರು ಮುಖಾಂತರ ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ನೀಡಿದ ಸಿಪಿಐ ಎಂಎಲ್ ರೆಡ್ ಸ್ಟಾರ್ ಪಕ್ಷ.

ಸಿಪಿಐ ಎಂಎಲ್ ರೆಡ್ ಸ್ಟಾರ್ ಪಕ್ಷ ತಾಲೂಕು ಸಮಿತಿ ಸಿಂಧನೂರು ಹಾಗೂ ಶ್ರಮಜೀವಿ ಎಪಿಎಂಸಿ ಹಮಾಲರ ಸಂಘ ಟಿಯುಸಿಐ, ಶ್ರೀ ಗುರು ಪಂಚಾಕ್ಷರಿ ಪುಟ್ಟರಾಜ ಗವಾಯಿಗಳ ಸಂಗೀತ ಸೇವಾ ಸಮಿತಿ ಹಾಗೂ ಕ್ರಾಂತಿಕಾರಿ ಸಾಂಸ್ಕೃತಿಕ ವೇದಿಕೆ ಆರ್ಸಿಎಫ್ ಮತ್ತು ಜನಪದ ಕಲಾವಿದರ ಸಂಘ ಜಂಟಿಯಾಗಿ ತಮ್ಮಲ್ಲಿ ಒತ್ತಾಯ ಸೂರ್ಯನೆಂದರೆ ಕೋವಿಂದ್ 19ಸಾಂಕ್ರಾಮಿಕ ರೋಗವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಪೂರ್ವತಯಾರಿ ಗೊಳ್ಳದೆ ಏಕಾ ಏಕಿಯಾಗಿ ಲಾಕ್ ಡೌನ್ ಘೋಷಿಸಿದ್ದರಿಂದ ಕಡುಬಡವರ ಕುಟುಂಬಗಳು ಮತ್ತು ವೃತ್ತಿ ಕಲಾವಿದರ ಜೀವನ ಗಳು ಸಂಕಷ್ಟಕ್ಕೆ ಸಿಲುಕಿವೆ. ನೆರೆಯ ತೆಲಂಗಾಣ ಆಂಧ್ರ ಕೇರಳ ರಾಜ್ಯ ಸರ್ಕಾರಗಳು ಸಾಮಾನ್ಯ ಜನರ ಪರ ನಿಂತು ಉಚಿತವಾಗಿ ಪಡಿತರವನ್ನು ಮತ್ತು ಆರ್ಥಿಕ ಸಹಾಯವನ್ನು ಮಾಡುತ್ತಿವೆ. ಕರ್ನಾಟಕ ರಾಜ್ಯ ಸರ್ಕಾರವು ಲಾಕ್ ಡೌನ್ ಮಾಡಿದ್ದರಿಂದ ದುಡಿಯುವ ವರ್ಗಗಳ ಬಡವರು, ನಿರ್ಗತಿಕರು, ಕಟ್ಟಡ ಕಾರ್ಮಿಕರು, ಹಮಾಲಿ ಕಾರ್ಮಿಕರು, ದಿನಗೂಲಿ ಕಾರ್ಮಿಕರು, ಚಿಂದಿ ಆಯುವವರು, ಅಲೆಮಾರಿ ಜನಾಂಗಗಳಾದ  ಸಿಂಧೋಳಿ, ಬುಡುಗ ಜಂಗಮ, ಸುಡುಗಾಡು ಸಿದ್ಧರು, ಹೋಟೆಲ್ ಕಾರ್ಮಿಕರು, ಮನೆಗೆಲಸ ಕಾರ್ಮಿಕರು, ಆಟೊ, ಟ್ಯಾಕ್ಸಿ, ಟೈಲರ್, ಅಗಸರು, ಕ್ಷೌರಿಕರು, ಕಮ್ಮಾರರು ಸೇರಿದಂತೆ ಅಸಂಘಟಿತ ಅಸಂಖ್ಯಾತ ಶ್ರಮಜೀವಿಗಳಿಗೆ ಭಾರೀ ಸಂಕಷ್ಟ ಎದುರಾಗಿದೆ. ಕಳೆದ ಬಾರಿ ಕಟ್ಟಡ ಕಾರ್ಮಿಕರು ಹಾಗೂ ಅಗಸರು ಕ್ಷೌರಿಕರಿಗೆ ಮತ್ತು ಆಟೋ ಚಾಲಕರಿಗೆ 5 ಸಾವಿರ ಹಣವನ್ನು ರಾಜ್ಯ ಸರ್ಕಾರ ಕಾರ್ಮಿಕ ಇಲಾಖೆಯಿಂದ ಅವರ ಖಾತೆಗೆ ಹಾಕಲಾಗಿತ್ತು. ಈ ವರ್ಷದಲ್ಲಿ ಅಸಂಘಟಿತ ಕಾರ್ಮಿಕರಿಗೆ ಕಾರ್ಮಿಕರ ವಂತಿಗೆ ಹಣವನ್ನು ಕಾರ್ಮಿಕರಿಗೆ 3000 ನೀಡಲಾಗುವುದೆಂದು ಸರಕಾರ ಇಂದು ಘೋಷಣೆ ಮಾಡಿದೆ. ಇದು ಕಾರ್ಮಿಕ ವಿರೋಧಿ ನಡೆಯಾಗಿದೆ. ಹಾಗೂ ಕಲಾವಿದರಿಗೆ 2000 ರೂ. ಘೋಷಣೆ ಮಾಡಿದೆ ಇದು ಯಾವುದಕ್ಕೂ ಸಾಲದ ಪ್ಯಾಕೇಜ್ ಆಗಿದೆ. ಈ ಪ್ಯಾಕೇಜ್ ನ್ನು ನಮ್ಮ ಸಂಘಟನೆಗಳು ತೀವ್ರವಾಗಿ ವಿರೋಧಿಸುತ್ತೇವೆ. ಅಸಂಘಟಿತ ಕಾರ್ಮಿಕರಿಗೆ ಹಾಗೂ ಕಲಾವಿದರಿಗೆ ಕನಿಷ್ಠ 10 ಸಾವಿರ ರೂಪಾಯಿಗಳನ್ನು ನೀಡಲು ಪ್ಯಾಕೇಜ್ ನಲ್ಲಿ ಘೋಷಿಸಬೇಕೆಂದು ನಮ್ಮ ಒತ್ತಾಯವಾಗಿದೆ. ಹಾಗೂ ಬಿಪಿಎಲ್ ಕುಟುಂಬಗಳಿಗೆ ಉಚಿತವಾಗಿ ಪ್ರತಿತಿಂಗಳು 20 ಕೆಜಿ ಅಕ್ಕಿ ಮತ್ತು ಅಗತ್ಯ ಪಡಿತರಗಳನ್ನು ಪೂರೈಸಬೇಕೆಂದು ನಮ್ಮ ಮನವಿಯಾಗಿದೆ. ಸಿಪಿಐ(ಎಂಎಲ್) ರೆಡ್ ಸ್ಟಾರ್ ಪಕ್ಷ ತಾಲೂಕು ಸಮಿತಿ ಸಿಂಧನೂರು ಹಾಗೂ ಕ್ರಾಂತಿಕಾರಿ ಸಾಂಸ್ಕೃತಿಕ ವೇದಿಕೆ-RCF, ಶ್ರೀ ಪಂಚಾಕ್ಷರಿ ಪುಟ್ಟರಾಜ ಗವಾಯಿಗಳ ಸಂಗೀತ ಸೇವಾ ಸಮಿತಿ, ಜಾನಪದ ಕಲಾವಿದರ ಸಂಘ, ಹಾಗೂ ಶ್ರಮಜೀವಿ ಎಪಿಎಂಸಿ ಹಮಾಲರ ಸಂಘ-ಟಿಯುಸಿಐ ವತಿಯಿಂದ ಅಸಂಘಟಿತ ಕಾರ್ಮಿಕರಿಗೆ ಮತ್ತು ಕಲಾವಿದರಿಗೆ ಲಾಕ್ ಡೌನ್ ಮುಗಿಯುವವರೆಗೆ ಪ್ರತಿ ತಿಂಗಳು 10ಸಾವಿರ ಆರ್ಥಿಕ ಸಹಾಯ ನೀಡಬೇಕೆಂದು ಒತ್ತಾಯಿಸಿ, ಮಾನ್ಯ ಮುಖ್ಯಮಂತ್ರಿಗಳಿಗೆ ಸಿಂಧನೂರು ತಹಶಿಲ್ದಾರರ ಕಾರ್ಯಾಲಯದ ಶಿರೆಸ್ತೆದಾರರಾದ ಉಮೇಶ್ ಕೆ. ರಾಠೋಡ್ ಇವರಿಗೆ ಮನವಿ ನೀಡಲಾಯಿತು. ಈ ಸಂದರ್ಭದಲ್ಲಿ ನಾರಾಯಣಪ್ಪ ಮಾಡಸಿರವಾರ, ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯರು  ರಾಯಚೂರು ಇವರು ಹಾಗೂ ಸಿಪಿಐ(ಎಂಎಲ್) ರಾಜ್ಯ ಸಮಿತಿ ಸದಸ್ಯರಾದ ಎಂ.ಗಂಗಾಧರ ಮತ್ತು ಶ್ರೀ ಪಂಚಾಕ್ಷರಿ ಪುಟ್ಟರಾಜ ಗವಾಯಿಗಳ ಸಂಗೀತ ಸೇವಾ ಸಮಿತಿ(ರಿ) ಅಧ್ಯಕ್ಷರಾದ ಬಸವರಾಜ ಮೋತಿ ಮಾತನಾಡಿದರು. ಜಂಬಣ್ಣ ನಾಗಪ್ಪ ಸೇರಿದಂತೆ ಇತರರು ಇದ್ದರು. ಎಂ.ಗಂಗಾಧರ  ರಾಜ್ಯ ಸಮಿತಿ ಸದಸ್ಯರು  ಸಿಪಿಐ(ಎಂಎಲ್)ರೆಡ್ ಸ್ಟಾರ್.

ವರದಿ – ಎಮ್.ಗಂಗಾಧರ ಸಿಂಧನೂರು

Leave a Reply

Your email address will not be published. Required fields are marked *